ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ರ ನಕಲಿ ಪಾಸ್ಪೋರ್ಟ್ ಇಟ್ಟುಕೊಂಡಿದ್ದ ಮೂವರು ವಂಚಕರು ಉತ್ತರ ಪ್ರದೇಶ ಪೊಲೀಸ್ ಬಲೆಗೆ!

ಐಶ್ವರ್ಯ ಹೆಸರಿನ ನಕಲಿ ಪಾಸ್ಪೋರ್ಟ್ ನಲ್ಲಿ ಅವರ ಪೋಟೋ ಇದ್ದು ಅವರ ಜನ್ಮ ಸ್ಥಳ ಗುಜರಾತಿನ ಭಾವನಗರ ಎಂದು ನಮೂದಿಸಲಾಗಿದೆ. ಅವರ ಜನ್ಮ ದಿನಾಂಕ ಏಪ್ರಿಲ್ 18, 1990 ಅಂತ ತೋರಿಸಲಾಗಿದೆ.

ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ರ ನಕಲಿ ಪಾಸ್ಪೋರ್ಟ್ ಇಟ್ಟುಕೊಂಡಿದ್ದ ಮೂವರು ವಂಚಕರು ಉತ್ತರ ಪ್ರದೇಶ ಪೊಲೀಸ್ ಬಲೆಗೆ!
ಐಶ್ವರ್ಯ ರೈ ಬಚ್ಚನ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 17, 2022 | 12:43 PM

ಮಾಜಿ ವಿಶ್ವಸುಂದರಿ, ಪ್ರಖ್ಯಾತ ಚಿತ್ರನಟಿ ಮತ್ತು ಬಾಲಿವುಡ್ ಕಂಡ ಮಹಾನ್ ನಟ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ (Aishwarya Rai Bachchan) ಅವರು ನಕಲಿ ಪಾಸ್ಪೋರ್ಟ್ (fake passport) ಇಟ್ಟುಕೊಂಡಿದ್ದ ಮೂವರು ವಂಚಕರನ್ನು (fraudsters) ಉತ್ತರ ಪ್ರದೇಶದ ಪೊಲೀಸರು ಗ್ರೇಟರ್ ನೋಯಿಡಾದಲ್ಲಿ ಅರೆಸ್ಟ್ ಮಾಡಿದ್ದಾರೆ. ತಾರೆಯ ಪಾಸ್ಪೋರ್ಟ್ ನಿಂದ ಧೂರ್ತರು ಏನು ಮಾಡಬೇಕೆಂದುಕೊಂಡಿದ್ದರು, ಅದನ್ನು ಅವರು ಮಾಡಿಸಿಕೊಂಡಿದ್ದು ಅಂತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನವಭಾರತ್ ಟೈಮ್ಸ್ ಪತ್ರಿಕೆಯ ವರದಿಯ ಪ್ರಕಾರ ಬಂಧಿತ ವಂಚಕರ ವಿರುದ್ಧ ಹಲವಾರು ಮೋಸ ಮತ್ತು ವಂಚನೆ ಪ್ರಕರಣಗಳು ದಾಖಲಾಗಿದ್ದು ವಿವಾಹ ಮತ್ತು ಡೇಟಿಂಗ್ ಌಪ್ ಗಳ ಮೂಲಕ ನೂರಾರು ಜನರಿಂದ ಸುಮಾರು ರೂ. 1.8 ಕೋಟಿಯಷ್ಟು ಹಣ ಬಾಚಿಕೊಂಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಒಬ್ಬ ನಿವೃತ್ತ ಕರ್ನಲ್ ಇವರೊಂದಿಗೆ ಶಾಮೀಲಾಗಿದ್ದಾನೆ.

ಐಶ್ವರ್ಯ ಹೆಸರಿನ ನಕಲಿ ಪಾಸ್ಪೋರ್ಟ್ ನಲ್ಲಿ ಅವರ ಪೋಟೋ ಇದ್ದು ಅವರ ಜನ್ಮ ಸ್ಥಳ ಗುಜರಾತಿನ ಭಾವನಗರ ಎಂದು ನಮೂದಿಸಲಾಗಿದೆ. ಅವರ ಜನ್ಮ ದಿನಾಂಕ ಏಪ್ರಿಲ್ 18, 1990 ಅಂತ ತೋರಿಸಲಾಗಿದೆ. ತನಿಖೆಯ ಸಮಯದಲ್ಲಿ ಪೊಲೀಸರು ವಂಚಕರಿಂದ 3,000 ಡಾಲರ್, ಸುಮಾರು ರೂ. 11 ಕೋಟಿ ಮೌಲ್ಯದ ಖೋಟಾ ನೋಟು, 10,500 ಪೌಂಡ್ಸ್ ಮತ್ತು ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂಓದಿ:  ಪಾಶ್ಚಾತ್ಯ ದೇಶಗಳ ಆರ್ಥಿಕ ಹಿಂಜರಿತ ಭಾರತಕ್ಕೆ ಹೂಡಿಕೆದಾರರನ್ನು ಸೆಳೆಯಲು ಅವಕಾಶ; ನಿರ್ಮಲಾ ಸೀತಾರಾಮನ್

ಬೇರೆ ಯಾವ್ಯಾವ ಸೆಲಿಬ್ರಿಟಿಗಳ ಖೊಟ್ಟಿ ಪಾಸ್ಪೋರ್ಟ್ ಗಳನ್ನು ಈ ಗ್ಯಾಂಗ್ ತಯಾರಿಸಿ ಬಳಸಿದೆ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಬ್ಬಾಟ್ ಫಾರ್ಮಾಸ್ಯೂಟಿಕಲ್ಸ್ ಸೇರಿದಂತೆ ಇನ್ನೂ ಹಲಾವಾರು ಖ್ಯಾತ ಕಂಪನಿಗಳ ಪ್ರತಿನಿಧಿಯ ಸೋಗಿನಲ್ಲಿ ವಂಚಕರು ಲಕ್ಷಗಟ್ಟಲೆ ಹಣ ಪೀಕಿರುವ ಮಾಹಿತಿ ಪೊಲೀಸ್ ಅಧಿಕಾರಿಗಳಿಗೆ ಲಭ್ಯವಾಗಿದೆ. ಸ್ತನಗಳ ಕ್ಯಾನ್ಸರ್ ಔಷಧಿ ತಯಾರಿಸಲು ಕೋಲಾನಟ್ ಮಾರುವ ನೆಪದಲ್ಲಿ ಪೊಲೀಸರು ಒಬ್ಬ ನಿವೃತ್ತ ಕರ್ನಲ್ ನನ್ನು ಬಲೆಗೆ ಬೀಳಿಸಿದ್ದಾರೆ. ವಂಚಕರನ್ನು ಬಂಧಿಸಿದಾಗ ಅವರಲ್ಲಿ ಯಾವುದೇ ಪಾಸ್ಪೋರ್ಟ್ ಅಥವಾ ವೀಸಾ ಇರಲಿಲ್ಲ. ಅವರು ಯಾಕೆ ನಕಲಿ ಪಾಸ್ಪೋರ್ಟ್ ತಯಾರಿಸಿಟ್ಟುಕೊಳ್ಳುತ್ತಿದ್ದರು ಅನ್ನೋದು ಇನ್ನೂ ಗೊತ್ತಾಗಿಲ್ಲ.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sat, 17 December 22