ಜಪಾನಿನ ಸಗಾವಾ ನೆದರ್ಲ್ಯಾಂಡ್ಸ್ ಯುವತಿಯನ್ನು ಪ್ಯಾರಿಸ್​ನಲ್ಲಿ ಕೊಂದು ತಿಂದರೂ ಶಿಕ್ಷೆಯಾಗಲಿಲ್ಲ, ಸ್ವದೇಶಕ್ಕೆ ವಾಪಸ್ಸಾಗಿ ಸೆಲಿಬ್ರಿಟಿಯಾದ!

ನಂತರದ ಕೆಲದಿನಗಳು ಮಾತ್ರ ಊಹೆಗೆ ನಿಲುಕದಂಥವು. ಸಗಾವಾ, ರೀನಿ ಮೃತದೇಹದ ಮೇಲೆ ಪದೇಪದೆ ಅತ್ಯಾಚಾರ ನಡೆಸಿ ಅವಳ ದೇಹದ ಭಾಗಗಳನ್ನು ಕೊಯ್ದು ತಿನ್ನಲಾರಂಭಿಸಿದ. ಮಾಂಸವನ್ನು ಬೇಯಿಸಿಕೊಂಡು ತಿನ್ನುವುದರ ಜೊತೆಗೆ ಹಸಿಮಾಂಸವನ್ನೂ ತಿಂದು ವಿಕೃತಿ ಮೆರೆದ.

ಜಪಾನಿನ ಸಗಾವಾ ನೆದರ್ಲ್ಯಾಂಡ್ಸ್ ಯುವತಿಯನ್ನು ಪ್ಯಾರಿಸ್​ನಲ್ಲಿ ಕೊಂದು ತಿಂದರೂ ಶಿಕ್ಷೆಯಾಗಲಿಲ್ಲ, ಸ್ವದೇಶಕ್ಕೆ ವಾಪಸ್ಸಾಗಿ ಸೆಲಿಬ್ರಿಟಿಯಾದ!
ಇಸ್ಸೀ ಸಗಾವಾ ಟೋಕಿಯೊ ನಗರದಲ್ಲಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 02, 2022 | 8:08 AM

ಹಾಲೆಂಡ್ ನ ವಿದ್ಯಾರ್ಥಿನಿ ರೆನೀ ಹಾರ್ಟ್​ವೆಲ್ಟ್​ಳನ್ನು ಕೊಂದ ಅಪರಾಧದಲ್ಲಿ ಫ್ರೆಂಚ್ ಪೊಲಿಸರಿಗೆ ಮುಂದೆ ವಿಚಾರಣೆಗೆ ಹಾಜರಾಗಿದ್ದ ಜಪಾನ್ ನ ಇಸ್ಸೀ ಸಗಾವಾಗೆ (Issei Sagawa) ಅಧಿಕಾರಿಗಳು ಅವಳನ್ಯಾಕೆ ಕೊಂದೆ ಅಂತ ಕೇಳಿದಾಗ, ‘ಅವಳ ಮಾಂಸ ತಿನ್ನಬೇಕಿತ್ತು ಅದಕ್ಕಾಗಿ ಕೊಂದೆ,’ ಎಂದು ನಿರ್ಲಿಪ್ತನಾಗಿ, ನಿರ್ಭಾವುಕತೆಯಿಂದ ಹೇಳಿದ. ಅದೊಂದು ಭಯಾನಕ ಕೊಲೆ (horrifying murder) ಪ್ರಕರಣ. ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಜಪಾನಿನ ನರಭಕ್ಷಕ (cannibal) ಕೊಲೆಗಾರ ಮತ್ತು ವಿಕೃತ ಕಾಮಿ ಸಗಾವಾನ ಕತೆ ಹೇಳುತ್ತಿದ್ದೇವೆ. ಜಪಾನಿನ ಕೊಬೆ ಎಂಬಲ್ಲಿ 1949 ರಲ್ಲಿ ಹುಟ್ಟಿದ ಸಗಾವಾ ತನಗೆ 6 ನೇ ವಯಸ್ಸಿನಿಂದಲೇ ಮಾನವರ ಮಾಂಸ ತಿನ್ನುವ ಉತ್ಕಟ ಆಸೆ ಹುಟ್ಟಿಕೊಂಡಿತ್ತು ಅಂತ ಹೇಳಿಕೊಂಡಿದ್ದಾನೆ. ಬಾಲ್ಯದಲ್ಲಿ ಅವನ ಅತ್ಯಂತ ನೆಚ್ಚಿನ ಕತೆ ಹನ್ಸೆಲ್ ಮತ್ತು ಗ್ರೆಟಲ್ ಆಗಿತ್ತಂತೆ. ಪ್ರಾಥಮಿಕ ಶಾಲೆಯಲ್ಲಿ ಓದುವಾಗ ತನ್ನ ಸಹಪಾಠಿಗಳ ತೊಡೆಗಳ ದುರುಗುಟ್ಟಿ ನೋಡುತ್ತಾ, ‘ಈ ತೊಡೆ ಮಾಂಸ ನಿಸ್ಸಂದೇಹವಾಗಿ ಸ್ವಾದಿಷ್ಟವಾಗಿರುತ್ತದೆ,’ ಅಂದುಕೊಳ್ಳುತ್ತಿದ್ದನಂತೆ.

