Bihar Crime: ಬಿಹಾರದಲ್ಲೊಂದು ಮರ್ಯಾದಾ ಹತ್ಯೆ: ಪ್ರೀತಿ ವಿಷಯ ತಿಳಿದು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನೇ ಹತ್ಯೆ ಮಾಡಿದ ದಂಪತಿ
ಬಿಹಾರ(Bihar) ದ ಹಾಜಿಪುರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ, ಇಬ್ಬರು ಮಕ್ಕಳು ಪ್ರೀತಿ(Love) ಮಾಡುತ್ತಿರುವ ವಿಷಯ ತಿಳಿದ ಪೋಷಕರು ಕೋಪಗೊಂಡು ತಮ್ಮ 16, 18 ವರ್ಷದ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬಿಹಾರ(Bihar) ದ ಹಾಜಿಪುರದಲ್ಲಿ ಮರ್ಯಾದಾ ಹತ್ಯೆ ನಡೆದಿದೆ, ಇಬ್ಬರು ಮಕ್ಕಳು ಪ್ರೀತಿ(Love) ಮಾಡುತ್ತಿರುವ ವಿಷಯ ತಿಳಿದ ಪೋಷಕರು ಕೋಪಗೊಂಡು ತಮ್ಮ 16, 18 ವರ್ಷದ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಕ್ಕಳು ಮಲಗಿದ್ದಾಗ ಅವರನ್ನು ಹತ್ಯೆ ಮಾಡಿರುವ ಕುರಿತು ಪೋಷಕರು ಒಪ್ಪಿಕೊಂಡಿದ್ದಾರೆ, ಪೊಲೀಸರು ಅಪರಾಧ ಸ್ಥಳಕ್ಕೆ ಬಂದಾಗ ಎರಡು ಶವಗಳ ಬಳಿ ತಾಯಿ ರಿಂಕು ದೇವಿ ಕುಳಿತಿರುವುದು ಕಂಡುಬಂದಿದೆ.
ಪರಾರಿಯಾಗಿರುವ ಪತಿ ನರೇಶ್ ಬೈತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ತಾಯಿಯನ್ನು ವಿಚಾರಿಸಿದಾಗ ಇಬ್ಬರೂ ಹುಡುಗಿಯರು ಬೇರೆ ಬೇರೆ ಜಾತಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾರೆ. ಆಗಾಗ ಪಾಲಕರಿಗೆ ತಿಳಿಸದೆ ಮನೆ ಬಿಟ್ಟು ಹೋಗುತ್ತಿದ್ದ ಬಾಲಕಿಯರ ವರ್ತನೆ ಸಹಿಸಲಾರದೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮತ್ತಷ್ಟು ಓದಿ: ಇಷ್ಟ ಬಂದಂತೆ ಪ್ರೀತಿಸಿದ ಎಳಸು ಪ್ರೇಮಿಗಳ ದುರಂತ ಅಂತ್ಯ, ಜೊತೆಗೆ ಘೋರ ಮರ್ಯಾದಾ ಹತ್ಯೆಯ ಕಮಟು ವಾಸನೆ!
ಪ್ರಾಥಮಿಕ ತನಿಖೆಯ ನಂತರ ತಂದೆ-ತಾಯಿ ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ತನ್ನ ಪತಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದರು, ಬಳಿಕ ಇಬ್ಬೂ ಒಟ್ಟಾಗಿ ಮಕ್ಕಳನ್ನು ಕೊಂದಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.
ಇತರೆ ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