ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ

ಸಹೋದರಿಯನ್ನು ಚುಡಾಯಿಸಿದ್ದಕ್ಕೆ ಯುವಕನನ್ನು ಕೊಲೆಗೈದ ಆರೋಪಿಯನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಿಸೆಂಬರ್​ 23 ರಂದು ದಾವಲಸಾಬ್ (22) ಎಂಬುವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶವ ಸುಟ್ಟು ಹಾಕಿದ್ದರು.

ಕಲಬುರಗಿಯಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು, ಶವ ಸುಟ್ಟ ಆರೋಪಿಗಳ ಬಂಧನ
ಸಾಂದರ್ಭಿಕ ಚಿತ್ರ
Edited By:

Updated on: Dec 26, 2023 | 7:40 AM

ಕಲಬುರಗಿ, ಡಿಸೆಂಬರ್​ 26: ಚಿತ್ತಾಪುರ (Chittapur) ಪಟ್ಟಣದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆಗೈದು ಶವ ಸುಟ್ಟ ಪ್ರಕರಣದ ಆರೋಪಿಗಳನ್ನು ಚಿತ್ತಾಪುರ ಪೊಲೀಸರು (Police) ಬಂಧಿಸಿದ್ದಾರೆ. ಆಸಿಫ್, ಬಾಬುಮೀಯಾ, ಅಲ್ತಾಫಶಾ, ಮಹ್ಮದ್ ಕೈಫ್ ಬಂಧಿತ ಆರೋಪಿಗಳು. ಆರೋಪಿಗಳು ಡಿಸೆಂಬರ್​ 23 ರಂದು ದಾವಲಸಾಬ್ (22) ಎಂಬುವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದರು. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶವ ಸುಟ್ಟು ಹಾಕಿದ್ದರು.

ಮೃತ ದಾವಲ್‌ಸಾಬ್ ಆರೋಪಿ ಆಸಿಫ್ ಸಹೋದರಿಯನ್ನ ಚುಡಾಯಿಸುತ್ತಿದ್ದನು. ಈ ಬಗ್ಗೆ ಸಾಕಷ್ಟು ಆರೋಪಿ ಆಸಿಫ್ ಮೃತ ದಾವಲ್‌ಸಾಬ್​ಗೆ ಬುದ್ಧಿವಾದ ಹೇಳಿದ್ದನು. ಆದರೂ ಕೂಡ ದಾವಲ್​ಸಾಬ್​​ ಚುಡಾಯಿಸುತ್ತಿದ್ದನ್ನು ಬಿಟ್ಟಿರಲಿಲ್ಲ. ಆ ಹಿನ್ನಲೆ ಉಪಾಯದಿಂದ ದಾವಲ್​​ಸಾಬ್​​​ನನ್ನು ಕರೆಯಿಸಿ ಹಂತಕರು ಕೊಲೆ ಮಾಡಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಚಂದ್ರಶೇಖರ್ ತಿಗಡಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿದೆ.

ಇದನ್ನೂ ಓದಿ: ತುಮಕೂರು: ಜಮೀನು ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ವಾಹನ ಕಳ್ಳರ ಬಂಧನ; 16 ಲಕ್ಷ ಮೌಲ್ಯದ 2 ವಾಹನ ವಶ

ಕೋಲಾರ: ಮಾಲೂರು ತಾಲ್ಲೂಕು ಚಿಕ್ಕತಿರುಪತಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂದಿತರಿಂದ ಒಂದು ಬುಲೇರೋ ಪಿಕಪ್ ಹಾಗೂ ಕ್ಯಾಂಟರ್ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಮಟನ್ ಅಂಗಡಿಗೆಂದು ತಂದಿದ್ದ ಕುರಿಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧನ ಶ್ರೀನಿವಾಸಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋಲಾರ ನಗರದ ಗಣೇಶ್, ಸಂಜಯ್, ಚಲಪತಿ ಬಂಧಿತ ಆರೋಪಿಗಳು. ಬಂಧಿತರಿಂದ ಆರು ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಶ್ರೀನಿವಾಸಪುರ ತಾಲೂಕಿನ ಕುಳಿಗುರ್ಕಿ ಗ್ರಾಮದ ಮುನಿರೆಡ್ಡಿ ಎಂಬುವರ  ಕಳ್ಳತನ ಮಾಡಿದ್ದರು. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Tue, 26 December 23