ಮೊದಲ ಯತ್ನ ವಿಫಲವಾಗಿತ್ತು!

ಬೆಳೆಯುತ್ತಾ ಸಾಗಿದಂತೆ ಅವನಲ್ಲಿ ನರಭಕ್ಷಣೆಯ ಕಲ್ಪನೆ ಜೊತೆಗೆ ಲೈಂಗಿಕ ವಾಂಛೆ ಜೊತೆಗೂಡಿತು. ಗ್ರೇಸ್ ಕೆಲ್ಲಿ ಮೊದಲಾದ ಪಾಶ್ಚಿಮಾತ್ಯ ಸೆಲಿಬ್ರಿಟಿಗಳ ಮಾಂಸ ತಿನ್ನಬೇಕು ಅಂತ ಅವನಿಗನ್ನಿಸಿತ್ತಿತ್ತು. ತನ್ನ 23 ನೇ ವಯಸ್ಸಿನಲ್ಲಿ ಅವನು ತನ್ನ ವಿಲಕ್ಷಣ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿ ಫ್ರಾಂಕಿನ್ ಸ್ಟೀನ್ ಮಾನಸ್ಟರ್ ಮಾಸ್ಕ್ ಧರಿಸಿ ಟೊಕಿಯೊ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಜರ್ಮನ್ ಮಹಿಳೆಯ ಫ್ಲ್ಯಾಟ್ ಹೊಕ್ಕ. ಆಕೆ ಗಾಢವಾದ ನಿದ್ರೆಯಲ್ಲಿದ್ದಳು. ಅವಳ ಮೇಲೆ ಅತ್ಯಾಚಾರವೆಸಗಿ, ಕೊಂದು, ಅವಳ ದೇಹದ ಮಾಂಸ ತಿನ್ನುವ ಉದ್ದೇಶ ಅವನದ್ದಾಗಿತ್ತು.

ಆದರೆ, ಅವನ ಹೆಜ್ಜೆ ಸದ್ದಿಗೆ ಎಚ್ಚರಗೊಂಡ ಕಟ್ಟುಮಸ್ತಾದ ಮಹಿಳೆ ಕೇವಲ 4 ಅಡಿ 9 ಇಂಚು ಫ್ರೇಮಿನ ಸಗಾವಾನನ್ನು ಸುಲಭವಾಗಿ ಮಣಿಸಿ, ಕಟ್ಟಿಹಾಕಿ ಪೊಲೀಸರಿಗೆ ಫೋನ್ ಮಾಡಿದಳು. ಪೊಲೀಸರು ವಿಚಾರಣೆ ಆರಂಭಿಸಿದಾಗ ಅವಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಮಾತ್ರ ತನಗಿತ್ತು ಎಂದು ಹೇಳಿದ. ಅವಳನ್ನು ಕೊಂದು ಮಾಂಸ ತಿನ್ನಬೇಕೆಂದುಕೊಂಡಿದ್ದೆ ಅಂತ ಹೇಳಿದರೆ ಉಗ್ರ ಶಿಕ್ಷೆ ಎದುರಾಗಬಹುದಾದ ಭೀತಿಯಿಂದ ಅವನು ಹಾಗೆ ಹೇಳಿದ್ದ.

