ಮೈಸೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಸ್ನೇಹಿತನ ನೆರವಿನಿಂದ ಪತಿಯನ್ನೇ ಹತ್ಯೆಗೈದ ಘಟನೆ ನಂಜನಗೂಡು ತಾಲೂಕಿನ ಅಡಹಳ್ಳಿಯಲ್ಲಿ ನಡೆದಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ನೇಹಿತನಾದ ಚಲುವರಾಜ್ ನೆರವಿನಿಂದ ಡಿ.7ರಂದು ಪತಿ ಶಿವರಾಜ್ಗೆ ಕಂಠಪೂರ್ತಿ ಕುಡಿಸಿ ಕೈಕಾಲು ಕಟ್ಟಿ ಹಾಕಿ ಹತ್ಯೆ ನಡೆಸಲಾಗಿತ್ತು. ಡಿ. 16ರಂದು ಅಡಹಳ್ಳಿಯ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪತಿ ಶಿವರಾಜ್ (29) ನಾಪತ್ತೆಯಾಗಿ ಒಂದು ವಾರವಾದರೂ ಆತನ ಪತ್ನಿ ನಾಪತ್ತೆ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ನಂಜನಗೂಡು ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ಆ ವೇಳೆ ಪತ್ನಿ ಸೌಮ್ಯಾ ನಿಜ ಬಣ್ಣ ಬಯಲಾಗಿದೆ. ಪ್ರಿಯತಮೆ ಮಾತು ಕೇಳಿ ಕೊಲೆ ಮಾಡಿದ ಪ್ರಿಯಕರ ಯೋಗೇಶ್ ಹಾಗೂ ಸ್ನೇಹಿತ ಚಲುವರಾಜ್ ಇದೀಗ ಜೈಲು ಪಾಲಾಗಿದ್ದಾರೆ.
ಆಟೋ ಡ್ರೈವರ್ನೊಂದಿಗೆ ಅಕ್ರಮ ಸಂಬಂಧ:
ಸೌಮ್ಯಾಳೊಂದಿಗೆ ಶಿವರಾಜ್ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದ. ಶುಂಠಿ ಕೆಲಸಕ್ಕೆ ಪ್ರತಿದಿನ ಆಟೋದಲ್ಲಿ ತೆರಳುತ್ತಿದ್ದ ಸೌಮ್ಯ ಆಟೋ ಡ್ರೈವರ್ ಯೋಗೇಶ್ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು. ಈ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆಗಳು ನಡೆಯುತ್ತಿತ್ತು, ಶುಂಠಿ ಕೆಲಸಕ್ಕೆ ಹೋಗದಂತೆಯೂ ಪತ್ನಿಗೆ ತಡೆ ಒಡ್ಡಿದ್ದ. ಇದೇ ಕಾರಣಕ್ಕೆ ತನ್ನ ಗಂಡನನ್ನೇ ಹತ್ಯೆಗೈದಿದ್ದಾಳೆಂದು ತಿಳಿದುಬಂದಿದೆ.
ಮೈದುನನ ಜೊತೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿ: ಪತಿಯನ್ನೇ ಕೊಲೆ ಮಾಡಿದ ಪತ್ನಿ