ಅನುಮಾನಾಸ್ಪದವಾಗಿ ಮಹಿಳೆ ಸಾವಿಗೆ ಟ್ವಿಸ್ಟ್: ಪತ್ನಿ ಕೊಲೆಗೆ ಪತಿಯೇ ನೀಡಿದ್ದ ಸುಪಾರಿ!
ಬೆಂಗಳೂರು: ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಶನಿವಾರ ಮನೆಯಲ್ಲೇ ಅನುಮಾನಾಸ್ಪದವಾಗಿ ವಿನುತಾ(34) ಮೃತಪಟ್ಟಿದ್ದಳು. ಇದೀಗ ಪತ್ನಿ ಕೊಲೆಗೆ ಪತಿಯೇ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ವಿನುತಾ ಪತಿ ನರೇಂದ್ರ ಬಾಬು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 2013ರಿಂದಲೂ ಪತಿಯೊಂದಿಗೆ ವಿನುತಾ ಮನಸ್ತಾಪ ಹೊಂದಿದ್ದಳು. ಪತಿಯ ವಿಚ್ಛೇದನ ಅರ್ಜಿಗೂ ಸಹ ವಿನುತಾ ತಡೆ ತಂದಿದ್ದಳು. 15ಕ್ಕೂ ಅಧಿಕ ಬಾರಿ ವೈಯಾಲಿಕಾವಲ್ ಠಾಣೆಯಲ್ಲಿ ದಂಪತಿ ಪರಸ್ಪರ ದೂರು […]
ಬೆಂಗಳೂರು: ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಶನಿವಾರ ಮನೆಯಲ್ಲೇ ಅನುಮಾನಾಸ್ಪದವಾಗಿ ವಿನುತಾ(34) ಮೃತಪಟ್ಟಿದ್ದಳು. ಇದೀಗ ಪತ್ನಿ ಕೊಲೆಗೆ ಪತಿಯೇ ಸುಪಾರಿ ನೀಡಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ವಿನುತಾ ಪತಿ ನರೇಂದ್ರ ಬಾಬು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2013ರಿಂದಲೂ ಪತಿಯೊಂದಿಗೆ ವಿನುತಾ ಮನಸ್ತಾಪ ಹೊಂದಿದ್ದಳು. ಪತಿಯ ವಿಚ್ಛೇದನ ಅರ್ಜಿಗೂ ಸಹ ವಿನುತಾ ತಡೆ ತಂದಿದ್ದಳು. 15ಕ್ಕೂ ಅಧಿಕ ಬಾರಿ ವೈಯಾಲಿಕಾವಲ್ ಠಾಣೆಯಲ್ಲಿ ದಂಪತಿ ಪರಸ್ಪರ ದೂರು ಸಹ ದಾಖಲಿಸಿದ್ದರು. ಹೀಗಾಗಿ ಪತ್ನಿ ಕಾಟಕ್ಕೆ ಬೇಸತ್ತು ಪತಿಯೇ ಕೊಲೆಗೆ ಸುಪಾರಿ ನೀಡಿದ್ದಾನೆ ಎನ್ನಲಾಗಿದೆ.
ಡಿ.21ರಂದು ಬಲವಾದ ಆಯುಧದಿಂದ ತಲೆ ಮೇಲೆ ಹೊಡೆದು ವಿನುತಾ ಕೊಲೆಗೈಯ್ಯಲಾಗಿತ್ತು. ಈ ಬಗ್ಗೆ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಪತಿ ನರೇಂದ್ರ ಬಾಬು, ಜಗನ್ನಾಥ ಹಾಗೂ ಪ್ರಶಾಂತ್ರನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.