ಪಾರ್ಟಿ ವೇಳೆ ಪೆಗ್​ ಹಾಕುವ ವಿಚಾರಕ್ಕೆ ಗಲಾಟೆ; ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ

ಎಣ್ಣೆ ಪಾರ್ಟಿ ವೇಳೆ ಸರಿಯಾಗಿ ಪೆಗ್ ಹಾಕಲು ಬರಲ್ಲವೆಂದು ನಡೆದ ಗಲಾಟೆಯಲ್ಲಿ ಆತ್ಮೀಯ ಸ್ನೇಹಿತನಿಂದಲೇ ಎಎಸ್​ಐ ಪುತ್ರ ಕೊಲೆಯಾದ ಘಟನೆ ರಾಮನಗರ(Ramanagara)ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೀಪಕ್(23)​​ ಮೃತ ರ್ದುದೈವಿ.

ಪಾರ್ಟಿ ವೇಳೆ ಪೆಗ್​ ಹಾಕುವ ವಿಚಾರಕ್ಕೆ ಗಲಾಟೆ; ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ
ಸ್ನೇಹಿತನಿಂದಲೇ ಕೊಲೆಯಾದ ರಿಟಾಯರ್ಡ್ ಎಎಸ್​ಐ ಪುತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 25, 2023 | 5:13 PM

ರಾಮನಗರ‌, ಡಿ.25: ಎಣ್ಣೆ ಪಾರ್ಟಿ ವೇಳೆ ಸರಿಯಾಗಿ ಪೆಗ್ ಹಾಕಲು ಬರಲ್ಲವೆಂದು ನಡೆದ ಗಲಾಟೆಯಲ್ಲಿ ಆತ್ಮೀಯ ಸ್ನೇಹಿತನಿಂದಲೇ ನಿವೃತ್ತ ಎಎಸ್​ಐ ಪುತ್ರ ಕೊಲೆಯಾದ ಘಟನೆ ರಾಮನಗರ(Ramanagara)ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ದೀಪಕ್(23)​​ ಮೃತ ರ್ದುದೈವಿ. ಮನೆ ಕಟ್ಟಿಸುತ್ತಿದ್ದೇನೆ ಪಾರ್ಟಿ ಕೊಡುತ್ತೇನೆ ಬಾ ಎಂದು ಆರೋಪಿ ಪ್ರಸಾದ್ ಕರೆದಿದ್ದ. ಈ ಹಿನ್ನಲೆ ನಿನ್ನೆ(ಡಿ.24) ರಾತ್ರಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸರಿಯಾಗಿ ಪೆಗ್ ಹಾಕು ಎಂದು ಸ್ನೇಹಿತ ಪ್ರಸಾದ್ ಕೆನ್ನೆಗೆ ದೀಪಕ್ ಹೊಡೆದಿದ್ದಾನೆ. ಸ್ನೇಹಿತ ದೀಪಕ್ ಮಾತಿಗೆ ಆರೋಪಿ ಪ್ರಸಾದ್​ಗೆ ಕೋಪ ಬಂದಿದೆ.

ದೀಪಕ್ ಮಲಗಿದಾಗ ತಲೆಗೆ ಇಟ್ಟಿಗೆ ಎತ್ತಿ ಹಾಕಿ ಬರ್ಬರ ಹತ್ಯೆ

ಇನ್ನು ದೀಪಕ್​ ಕೆನ್ನೆಗೆ ಹೊಡೆಯುತ್ತಿದ್ದಂತೆ ಪ್ರಸಾದ್​ಗೆ ಕೋಪ ಬಂದಿದೆ. ಆದರೂ, ಆ ಕ್ಷಣದಲ್ಲಿ ತಡಕೊಂಡ ಪ್ರಸಾದ್​, ದೀಪಕ್ ಜೊತೆಯೇ ಮಲಗುವ ರೀತಿ ನಾಟಕವಾಡಿದ್ದಾನೆ. ಅದರಂತೆ ದೀಪಕ್ ಮಲಗಿದಾಗ ಪ್ರಸಾದ್​, ತಲೆಗೆ ಇಟ್ಟಿಗೆ ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪೆಗ್ ವಿಚಾರಕ್ಕಾಗಿಯೇ ಕೊಲೆ ನಡೆದಿದ್ಯಾ ಅಥವಾ ಹಿಂದಿನ‌ ದ್ವೇಷ ಏನಾದ್ರೂ ಇದೆಯಾ ಎಂದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಹೆತ್ತವರ ಕಣ್ಣು ಮುಂದೆಯೇ ಹರಿತು ಮಗಳ ನೆತ್ತರು!ಕೊಲೆ ಮಾಡಿದ ಪತಿಗೆ ಗ್ರಾಮಸ್ಥರಿಂದ ಧರ್ಮದೇಟು

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಹೊರವಲಯದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಭಸ್ಮವಾಗಿದೆ. ಹೊನ್ನಾಳಿ ಮೂಲದ ರಮೇಶಾಚಾರಿಗೆ ಸೇರಿದ ಕಾರು ಇದಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ ಬೆಂಗಳೂರು ಕಡೆ ತೆರಳುವಾಗ ಈ ದುರ್ಟಘನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಹಿರಿಯೂರು ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 25 December 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