ಗಂಡ ಹೆಂಡತಿ ಚೀಟಿ ವ್ಯವಹಾರದಲ್ಲಿ ಖೋತಾ ಆಯ್ತು ಸಾರ್ವಜನಿಕರ ಹಣ!
ಚೀಟಿ ಹೆಸರಲ್ಲಿ ದಂಪತಿಗಳು ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಚೀಟಿ ಹೆಸರಲ್ಲಿ ನೂರಾರು ಜನರಿಗೆ ಮೋಸವಾದ ಘಟನೆಯೊಂದು ಹೊಸಕೆರೆಹಳ್ಳಿ ದತ್ತಾತ್ರೆಯ ನಗರದಿಂದ ವರದಿಯಾಗಿದೆ. ನೀಲಾವತಿ ಮತ್ತು ಜ್ಞಾನೇಶ್ ಎಂಬ ದಂಪತಿಗಳು ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾರೆ. ದತ್ತಾತ್ರೆಯ ನಗರದಲ್ಲಿ ಚೀಟಿ ವ್ಯವಹಾರ ನಡೆಸುತಿದ್ದ ನೀಲಾವತಿ ಚೀಟಿ ಮುಗಿದರೂ ಸಹ ಮತ್ತೆ ಬಡ್ಡಿ ಕೊಡುವುದಾಗಿ ಜನರನ್ನು ನಂಬಿಸಿದ್ದರು ಆ ಮೂಲಕ ಜನರಿಗೆ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿದ್ದರು.
ಚೀಟಿ ಮುಗಿದ ನಂತರವೂ ಬಡ್ಡಿ ಕೊಡುವುದಾಗಿ ಜನರನ್ನು ನಂಬಿಸಿ ಬಳಿಕ ಕಳೆದ ಆರು ತಿಂಗಳಿಂದ ಹಣ ನೀಡದೆ ಪರಾರಿಯಾಗಿದ್ದರು. ನೀಲಾವತಿಯ ಸ್ವಂತ ಮನೆ ಇದೆ ಎನ್ನುವ ಕಾರಣಕ್ಕೆ ಚೀಟಿ ಹಾಕಿದ್ದ ಸಾರ್ವಜನಿಕರು ತಾಳ್ಮೆಯಿಂದ ಇದ್ದರು. ಆದರೆ, ಈಗ ಆಕೆ ಮನೆಯನ್ನು ಮಾರಾಟ ಮಾಡಿರುವ ವಿಚಾರ ತಿಳಿದುಬಂದಿದ್ದು, ಮೋಸಕ್ಕೆ ಒಳಗಾದವರು ನೀಲಾವತಿಯನ್ನು ಹುಡುಕಿ ಠಾಣೆಗೆ ಕರೆತಂದಿದ್ದಾರೆ.
ನೀಲಾವತಿ ಮತ್ತು ಜ್ಞಾನೇಶ್ರನ್ನು ಗಿರಿನಗರ ಠಾಣೆಗೆ ಕರೆತಂದಿರುವ ಜನರು ತಮ್ಮ ಹಣವನ್ನು ವಾಪಸ್ಸು ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಡ ಮಕ್ಕಳ ಹಸಿವು ನೀಗಿಸುತ್ತಿದ್ದ ಅಕ್ಷಯ ಪಾತ್ರೆಯಲ್ಲಿ ನಡೀತಾ ಅವ್ಯವಹಾರ? ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ..
Published On - 6:39 pm, Sun, 13 December 20