ಅವನಪ್ಪ ಕುಬೇರ 

ಆದರೆ, ಸಗಾವಾನ ತಂದೆ ಆಗರ್ಭ ಶ್ರೀಮಂತ. ಅವನು ಜರ್ಮನ್ ಮಹಿಳೆಯನ್ನು ಸಂಪರ್ಕಿಸಿ ಅವಳು ಕೇಳಿದಷ್ಟು ಹಣ ನೀಡಿ ದೂರು ವಾಪಸ್ಸು ಪಡೆಯುವಂತೆ ಹೇಳಿ ಮಗನನ್ನು ಜೈಲಿನಿಂದ ಹೊರತಂದ. 1977 ರಲ್ಲಿ 28-ವರ್ಷದನಾಗಿದ್ದ ಸಗಾವಾ ಇಂಗ್ಲಿಷ್ ಮತ್ತು ಬೇರೆ ಬೇರೆ ಭಾಷೆಗಳ ಸಾಹಿತ್ಯ ಅಧ್ಯಯನ ಮಾಡಲು ಪ್ಯಾರಿಸ್ ನ ಪ್ರತಿಷ್ಠಿತ ಸರ್ಬೋನೆ ಯೂನಿವರ್ಸಿಟಿಯಲ್ಲಿ ದಾಖಲಾತಿ ಪಡೆದ. ಅವನಿಗೆ ರೇನಿ ಹಾರ್ವೆಲ್ಟ್ ಹೆಸರಿನ ಯುವತಿಯ ಪರಿಚಯವಾಗಿದ್ದು ಅಲ್ಲೇ. ಜರ್ಮನ್ ಸಾಹಿತ್ಯದ ಪಾಠಗಳನ್ನು ಹೇಳಿಕೊಡಲು ರೀನಿ ಅವನ ಅಪಾರ್ಟ್ಮೆಂಟ್ ಗೆ ಹೋಗುತ್ತಿದ್ದಳು.

Issei Sagawa, the cannibal

ನರಭಕ್ಷಕ ಇಸ್ಸೀ ಸಗಾವಾ

5 ಅಡಿ 11ಅಂಗುಲ ಎತ್ತರದ ರೀನಿಯನ್ನು ನೋಡಿದಾಗಲೆಲ್ಲ ಸಗಾವಾನಲ್ಲಿ ಸುಪ್ತವಾಗಿದ್ದ ಆಸೆ ಜಾಗೃಗೊಳ್ಳುತ್ತಿತ್ತು. ಹಲವಾರು ವರ್ಷಗಳ ಆಸೆಯನ್ನು ಪೂರೈಸಿಕೊಳ್ಳುವ ಉದ್ದೇಶದಿಂದ ಅವನು ಒಂದು ರೈಫಲ್ ಖರೀದಿಸಿದ.

ವೇಶ್ಯೆಯರನ್ನು ಮನೆಗೆ ಕರೆತರುತ್ತಿದ್ದ

ಪ್ಯಾರಿಸ್ ನಗರದ ವೇಶ್ಯೆಯರನ್ನು ತನ್ನ ಮನೆಗೆ ಕರೆತರುತ್ತಿದ್ದ ಸಗಾವಾ ಅವರನ್ನು ಕೊಂದು ತನ್ನಾಸೆ ತೀರಿಸಿಕೊಳ್ಳಬೇಕು ಅಂದುಕೊಳ್ಳುತ್ತಿದ್ದ. ಆದರೆ ತನ್ನ ಯೋಜನೆ ಕಾರ್ಯರೂಪಕ್ಕಿಳಿಸಲಾಗದೆ ಒದ್ದಾಡುತ್ತಿದ್ದ. ಜೂನ್ 11, 1981 ರಂದು 25-ವರ್ಷ ವಯಸ್ಸಿನ ರೀನಿ ಅವನ ಮನೆಗೆ ಬಂದು ಡಿನ್ನರ್ ಗೆ ಕೂರುವ ಮೊದಲು ಜರ್ಮನ್ ಕವನಗಳನ್ನು ಓದುತ್ತಿದ್ದಾಗ ಅವಳ ಹಿಂಭಾಗಕ್ಕೆ ಹೋದ ಸಗಾವಾ ಕುತ್ತಿಗೆಗೆ ಗುಂಡು ಹಾರಿಸಿದ. ರೀನಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಅವನಲ್ಲಿ ಕನಿಕರ ಹುಟ್ಟಿ ಅಂಬ್ಯುಲೆನ್ಸ್ ಗೆ ಫೋನ್ ಮಾಡುವ ಯೋಚನೆ ಹುಟ್ಟಿಕೊಂಡಿತ್ತು. ಆದರೆ, ಮರುಕ್ಷಣವೇ, ‘ಏಯ್ ಮೂರ್ಖ, ಈ ಕ್ಷಣಕ್ಕಾಗಿ ನೀನು 32-ವರ್ಷಗಳಿಂದ ಕಾಯುತ್ತಿದ್ದೆ ಮತ್ತು ಕನಸು ಕಾಣುತ್ತಿದ್ದೆ. ಅದು ಸಾಕಾರಗೊಳ್ಳುತ್ತಿರುವ ಸಮಯದಲ್ಲಿ ಬೇರೆ ಯೋಚನೆ ಯಾಕೆ?’ ಅಂತ ಅವನ ಒಳಮನಸ್ಸು ಹೇಳಿತಂತೆ.

