ಮೈಸೂರು: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಇರಿದು ಕೊಂದ ಭಾವ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 08, 2024 | 5:38 PM

ಪ್ರತ್ಯೇಕ ಘಟನೆ: ಮೈಸೂರಿನ ಕುವೆಂಪುನಗರ(Kuvempu Nagar)ದ ಐ ಬ್ಲಾಕ್​ನಲ್ಲಿ ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಭಾವನೇ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ. ಇತ್ತ ಬಸವನಬಾಗೇವಾಡಿ ತಾಲೂಕಿನ ಗುಳಬಾಳ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೈಸೂರು: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಇರಿದು ಕೊಂದ ಭಾವ
ಮೃತ ವ್ಯಕ್ತಿ
Follow us on

ಮೈಸೂರು, ಜೂ.08: ಸಹೋದರಿ ಪರ ನ್ಯಾಯ ಕೇಳಲು ತೆರಳಿದ್ದವನಿಗೆ ಭಾವನೇ ಚಾಕುವಿನಿಂದ ಇರಿದು ಕೊಂದ ಘಟನೆ ಮೈಸೂರಿನ ಕುವೆಂಪುನಗರ(Kuvempu Nagar)ದ ಐ ಬ್ಲಾಕ್​ನಲ್ಲಿ ನಡೆದಿದೆ. ಅಭಿಷೇಕ್(27) ಸಾವನ್ನಪ್ಪಿದ ಯುವಕ. ಬಾಮೈದನಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಆರೋಪಿ ಭಾವ ರವಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕುವೆಂಪುನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಗುಳಬಾಳ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ದುಷ್ಕರ್ಮಿಗಳು ಯುವಕನನ್ನು ಕೊಂದು ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಜಮೀನಿನಲ್ಲಿ ಮಹಾಂತೇಶ ಬಿರಾದಾರ(25) ಎಂಬುವವರ ಮೃತದೇಹ ಪತ್ತೆಯಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತನ ಸಹೋದರ ಮಂಜುನಾಥ್​, ಮಹಾಂತೇಶನನ್ನು ಕೊಂದಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಬಸವನಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಎರಡು ಸಾವಿರ ಸಾಲಕ್ಕೆ ನಡೆದೆ ಹೋಯ್ತು ಕೊಲೆ; ಸ್ನೇಹಿತನನ್ನ ಕೊಂದು ಅಪಘಾತದ ಕಥೆ ಕಟ್ಟಿದರು

ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಓರ್ವ ಸಾವು

ಕೋಲಾರ: ಮಾಲೂರು ತಾಲೂಕಿನ ಅಂಚೆ ಮುಸ್ಕೂರು ಗ್ರಾಮದ ಬಳಿ ಆಟೋ ಪಲ್ಟಿಯಾಗಿ ವೃದ್ಧನೋರ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನುಳಿದ 6 ಜನರಿಗೆ ಗಾಯವಾಗಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಟ್ಟಕೋಡಿ ಗ್ರಾಮದ ಚಿನ್ನಪ್ಪ(70) ಮೃತ ದುರ್ದೈವಿ. ಘಟನೆಗೆ ಕುಡಿದು ವಾಹನ ಚಾಲನೆ ಮಾಡಿದ್ದೇ ಕಾರಣ ಎನ್ನಲಾಗಿದೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