ಕಲಬುರಗಿ ನಗರದಲ್ಲಿದೆ ಖತರ್ನಾಕ್​ ಗ್ಯಾಂಗ್​: ಜಮೀನು ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚನೆ

| Updated By: ವಿವೇಕ ಬಿರಾದಾರ

Updated on: Jan 08, 2024 | 1:57 PM

ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ಮಾರಟ ಮಾಡುತ್ತಿದ್ದ ಗ್ಯಾಂಗ್ ವಿರುದ್ಧ ಕಲಬುರಗಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. 26 ಜ‌ನರ ವಿರದ್ಧ ದೂರು ದಾಖಲಾಗಿದ್ದು, ನಾಲ್ವರು ವಂಚಕರನ್ನು ಬಂಧಿಸಲಾಗಿದೆ.

ಕಲಬುರಗಿ ನಗರದಲ್ಲಿದೆ ಖತರ್ನಾಕ್​ ಗ್ಯಾಂಗ್​: ಜಮೀನು ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚನೆ
ಚರ್ಚ್​ ಆಸ್ತಿ ಗುಳುಂ ಮಾಡಲು ಯತ್ನ
Follow us on

ಕಲಬುರಗಿ, ಜನವರಿ 07: ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ ಮಾರಟ ಮಾಡುತ್ತಿದ್ದ ಗ್ಯಾಂಗ್ ವಿರುದ್ಧ ಕಲಬುರಗಿ (Kalaburagi) ಸೈಬರ್ ಕ್ರೈಂ (Cyber Crime) ಠಾಣೆಯಲ್ಲಿ ದೂರು ದಾಖಲಾಗಿದೆ. 26 ಜ‌ನರ ವಿರದ್ಧ ದೂರು ದಾಖಲಾಗಿದ್ದು, ನಾಲ್ವರು ವಂಚಕರನ್ನು ಬಂಧಿಸಲಾಗಿದೆ. ಆನಂದ್ ಪಾಪಾಚಂದ, ನಜೀರ್ ಅಹ್ಮದ್, ಮಶಾಕ್ ಪಟೇಲ್ ಬಂಧಿತ ಆರೋಪಿಗಳು. ಇನ್ನುಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕಲಬುರಗಿ ನಗರದ ಹೃದಯಭಾಗದಲ್ಲಿ ಕ್ರಿಶ್ಚಿಯನ್ ಸಮೂದಾಯದ ಶಾಂತಿ ಸದನಕ್ಕೆ ಸೇರಿದ 6 ಎಕರೆ 5 ಗುಂಟೆ ಜಮೀನು ಕನಿಷ್ಟ 80 ರಿಂದ 100 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಆರೋಪಿಗಳು ಈ ಜಮೀನಿಗೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಬಳಿಕ ಉದ್ಯಮಿ ಅಂಬರೀಷ ಎಂಬುವರಿಗೆ 10 ಕೋಟಿ 20 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಆಸ್ತಿಗೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯಿಂದ ಅಂಬರೀಶ್ ಬಳಿ ಹಣ ವಸೂಲಿ ಮಾಡಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ

ಬಳಿಕ ಅಂಬರೀಶ್ ಅವರನ್ನು ನಂಬಿಸಲು ಖದೀಮರು ಖತರ್ನಾಕ್ ಪ್ಲ್ಯಾನ್ ಮಾಡಿದ್ದಾರೆ. ಅಂಬರೀಶ್​ ಅವರನ್ನು ಸಬ್ ರೆಜಿಸ್ಟರ್ ಕಛೇರಿಗೆ ಕರೆದುಕೊಂಡು ಹೋಗಿ, ಅವರ ಥಂಬ್, ಫೋಟೋ, ಸಹಿ ಪಡೆದಿದ್ದಾರೆ. ಆದರೆ ದಾಖಲೆ ಪತ್ರದಲ್ಲಿ ರಜಿಸ್ಟರ್ ಆಗಿದ್ದು 6 ಎಕರೆ ಶಾಂತಿ ಸದನ ಆಸ್ತಿಯಲ್ಲ, ಬದಲಿಗೆ ಕುಸನೂರ ಬಳಿಯ 40X60 ಸೈಟಾಗಿತ್ತು.
ಈ 40X60 ಸೈಟಿನ ಮೂಲ ದಾಖಲೆಗಳನ್ನೇ ಮುಂದಿಟ್ಟುಕೊಂಡು ಐದು ಎಕರೆ ಜಮೀನು ರಜಿಸ್ಟರ್ ಆಗಿರುವ ನಕಲಿ ದಾಖಲೆ ಸೃಷ್ಠಿಸಿದ್ದಾರೆ. ಸಬ್ ರಜಿಸ್ಟರ್ ಅವರ ಸೀಲ್, ಸಹಿ ಎಲ್ಲವೂ ನಕಲಿಯಾಗಿದೆ. ಖರೀದಿದಾರ ಅಂಬರೀಶ್, ಜಾಗದ ಕಬ್ಜಾಗೆ ಹೋದಾಗ ಈ ಸತ್ಯ ಬೆಳಕಿಗೆ ಬಂದಿದೆ.

ಸಬ್ ರಜಿಸ್ಟರ್ ಕಚೇರಿಯಲ್ಲಿ ಈ ಜಮೀನು ಮಾರಾಟವಾಗಿಲ್ಲ. ಆದರೂ ಖರೀದಿದಾರನಿಗೆ ನಕಲಿ ದಾಖಲೆ ಕೊಟ್ಟು ನಂಬಿಸಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಒಂದೆಡೆ ತಮ್ಮ ಆಸ್ತಿ ಉಳಿಸಿಕೊಳ್ಳಲು ಕ್ರೈಸ್ತ ಸಮುದಾಯದವರು ಹೋರಾಟ ನಡೆಸಿದ್ದಾರೆ. ಇನ್ನೊಂದೆಡೆ ಜಮೀನಿಗಾಗಿ ಹತ್ತು ಕೋಟಿ ರೂ. ಕಳೆದುಕೊಂಡ ಅಂಬರೀಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