ನಂತರದ ಕೆಲದಿನಗಳು ಮಾತ್ರ ಊಹೆಗೆ ನಿಲುಕದಂಥವು. ಸಗಾವಾ, ರೀನಿ ಮೃತದೇಹದ ಮೇಲೆ ಪದೇಪದೆ ಅತ್ಯಾಚಾರ ನಡೆಸಿ ಅವಳ ದೇಹದ ಭಾಗಗಳನ್ನು ಕೊಯ್ದು ತಿನ್ನಲಾರಂಭಿಸಿದ. ಮಾಂಸವನ್ನು ಬೇಯಿಸಿಕೊಂಡು ತಿನ್ನುವುದರ ಜೊತೆಗೆ ಹಸಿಮಾಂಸವನ್ನೂ ತಿಂದು ವಿಕೃತಿ ಮೆರೆದ.

Renee Heartevelt, Sagawa's victim

ರೀನಿ ಹಾರ್ಟೆವೆಲ್ಟ್​​ , ಸಗಾವಾಗೆ ಬಲಿಯಾದ ಯುವತಿ

ಸೂಟ್​ಕೇಸ್ ಗಳಲ್ಲಿ ರೀನಿ ದೇಹದ ತುಂಡುಗಳು!

ರೀನಿಯ ತೊಡೆ, ಸ್ತನಗಳು ಮತ್ತು ತುಟಿಗಳನ್ನು ಕತ್ತರಿಸಿಕೊಂಡು ಸಾಗಾವಾ ಭಕ್ಷಿಸಿದ. ಎರಡು ದಿನಗಳ ನಂತರ ಅವನಿಗೆ ತಿನ್ನುವುದು ಸಾಕೆನಿಸತೊಡಗಿತ್ತು. ದೇಹದ ಅವಶೇಷಗಳನ್ನು ಎಲ್ಲಾದರು ಬಿಸಾಡುವ ಉದ್ದೇಶದಿಂದ ಎರಡು ದೊಡ್ಡ ದೊಡ್ಡ ಸೂಟ್ ಕೇಸ್ ಗಳಲ್ಲಿ ತುಂಬಿಸಿಕೊಂಡು ಮನೆಯಿಂದ ಹೊರಬಿದ್ದ. ಟ್ಯಾಕ್ಸಿಯೊಂದನ್ನು ಅವನು ಬುಕ್ ಮಾಡಿದಾಗ ಅವನ ದೊಡ್ಡ ಸೂಟ್ ಕೇಸ್ ಗಳನ್ನು ನೋಡಿದ ಅದರ ಡ್ರೈವರ್ ‘ಅದರಲ್ಲೇನು ಹೆಣ ತುಂಬಿಸಿದ್ದೀಯಾ ಹೇಗೆ’ ಅಂತ ತಮಾಷೆ ಮಾಡಿದ.

ಹತ್ತಿರದ ಪಾರ್ಕೊಂದರ ಬಳಿ ಇಳಿದ ಅವನು ಸೂಟ್ ಕೇಸ್ ಗಳನ್ನು ಪಾರ್ಕಲ್ಲಿ ಬಿಸಾಡಲು ನಿರ್ಧರಿಸಿದ. ಅದು ಬೆಳಗಿನ ಜಾವವಾಗಿದ್ದರಿಂದ ಪಾರ್ಕಲ್ಲಿ ಯಾರೂ ಇರಲಾರರು ಅನ್ನೋದು ಅವನ ಎಣಿಕೆಯಾಗಿತ್ತು. ಆದರೆ ಯಾರೋ ಇಬ್ಬರು ಅದಾಗಲೇ ಮಾರ್ನಿಂಗ್ ವಾಕ್ ಮಾಡುತ್ತಿದ್ದರು. ಅವರ ದೃಷ್ಟಿ ಸೂಟ್ ಕೇಸ್ ಮೇಲೆ ಬಿದ್ದಾಗ ಅವೆರಡರಿಂದಲೂ ರಕ್ತ ಹೊರಬರುತ್ತಿರುವುದು ಕಾಣಿಸಿತು. ಅವರು ಅಲ್ಲಿಂದ ಅವಸರದಲ್ಲಿ ತೆರಳಿ ಪೊಲೀಸರಿಗೆ ವಿಷಯ ತಿಳಿಸಿದರು.

