ಪ್ರಿಯಕರನ ಜೊತೆ ಸೇರಿ ಜೈಪುರದ ಮಹಿಳೆಯಿಂದ ಪತಿಯ ಕೊಲೆ; ಬೈಕ್‌ನಲ್ಲಿ ಶವ ಸಾಗಿಸುವ ವಿಡಿಯೋ ವೈರಲ್

|

Updated on: Mar 20, 2025 | 4:54 PM

ಜೈಪುರದಲ್ಲಿ ಧನ್ನಲಾಲ್ ಸೈನಿ ಎಂಬ ತರಕಾರಿ ವ್ಯಾಪಾರಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದ. ಈ ಹಿನ್ನೆಲೆಯಲ್ಲಿ ಆತನ ಹೆಂಡತಿ ತನ್ನ ಪ್ರೇಮಿಯ ಜೊತೆ ಸೇರಿ ತನ್ನ ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಆತನ ಶವಕ್ಕೆ ಬೆಂಕಿ ಹಚ್ಚಿದ್ದಾರೆ. ಅವರಿಬ್ಬರೂ ಬೈಕಿನಲ್ಲಿ ಆತನ ಹೆಣ ಸಾಗಿಸುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತರಕಾರಿ ವ್ಯಾಪಾರಿ ಧನ್ನಲಾಲ್ ಸೈನಿ ಎಂಬಾತನನ್ನು ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಿಯಕರನ ಜೊತೆ ಸೇರಿ ಜೈಪುರದ ಮಹಿಳೆಯಿಂದ ಪತಿಯ ಕೊಲೆ; ಬೈಕ್‌ನಲ್ಲಿ ಶವ ಸಾಗಿಸುವ ವಿಡಿಯೋ ವೈರಲ್
Jaipur Couple
Follow us on

ಜೈಪುರ, ಮಾರ್ಚ್ 20: ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಮತ್ತು ಆಕೆಯ ಪ್ರೇಮಿ ಕೊಲೆ ಮಾಡಿರುವ ಘಟನೆ ಜೈಪುರದಲ್ಲಿ ನಡೆದಿದೆ. ಬಳಿಕ ಬೈಕಿನಲ್ಲಿ ಆತನ ಹೆಣವನ್ನು ಸಾಗಿಸಿದ್ದಾರೆ. ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ಜೈಪುರದಲ್ಲಿ ಮಹಿಳೆ ಮತ್ತು ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ತರಕಾರಿ ವ್ಯಾಪಾರಿ ಧನ್ನಲಾಲ್ ಸೈನಿ ಎಂಬಾತನನ್ನು ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ನಂತರ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಪತ್ನಿ ಗೋಪಾಲಿ ದೇವಿ ಕಳೆದ 5 ವರ್ಷಗಳಿಂದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದೀನದಯಾಳ್ ಜೊತೆ ಪ್ರಣಯ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಧನ್ನಲಾಲ್ ಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ತಿಳಿದುಬಂದಿತ್ತು. ಮಾರ್ಚ್ 15 ರಂದು, ಧನ್ನಲಾಲ್ ತನ್ನ ಹೆಂಡತಿ ಕಾಣದ ಕಾರಣದಿಂದ ಸಂಗನೇರ್‌ನ ಕಾಶಿಡೋ ವಾಲಿ ಗಲಿಯಲ್ಲಿರುವ ದೀನದಯಾಳ್ ಅವರ ಅಂಗಡಿ ಶ್ಯಾಮ್ ಫ್ಯಾಷನ್‌ಗೆ ಹೋದರು. ಅಲ್ಲಿ, ಗೋಪಾಲಿ ದೇವಿ ದೀನದಯಾಳ್ ಜೊತೆ ಕೆಲಸ ಮಾಡುವುದನ್ನು ಅವರು ನೋಡಿದರು.

ಇದನ್ನೂ ಓದಿ: ಬಿಜ್ನೋರ್ ವ್ಯಸನ ಮುಕ್ತಿ ಕೇಂದ್ರದಲ್ಲಿ ಇಬ್ಬರಿಂದ ಯುವಕನ ಕತ್ತು ಹಿಸುಕಿ ಕೊಲೆ

ಇದೇ ವಿಷಯಕ್ಕೆ ದಂಪತಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಾದ ಬಳಿಕ ಗೋಪಾಲಿ ದೇವಿ ಮತ್ತು ದೀನದಯಾಳ್ ಆಕೆಯ ಗಂಡನನ್ನು ಕೊಲ್ಲಲು ಸಂಚು ರೂಪಿಸಿದರು. ಧನ್ನಲಾಲ್ ಅವರನ್ನು ಆ ಅಂಗಡಿಯ ಮೇಲಿರುವ ಮತ್ತೊಂದು ಅಂಗಡಿಗೆ ಕರೆದೊಯ್ದು ಮೊದಲು ಕಬ್ಬಿಣದ ಪೈಪ್‌ನಿಂದ ತಲೆಗೆ ಹೊಡೆದರು. ಅವರು ತೀವ್ರವಾಗಿ ಗಾಯಗೊಂಡ ನಂತರ ಧನ್ನಲಾಲ್ ಅವರ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿ ಕೊಂದರು.

ನಂತರ ಗೋಪಾಲಿ ದೇವಿ ಮತ್ತು ದೀನದಯಾಳ್ ದೇಹವನ್ನು ಚೀಲದಲ್ಲಿ ತುಂಬಿಸಿ ದೀನದಯಾಳ್ ಅವರ ಬೈಕ್‌ನಲ್ಲಿ ಭೇರುಜಿ ದೇವಸ್ಥಾನದ ಬಳಿಯ ನಿರ್ಜನ ಪ್ರದೇಶಕ್ಕೆ ಸಾಗಿಸಿದರು. ಧನ್ನಲಾಲ್ ಅವರ ಗುರುತನ್ನು ಮರೆಮಾಡಲು ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಅವರು ಆ ಶವಕ್ಕೆ ಬೆಂಕಿ ಹಚ್ಚಿದರು. ನಂತರ ಮಹಿಳೆ ಮತ್ತು ಪ್ರೇಮಿ ಜೈಪುರದಿಂದ ಪರಾರಿಯಾಗಲು ಯೋಜನೆ ರೂಪಿಸಿದರು. ಆದರೆ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳಿಬ್ಬರನ್ನೂ ಬಂಧಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