AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ

ಬಂಗಾರದ ಅಂಗಡಿ ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ.

ಬೆಂಗಳೂರು: ಇನ್ಶೂರೆನ್ಸ್​​ ಹಣಕ್ಕಾಗಿ ಜ್ಯುವೆಲ್ಲರಿ ಮಾಲೀಕನ ನಾಟಕ; ವಿಚಾರಣೆ ವೇಳೆ ಹೊರಬಂತು ಅಸಲಿ ಕಹಾನಿ
ಸಾಂದರ್ಭಿಕ ಚಿತ್ರ
Jagadisha B
| Updated By: ವಿವೇಕ ಬಿರಾದಾರ|

Updated on: Aug 01, 2023 | 10:37 AM

Share

ಬೆಂಗಳೂರು: ಬಂಗಾರದ ಅಂಗಡಿ (Jewellery Shop) ಮಾಲೀಕನ ಕಥೆ ಮತ್ತು ನಿರ್ದೇಶನ ಕಂಡು ಪೊಲೀಸರು (Police) ದಂಗಾಗಿದ್ದಾರೆ. ಈತ ಹೆಣದ ಕಥೆ ಯಾವ ಕ್ರೈಂ ಸಿನಿಮಾ ಕಥೆಗೂ ಕಡಿಮೆ ಇಲ್ಲ. ಬೆಂಗಳೂರಿನ (Bengaluru) ನಗರತ್​ ಪೇಟೆಯ ಕೇಸರ್ ಬಂಗಾರದ ಅಂಗಡಿ ಮಾಲಿಕ ರಾಜ್ ಜೈನ್ ಇನ್ಶೂರೆನ್ಸ್​​ನ (Insurance) ನಾಲ್ಕು ಕೋಟಿ ರೂ. ಹಣಕ್ಕಾಗಿ ಕೆಟ್ಟ ದಾರಿ ತುಳಿದಿದ್ದಾನೆ. ಹೌದು ಇನ್ಶೂರೆನ್ಸ್​​ ಹಣ ಕ್ಲೈಮ್​ ಮಾಡಿಕೊಳ್ಳಲು ತನ್ನ 2.7 ಕೇಜಿ ಚಿನ್ನವನ್ನು ದರೋಡೆ ಮಾಡಿದ್ದಾರೆ ಎಂದು ನಾಟಕವಾಡಿದ್ದಾನೆ.

ರಾಜ್ ಜೈನ್ ದರೋಡೆ ನಾಟಕವಾಡಲು 20 ದಿನಗಳಿಂದ ಪ್ಲ್ಯಾನ್ ಮಾಡಿದ್ದಾನೆ. ಈತ ಸಿನಿಮಾ ಸ್ಟೈಲ್​ನ ದರೋಡೆ ಕೃತ್ಯಕ್ಕೆ ತನ್ನ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾನೆ. ಅವರಿಗೆ ಇದೇ ರೀತಿ ಉತ್ತರ ಕೊಡಬೇಕೆಂದು ಟ್ರೈನಿಂಗ್​ ಸಹ ನೀಡಿದ್ದನು.

ಎಲ್ಲವೂ ಪ್ಲಾನ್​​ವಾದ ಬಳಿಕ ಒಂದು 2.7 ಕೆಜಿ ಚಿನ್ನ ಅಂಗಡಿಗೆ ತಂದಿದ್ದಾನೆ. ನಂತರ ಸಿಬ್ಬಂದಿ ಕೈಯಲ್ಲಿ ಚಿನ್ನವಿದ್ದ ಬ್ಯಾಗ್​ನ್ನು ಕೊಟ್ಟು ಕಳುಹಿಸಿದ್ದಾನೆ. ಇದನ್ನು ತೆಗೆದುಕೊಂಡು ಸಿಬ್ಬಂದಿ ಡಿಯೋ ಬೈಕ್​ನಲ್ಲಿ ಕಾಲಿನ ಬಳಿ ಇಟ್ಟುಕೊಂಡು ಮೈಸೂರು ರಸ್ತೆಯ ಫ್ಲೇ ಓವರ್​ ಮೇಲೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅಟ್ಯಾಕ್ ಮಾಡಿ ಚಿನ್ನವನ್ನು ಕದ್ದು ಪರಾರಿಯಾಗಿದ್ದಾರೆ. ನಂತರ ಬಾಲಕರು ಚಿನ್ನ ಕಳೆದುಹೋಗಿದೆ ಎಂದು ಪೊಲೀಸ್​ ಠಾಣೆಗೆ ಬಂದಿದ್ದಾರೆ. ಆದರೆ ಅಸಲಿಗೆ ಮೈಸೂರು ರಸ್ತೆಯ ಫ್ಲೇಓವರ್ ಮೇಲೆ ದರೋಡೆ ನಡೆದಿರಲಿಲ್ಲ.

ಇದನ್ನೂ ಓದಿ: ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ಎಂದು ಶಂಕಿಸಿದ ಅಣ್ಣನನ್ನು ಕೊಂದ ತಮ್ಮ

ಹೌದು ಡಿಯೋ ಬೈಕ್​ನ ಮುಂದೆ ಇಟ್ಟುಕೊಂಡಿದ್ದ ಚಿನ್ನವನ್ನು ಡಿಕ್ಕಿಯಲ್ಲಿ ಇಟ್ಟುಕೊಂಡು ಕಾಟನ್​​ಪೇಟೆ ಪೊಲೀಸ್​ ಠಾಣೆಗೆ ಬಂದು 3.7 ಕೇಜಿ ಚಿನ್ನ ದರೊಡೆಯಾಗಿದೆ ಎಂದು ದೂರು ನೀಡಿದ್ದಾರೆ. ನಂತರ ಠಾಣೆಯಿಂದ ಹೊರಗಡೆ ಬಂದು ಡಿಯೋ ಬೈಕ್​​ನ ಡಿಕ್ಕಿಯಲ್ಲಿದ್ದ ಚಿನ್ನವನ್ನು ಬೇರೊಂದು ಗಾಡಿಗೆ ಶಿಫ್ಟ್ ಮಾಡಿ ಹೈದ್ರಾಬಾದ್​​ಗೆ ಸಾಗಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವಾಗ ಪೊಲೀಸರಿಗೆ ಸಿಬ್ಬಂದಿ ಮೇಲೆ ಅನುಮಾನ ಬಂದು ಅವರ ಕಾಲ್​ ಹಿಸ್ಟ್ರಿ ಚೆಕ್​ ಮಾಡಿದ್ದಾರೆ. ಆಗ ಹೊರ ಬಂತು ಅಸಲಿ ಕಹಾನಿ. ಸಿಬ್ಬಂದಿ ಚಿನ್ನವನ್ನು ಮತ್ತೊಂದು ಬೈಕ್​ಗೆ ಶಿಫ್ಟ್ ಮಾಡಿದ ಬಳಿಕ ವಾಟ್ಸ್ ಆ್ಯಪ್ ಮೂಲಕ ಮಾಲೀಕನಿಗೆ ಕರೆ ಮಾಡಿ ಮತ್ತೊಂದು ಗಾಡಿಯಲ್ಲಿ ಚಿನ್ನ ಇಟ್ಟು ಹೈದರಾಬಾದ್​ಗೆ ಕಳುಹಿಸಿದ್ದಾಗಿ ಹೇಳಿದ್ದಾರೆ.

ಈ ವಿಚಾರ ತಿಳಿದು ಪೊಲೀಸರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಸದ್ಯ ಕಾಟನ್​​ಪೇಟೆ ಪೊಲೀಸರು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!