ಸಗಾವಾನನ್ನು ಅರೆಸ್ಟ್​ ಮಾಡುವುದು ಕಷ್ಟವಾಗಲಿಲ್ಲ

ಪ್ಯಾರಿಸ್ ನಗರದ ಪೊಲೀಸರು ಅಲ್ಲಿಗೆ ಹೋದಾಗ ಸೂಟ್ ಕೇಸ್ ಗಳು ಮಾತ್ರ ಕಾಣಿಸಿದವು. ಸಗಾವ ದೂರದಲ್ಲಿ ನಡೆದುಹೋಗಿತ್ತಿದ್ದ. ಅವರು ಸೂಟ್ ಕೇಸ್ ಗಳನ್ನು ಓಪನ್ ಮಾಡಿದಾಗ ಮಹಿಳೆಯ ದೇಹ ಕತ್ತರಿಸಿದ ಭಾಗಗಳು ಕಂಡವು. ಪೊಲೀಸರಿಗೆ ಸಗಾವನನ್ನು ಹಿಡಿಯುವುದು ಕಷ್ಟವಾಗಲಿಲ್ಲ.

ಅವನೆಸಗಿದ ಕೃತ್ಯ ಪ್ಯಾರಿಸ್ ನಗರದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿತು. ಸೂಟ್ ಕೇಸ್ ನಲ್ಲಿದ್ದ ರೀನಿಯ ದೇಹದ ಭಾಗಗಳನ್ನು ಯಥಾವತ್ತಾಗಿ ಮುದ್ರಿಸಿದ ಪತ್ರಿಕಾ ಕಚೇರಿಯನ್ನು ಸೀಜ್ ಮಾಡಿ ಅದಾಗಲೇ ಮುದ್ರಣಗೊಂಡಿದ್ದ 2 ಲಕ್ಷಕ್ಕೂ ಹೆಚ್ಚಿನ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅದರ ವರದಿಗಾರ ಅರೆಸ್ಟ್ ಆದ.

ಸಗಾವಾಗೆ ಶಿಕ್ಷೆಯಾಗಲಿಲ್ಲ!

ಆದರೆ ರೀನಿಯನ್ನು ಭೀಕರವಾಗಿ ಕೊಂದು ತಿಂದ ಮತ್ತು ಅವಳ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ ಸಗಾವಾಗೆ ಮಾತ್ರ ಶಿಕ್ಷೆಯಾಗಲಿಲ್ಲ. ಅವನ ಶ್ರೀಮಂತ ಮತ್ತೊಮ್ಮೆ ಅವನ ನೆರವಿಗೆ ಧಾವಿಸಿ ಪ್ಯಾರಿಸ್ ನ ಟಾಪ್ ಕ್ರಿಮಿನಲ್ ನನ್ನು ಗೊತ್ತು ಮಾಡಿಕೊಂಡು ತನ್ನ ಮಗ ವಿಚಾರಣೆ ಎದುರಿಸಲಾರದಷ್ಟು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಅಂತ ಪ್ರೂವ್ ಮಾಡಿಸಿದ. ಬಳಿಕ ಅವನಿಗೆ ಚಿಕಿತ್ಸೆಯ ಅಗತ್ಯವಿದೆ ಅಂತ ಪೊಲೀನಸರಿಗೆ ಹೇಳಿ ಮಗನನ್ನು ತನ್ನೊಂದಿಗೆ ಟೊಕಿಯೊಗೆ ಕರೆದೊಯ್ದ!

ಅವನಿಗೆ ಟೊಕಿಯೊದ ಮೆಂಟಲ್ ಹಾಸ್ಪಿಟಲ್ ನಲ್ಲಿ ದಾಖಲಿಸಿದ್ದು ನಿಜ. ಅಲ್ಲಿಂದ ಹೊರಬಂದ ಬಳಿಕ ವಿಲಕ್ಷಣ ಪಾತಕಿ ಸೆಲಿಬ್ರಿಟಿಯಾಗಿಬಿಟ್ಟ! ಹೌದು, ಸಗಾವಾ 20 ಪುಸ್ತಕಗಳನ್ನು ಬರೆದು ಮೇನ್ ಸ್ಟ್ರೀಮ್ ನಲ್ಲಿ ಖ್ಯಾತಿಗೆ ಬಂದ.

