ಹುಬ್ಬಳ್ಳಿ, ಜನವರಿ 13: ನಗರದ ದುರ್ಗದ ಬೈಲ್ನಲ್ಲಿ ಟೀ ವ್ಯಾಪಾರಸ್ಥರಾಗಿದ್ದ ಅಶೋಕ ಬ್ಯಾಹಟ್ಟಿಯನ್ನು ಸ್ಲೋ ಪಾಯ್ಸನ್ (slow poison) ಕೊಟ್ಟು ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆ ಮೂಲಕ ಉದ್ಯಮಿಯ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಶೋಕ ಮದುವೆಯಾಗಿದ್ದರೂ ಮೇರಿ ಎಂಬ ಮಹಿಳೆಯೊಂದಿಗೆ ಎರಡನೇ ವಿವಾಹ ಆಗಿದ್ದ. ಆಸ್ತಿಗಾಗಿ ಮೇರಿನೇ ಸ್ಲೋ ಪಾಯ್ಸನ್ ಕೊಟ್ಟು ಹತ್ಯೆ ಮಾಡಿರುವುದಾಗಿ ಅಶೋಕ ಬ್ಯಾಹಟ್ಟಿ ಪುತ್ರ ಆದಿತ್ಯ ಆರೋಪ ಮಾಡಿದ್ದಾರೆ.
ಕೋಟ್ಯಾಂತರ ರೂಪಾಯಿ ಒಡೆಯನಾಗಿರುವ ಅಶೋಕ ಬ್ಯಾಹಟ್ಟಿ, ಆಸ್ತಿಗಾಗಿ ಮೇರಿ ನನ್ನ ತಂದೆಯನ್ನು ಸಾಯಿಸಿದ್ದಾರೆ ನಮಗೆ ನ್ಯಾಯ ಬೇಕು ಎಂದು ಅಶೋಕ ಮಗ ಆದಿತ್ಯ ಹೇಳಿದ್ದಾರೆ. ಇದೀಗ ಅಶೋಕ ಬ್ಯಾಹಟ್ಟಿ ಮೃತದೇಹ ಕೊಡಲು ನಿರಾಕರಿಸಿದ್ದಾರೆ. ಅಶೋಕ ಪರವಾಗಿ ಬಂದ ಸಂಬಂಧಿಕರೊಂದಿಗೆ ಮೇರಿ ಹಾಗೂ ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಫ್ಐಆರ್ ದಾಖಲು
ಕಳೆದ ಲಾಕ್ ಡೌನ್ನಲ್ಲಿ ಅಶೋಕ್ಗೆ ಮೇರಿ ಪರಿಚಯವಾಗಿದೆ. ಅಶೋಕ ನನ್ನು ಕ್ರಿಶ್ಚಿಯನ್ಗೆ ಕನ್ವರ್ಟ್ ಮಾಡಿದ್ದಾಳೆ. ಮಕ್ಕಳನ್ನು ಕನ್ವರ್ಟ್ ಮಾಡಲು ಯತ್ನಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಮೇರಿ, ಕಳೆದ 16 ವರ್ಷಗಳಿಂದ ನಾನು ಅವರ ಜೊತೆ ಇದ್ದೆ. ಅಶೋಕ ನಾನು ಚಹಾಪುಡಿ ವ್ಯಾಪಾರ ಮಾಡುತ್ತಿದ್ದೇವು. ಐದು ವರ್ಷದಿಂದ ನಾನು ಅಶೋಕ ಮದುವೆಯಾಗಿದ್ದೇವೆ. 16 ವರ್ಷದಿಂದ ಜೀವನ ಮಾಡಿದರೆ, ನಾನು ಯಾವ ಆಸ್ತಿ ಕಬಳಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಾವೇರಿ: ಹಾನಗಲ್ ಗ್ಯಾಂಗ್ ರೇಪ್ ಬೆನ್ನಲ್ಲೇ ಮುಸ್ಲಿಂ ಯುವಕನಿಂದ ಹಿಂದೂ ಯುವತಿಯ ಕಿಡ್ನಾಪ್!
ಮಕ್ಕಳು ಇದೀಗ ಆಸ್ತಿಗಾಗಿ ಬಂದಿದ್ದಾರೆ. ಅಶೋಕ್ಗೆ ಕೊರೊನಾ ಆಗಿತ್ತು, ಆವಾಗ ಮನೆಯವರು ಬಿಟ್ಟಿದ್ದಾರೆ. ಆದಿತ್ಯ ನಮ್ಮ ಮನೆಯೊಳಗೆ ಬೆಳೆದಿದ್ದಾನೆ. ನಾವು ಯಾರನ್ನೂ ಕನ್ವರ್ಟ್ ಮಾಡಿಲ್ಲ ಎಂದಿದ್ದಾರೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.