ನಶೆ ನಂಟಿನ ಟೆನ್ಷನ್​ನಲ್ಲಿದ್ದ ಸ್ಟಾರ್​ಗಳಿ​ಗೆ ರಿಲೀಫ್! ಯಾಕೆ ಗೊತ್ತಾ?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ಎದುರಿಸಿದ್ದ ಸ್ಯಾಂಡಲ್​ವುಡ್ ನಟ, ಸೀರಿಯಲ್ ಸ್ಟಾರ್​ಗಳಿ​ಗೆ ರಿಲೀಫ್ ಸಿಕ್ಕಿದೆ. ಟೆನ್ಷನ್​ನಲ್ಲಿದ್ದ ನಟ ಲೂಸ್ ಮಾದ ಸೇರಿ, ಧಾರಾವಾಹಿ ಕಲಾವಿದರು ಈಗ ನಿರಾಳರಾಗಿದ್ದಾರೆ. CCB, ISD ಮಧ್ಯೆ ಸಂಘರ್ಷ ಬೇಡವೆಂದು.. ಐಎಸ್​ಡಿ ನಡೆಸುತ್ತಿದ್ದ ಡ್ರಗ್ಸ್ ದಂಧೆ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಸಿಸಿಬಿ ಮತ್ತು ಐಎಸ್​ಡಿ ಸಂಸ್ಥೆಗಳು ಡ್ರಗ್ಸ್ ದಂಧೆಯ ತನಿಖೆ ನಡೆಸುತಿದ್ವು. ಆದರೆ ಸಿಸಿಬಿ, ಐಎಸ್​ಡಿ ಎರಡೂ ವಿಭಾಗದ ಮಧ್ಯೆ ಸಂಘರ್ಷ ಉಂಟಾಗಿದೆ. ಅಲ್ಲದೆ ಪೊಲೀಸ್ ವಲಯದಲ್ಲೂ ಈ ವಿಚಾರ […]

ನಶೆ ನಂಟಿನ ಟೆನ್ಷನ್​ನಲ್ಲಿದ್ದ ಸ್ಟಾರ್​ಗಳಿ​ಗೆ ರಿಲೀಫ್! ಯಾಕೆ ಗೊತ್ತಾ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 25, 2020 | 1:03 PM

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ತನಿಖೆ ಎದುರಿಸಿದ್ದ ಸ್ಯಾಂಡಲ್​ವುಡ್ ನಟ, ಸೀರಿಯಲ್ ಸ್ಟಾರ್​ಗಳಿ​ಗೆ ರಿಲೀಫ್ ಸಿಕ್ಕಿದೆ. ಟೆನ್ಷನ್​ನಲ್ಲಿದ್ದ ನಟ ಲೂಸ್ ಮಾದ ಸೇರಿ, ಧಾರಾವಾಹಿ ಕಲಾವಿದರು ಈಗ ನಿರಾಳರಾಗಿದ್ದಾರೆ.

CCB, ISD ಮಧ್ಯೆ ಸಂಘರ್ಷ ಬೇಡವೆಂದು.. ಐಎಸ್​ಡಿ ನಡೆಸುತ್ತಿದ್ದ ಡ್ರಗ್ಸ್ ದಂಧೆ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಸಿಸಿಬಿ ಮತ್ತು ಐಎಸ್​ಡಿ ಸಂಸ್ಥೆಗಳು ಡ್ರಗ್ಸ್ ದಂಧೆಯ ತನಿಖೆ ನಡೆಸುತಿದ್ವು. ಆದರೆ ಸಿಸಿಬಿ, ಐಎಸ್​ಡಿ ಎರಡೂ ವಿಭಾಗದ ಮಧ್ಯೆ ಸಂಘರ್ಷ ಉಂಟಾಗಿದೆ. ಅಲ್ಲದೆ ಪೊಲೀಸ್ ವಲಯದಲ್ಲೂ ಈ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ತನಿಖೆಯ ದಿಕ್ಕು ತಪ್ಪುತ್ತಿದೆ ಅನ್ನೋ ಬಗ್ಗೆ ಮಾತುಕತೆ ಆಗಿತ್ತು.

ಹೀಗಾಗಿ, ಮಧ್ಯೆ ಪ್ರವೇಶಿಸಿದ್ದ ಪೊಲೀಸ್ ಮಹಾನಿರ್ದೇಶಕರು ಎರಡೂ ವಿಭಾಗದ ಮುಖ್ಯಸ್ಥರ ಜತೆ ಚರ್ಚೆ ನಡೆಸಿದ್ದಾರೆ. ಸಿಸಿಬಿ ತನಿಖೆ ಮುಂದುವರಿಸುವಂತೆ ಪ್ರವೀಣ್ ಸೂದ್ ಸಲಹೆ ನೀಡಿದ್ದಾರೆ. ಇದ್ರಿಂದಾಗಿ ಐಎಸ್​ಡಿ ಅಧಿಕಾರಿಗಳು ತನಿಖೆ ಸ್ಥಗಿತಗೊಳಿಸಿದ್ದಾರೆ.

ಹೀಗಾಗಿ ನಟ ಲೂಸ್ ಮಾದ, ಮಾಜಿ ಕ್ರಿಕೆಟಿಗ ಅಯ್ಯಪ್ಪ, ರಶ್ಮಿತಾ ಚೆಂಗಪ್ಪ ಸೇರಿ ಹಲವು ಸೀರಿಯಲ್ ಸ್ಟಾರ್ಸ್​ಗಳಿಗೆ ರಿಲೀಫ್ ಸಿಕ್ಕಿದೆ. ನಶೆ ವ್ಯೂಹದಲ್ಲಿ ಸಿಲುಕಿದ್ದ ರಾಜಕಾರಣಿಗಳ ಮಕ್ಕಳಿಗೂ ರಿಲೀಫ್ ದೊರೆತಿದೆ.