ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2022 | 4:02 PM

ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದಿದೆ.

ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲು
ವಿದ್ಯಾರ್ಥಿಗಳು ಈಜಲು ಹೋಗಿದ್ದ ಕಾಲುವೆ
Follow us on

ಬಳ್ಳಾರಿ: ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು (students) ನೀರುಪಾಲಾಗಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದಿದೆ. ಯಶವಂತ್​​, ಅಂಜಿನಿ, ಗುರುರಾಜ್ ಮೃತ ವಿದ್ಯಾರ್ಥಿಗಳು. ಹೊಸಪೇಟೆಯ ಎಂಜಿ ನಗರ, ಗುಂಡಾ ಗ್ರಾಮ ಮತ್ತು ಕೊಪ್ಪಳದ ಹೊಸ ನಿಂಗಾಪುರದ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಕಾಲುವೆಯಲ್ಲಿ ಈಜಲು ಒಟ್ಟು ಆರು ವಿದ್ಯಾರ್ಥಿಗಳು ಹೋಗಿದ್ದರು. ಮೂವರು ವಾಪಾಸ್ ಬಂದ್ರೆ, ಇನ್ನೂ ಮೂವರು ನೀರು ಪಾಲಾಗಿದ್ದಾರೆ.  ಹೊಸಪೇಟೆಯ ವಿಜಯನಗರ ಕಾಲೇಜ್​ನಲ್ಲಿ ಇಬ್ಬರು ಪಿಯುಸಿ ಓದುತ್ತಿದ್ದರೆ, ಒಬ್ಬ ಪದವಿ ವಿದ್ಯಾರ್ಥಿಯಾಗಿದ್ದ.  ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬದುಕುಳಿದ ಮೂವರು ವಿದ್ಯಾರ್ಥಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.

ಗೌರಿಬಿದನೂರು ನಗರಸಭೆ ಅಧ್ಯಕ್ಷೆಯ ಪತಿ ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಸಭೆ ಅಧ್ಯಕ್ಷೆಯ ಪತಿ ಮತ್ತು ಇಬ್ಬರು ನಗರಸಭಾ ಸದಸ್ಯರನ್ನು ಬಂಧಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ರಾಜಾನುಕುಂಟೆ ರೆಸಾರ್ಟ್​ನಲ್ಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಪತಿ ಅನಂತರಾಜು, ನಗರಸಭಾ ಸದಸ್ಯರಾದ ಮಂಜುನಾಥ್, ಗೋಪಿ ಬಂಧಿತರು. 20 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಹಣ ಸಮೇತ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೇಔಟ್​​ ಅನುಮೋದನೆಗಾಗಿ ಬಡಾವಣೆ ಮಾಲೀಕರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್​ಪಿ ಪ್ರವೀಣ್​ ನೇತೃತ್ವದಲ್ಲಿ ಬಂಧನ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಳ್ಳತನ; ಕಡತ, ಕಂಪ್ಯೂಟರ್​ಗಳ ಕಳವು

ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ (drown) ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ದುರ್ಗಮ್ಮ(25), ಮಗ ಅಜ್ಜಯ್ಯ(6), ಪುತ್ರಿ ಸೇವಂತಿ(4) ಮೃತರು. ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳು. ಬೋಸೇದೇವರಹಟ್ಟಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಪತಿ ಮಹಾಂತೇಶ ಕರೆತಂದಿದ್ದರು. ಈ ವೇಳೆ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಮಹಾಂತೇಶ ಕರೆದುಕೊಂಡು ಹೋಗಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಕೆರೆ ನೀರಿಗೆ ತಳ್ಳಿ ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಪತಿ ಮಹಾಂತೇಶನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಿರೇಕೆರೆಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ದಳ ಶೋಧ ಆರಂಭಿಸಿದೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಓದನ್ನ ಅರ್ಧಕ್ಕೆ ನಿಲ್ಲಿಸಿ ಲವ್ವಲ್ಲಿ ಬಿದ್ದಿದ್ದ ಸುಂದರಿ, ಎರಡನೆಯವನ ಸಂಗದಲ್ಲಿದ್ದಳು! ಪ್ರೀತಿಯ ಅರಸಿ ಬಂದವಳು ನಿಗೂಢವಾಗಿ ಹೆಣವಾದಳು!

ನಾಪತ್ತೆಯಾಗಿದ್ದ ಗೃಹಿಣಿ ಸೃಷ್ಟಿ ಶವವಾಗಿ ಪತ್ತೆ

ಕಲಬುರಗಿ: ಡಿ.13ರಂದು ನಾಪತ್ತೆಯಾಗಿದ್ದ ಗೃಹಿಣಿ ಶವವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಗ್ರಾಮದಲ್ಲಿ ನಡೆದಿದೆ. ನಾವದಗಿ ಗ್ರಾಮದ ನಿವಾಸಿ ಸೃಷ್ಟಿ ಮಾರುತಿ ಮೃತ ಗೃಹಿಣಿ. ಡಿಗ್ರಿ 5ನೇ ಸೆಮಿಸ್ಟರ್​ನಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಡಿ.13ರಂದು ಕಾಲೇಜಿಗೆ ಹೋಗಿದ್ದಾಗ ನಾಪತ್ತೆಯಾಗಿದ್ದಳು. ಮೂರು ವರ್ಷಗಳ ಹಿಂದೆ ಮಾರುತಿ ಜೊತೆ ಸೃಷ್ಟಿ ವಿವಾಹವಾಗಿತ್ತು. ಇವತ್ತು ಬೆಣ್ಣೆತೋರಾ ಜಲಾಶಯದ ಹಿನ್ನೀರಿನಲ್ಲಿ ಸೃಷ್ಟಿ ಶವ ಪತ್ತೆಯಾಗಿದೆ. ಗೃಹಿಣಿ ಸೃಷ್ಟಿ ಸಾವಿನ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಹಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:48 pm, Sat, 17 December 22