ಬಡ್ಡಿ ಕೊಡುವುದಾಗಿ ಹಣ ಪಡೆದು ಗೃಹರಕ್ಷಕ ಸಿಬ್ಬಂದಿಗೆ ಕಾನ್ಸ್ಟೇಬಲ್ನಿಂದ ವಂಚನೆ
ಬಡ್ಡಿ ಕೊಡುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿಯಿಂದ 35 ಸಾವಿರ ರೂ. ಹಣ ಪಡೆದು ಕಾನ್ಸ್‌ಟೇಬಲ್ ವಂಚನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಕಾರ್ತಿಕ್ರಿಂದ ಗೃಹರಕ್ಷಕ ದಳದ ಸಿಬ್ಬಂದಿ ರಾಜುಗೆ ವಂಚನೆ ಮಾಡಲಾಗಿದೆ. ನೆಲಮಂಗಲ ಟೌನ್ ಠಾಣೆಗೆ ಹೋಂಗಾರ್ಡ್ ರಾಜು ದೂರು ನೀಡಿದ್ದಾರೆ.
ನೆಲಮಂಗಲ, ಜನವರಿ 08: ಬಡ್ಡಿ ಕೊಡುವುದಾಗಿ ನಂಬಿಸಿ ಗೃಹ ರಕ್ಷಕ ಸಿಬ್ಬಂದಿಯಿಂದ 35 ಸಾವಿರ ರೂ. ಹಣ ಪಡೆದು ಕಾನ್ಸ್‌ಟೇಬಲ್ ವಂಚನೆ (Fraud) ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನೆಲಮಂಗಲ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಕಾರ್ತಿಕ್ರಿಂದ ಗೃಹರಕ್ಷಕ ದಳದ ಸಿಬ್ಬಂದಿ ರಾಜುಗೆ ವಂಚನೆ ಮಾಡಲಾಗಿದೆ. ಅಡವಿಟ್ಟ ಕಾರು ಬಿಡಿಸಿಕೊಳ್ಳಲು ರಾಜು ಬಳಿಯಿಂದ ಹಣ ಪಡೆದಿದ್ದ.
ಕಾರ್ತಿಕ್ ಮಾತು ನಂಬಿ ರಾಜು ಬ್ಯಾಂಕ್‌ನಲ್ಲೇ ಹಣ ಕೊಟ್ಟಿದ್ದ. ಸಾಕ್ಷಿಗಾಗಿ ಬ್ಯಾಂಕಿನಲ್ಲಿ ಹಣ ಎಣಿಸುವ ದೃಶ್ಯ ಸೆರೆ ಹಿಡಿಯಲಾಗಿದೆ. ಇದೀಗ ಕಾನ್ಸ್‌ಟೇಬಲ್ ಕಾರ್ತಿಕ್ ಹಣ ವಾಪಸ್ ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಈ ಕುರಿತಾಗಿ ನೆಲಮಂಗಲ ಟೌನ್ ಠಾಣೆಗೆ ಹೋಂಗಾರ್ಡ್ ರಾಜು ದೂರು ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿ ನಗರದಲ್ಲಿದೆ ಖತರ್ನಾಕ್ ಗ್ಯಾಂಗ್: ಜಮೀನು ಕೊಡಿಸುವುದಾಗಿ ನಂಬಿಸಿ ಉದ್ಯಮಿಗೆ ವಂಚನೆ
ಕಾನ್ಸ್‌ಟೇಬಲ್ ಕಾರ್ತಿಕ್‌ನಿಂದ ಹಣ ವಾಪಸ್ ಕೊಡಿಸುವುದಾಗಿ ನೆಲಮಂಗಲ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ರವಿ ಭರವಸೆ ನೀಡಿದ್ದಾರೆ. ಈ ಹಿಂದೆಯೂ ಹಲವರ ಬಳಿ ಹಣ ಪಡೆದು ಕಾರ್ತಿಕ್ ವಂಚಿಸಿದ್ದ ಎನ್ನಲಾಗಿದೆ.
ಎಲೆಕ್ಟ್ರಿಕ್ ಬೈಕಿಗೆ ಕ್ಯಾಂಟರ್ ಡಿಕ್ಕಿ: ಬೈಕ್ ಸವಾರ ಪಾರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ಎಲೆಕ್ಟ್ರಿಕ್ ಬೈಕಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದ್ದು, ಪವಾಡ ಸದೃಶ್ಯವಾಗಿ ಬೈಕ್ ಸವಾರ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 4 ಅರಿಶಿನಕುಂಟೆ ಯಲ್ಲಿ ಘಟನೆ ಸಂಭವಿಸಿದೆ. ರವಿಕುಮಾರ್ ಪಾರಾದ ಬೈಕ್ ಸವಾರ. ಕ್ಯಾಂಟರ್ ಸಮೇತವಾಗಿ ಚಾಲಕನನ್ನು ಪೊಲೀಸ್ ವಶಕ್ಕೆ ಪಡೆದಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಜಾಗರೂಕತೆ ಚಾಲನೆಯಿಂದ ಖಾಸಗಿ ಬಸ್ ಅಪಘಾತ: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ದೇವನಹಳ್ಳಿ: ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬನಹಳ್ಳಿ ಗೇಟ್ ಸಮೀಪ ನಡೆದಿದೆ.
ಸ್ಪೀಡ್ ಬ್ರೇಕರ್ ಜಂಪ್ ಮಾಡಿದ ಪರಿಣಾಮ ಖಾಸಗಿ ಬಸ್ ಪಲ್ಟಿಯಾಗಿದೆ. ಗಾಯಾಳುಗಳನ್ನು ಹೊಸಕೋಟೆ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.