ಈಗ 72-ವರ್ಷ-ವಯಸ್ಸಿನವನಾಗಿರುವ ಸಗಾವ ಪಾರ್ಶ್ವವಾಯುಪೀಡಿತನಾಗಿದ್ದು ಸಹೋದರನ ಆರೈಕೆಯಲ್ಲಿ ಜೀವಿಸುತ್ತಿದ್ದಾನೆ.

ಮತ್ತಷ್ಟು ಕ್ರೈಮ್  ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

RCB ಅಭಿಮಾನಿಗಳು ಬೆಂಬಲ ನೀಡಬೇಕು.. ಹೊಸ ನಾಯಕನ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ
RCB ಅಭಿಮಾನಿಗಳು ಬೆಂಬಲ ನೀಡಬೇಕು.. ಹೊಸ ನಾಯಕನ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ
ಅಮಾಯಕರಿಗೆ ಶಿಕ್ಷೆಯಾಬಾರದು, ತಪ್ಪಿತಸ್ಥರು ತಪ್ಪಿಸಿಕೊಳ್ಳಬಾರದು: ತನ್ವೀರ್
ಅಮಾಯಕರಿಗೆ ಶಿಕ್ಷೆಯಾಬಾರದು, ತಪ್ಪಿತಸ್ಥರು ತಪ್ಪಿಸಿಕೊಳ್ಳಬಾರದು: ತನ್ವೀರ್
ಹುಟ್ಟೂರಲ್ಲಿ ಡಾಲಿ ಧನಂಜಯ್ ಮದುವೆ ಶಾಸ್ತ್ರ; ಶುರುವಾಗಿದೆ ಸಂಭ್ರಮ
ಹುಟ್ಟೂರಲ್ಲಿ ಡಾಲಿ ಧನಂಜಯ್ ಮದುವೆ ಶಾಸ್ತ್ರ; ಶುರುವಾಗಿದೆ ಸಂಭ್ರಮ
ಸ್ನೇಹಿತರೊಂದಿಗೆ ಪ್ರಯಾಗ್​ರಾಜ್ ತೆರಳಿರುವ ಗೋಕಾಕ ಶಾಸಕ ಜಾರಕಿಹೊಳಿ
ಸ್ನೇಹಿತರೊಂದಿಗೆ ಪ್ರಯಾಗ್​ರಾಜ್ ತೆರಳಿರುವ ಗೋಕಾಕ ಶಾಸಕ ಜಾರಕಿಹೊಳಿ
ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?
ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕದ ಅರ್ಥವೇನು?
RCB New Captain: RCB ತಂಡದ ಹೊಸ ನಾಯಕ ರಜತ್ ಪಾಟಿದಾರ್
RCB New Captain: RCB ತಂಡದ ಹೊಸ ನಾಯಕ ರಜತ್ ಪಾಟಿದಾರ್
ಅಪಘಾತಕ್ಕೀಡಾದ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು ಶಾಲಾ ಮಕ್ಕಳು
ಅಪಘಾತಕ್ಕೀಡಾದ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು ಶಾಲಾ ಮಕ್ಕಳು
‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ದರ್ಶನ್​ಗೆ ಬೇಜಾರಾಗಿತ್ತು
‘ನಮ್ಮ ಪ್ರೀತಿಯ ರಾಮು’ ಬಿಡುಗಡೆ ಆದಾಗ ದರ್ಶನ್​ಗೆ ಬೇಜಾರಾಗಿತ್ತು
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್: ನಾಲ್ಕೈದು ಕಿ.ಮೀ ನಿಂತ ವಾಹನಗಳು
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್: ನಾಲ್ಕೈದು ಕಿ.ಮೀ ನಿಂತ ವಾಹನಗಳು
ಧನಂಜಯ್ ಹುಟ್ಟೂರಲ್ಲಿ ವಿವಾಹ ಶಾಸ್ತ್ರ; ಕೆಂಡ ಹಾಯ್ದ ಡಾಲಿ
ಧನಂಜಯ್ ಹುಟ್ಟೂರಲ್ಲಿ ವಿವಾಹ ಶಾಸ್ತ್ರ; ಕೆಂಡ ಹಾಯ್ದ ಡಾಲಿ