ನಿದ್ದೆಗೆ ಜಾರಿದ್ದ ಕಾನ್​ಸ್ಟೇಬಲ್​ ಕಿಸೆಯಿಂದ ಕೀ ತೆಗೆದುಕೊಂಡು ಪೊಲೀಸ್​ ಬಸ್​ ಕಳವಿಗೆ ಯತ್ನಸಿದ ಸೋನು

| Updated By: ವಿವೇಕ ಬಿರಾದಾರ

Updated on: May 17, 2024 | 9:53 AM

ಕಲಬುರಗಿ ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಡುಕ ಕಳ್ಳನೊಬ್ಬ ನಶೆಯಲ್ಲಿ ಪೊಲೀಸ್​ ಕಚೇರಿಗೆ ಬಂದಿದ್ದಾನೆ. ಬಳಿಕ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸ್​ ಬಸ್​ ಒಳಗಡೆ ಹೋಗಿ, ನಿದ್ದೆಗೆ ಜಾರಿದ್ದ ಪೊಲೀಸ್​ ಪೇದೆ ಕಿಸೆಯಿಂದ ಕೀ ತೆಗೆದುಕೊಂಡು ಕಳುವು ಮಾಡಲು ಯತ್ನಿಸಿದ್ದಾನೆ.

ನಿದ್ದೆಗೆ ಜಾರಿದ್ದ ಕಾನ್​ಸ್ಟೇಬಲ್​ ಕಿಸೆಯಿಂದ ಕೀ ತೆಗೆದುಕೊಂಡು ಪೊಲೀಸ್​ ಬಸ್​ ಕಳವಿಗೆ ಯತ್ನಸಿದ ಸೋನು
ಆರೋಪಿ ಸೋನು, ಪೊಲೀಸ್​ ಬಸ್​
Follow us on

ಕಲಬುರಗಿ, ಮೇ 17: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬಸ್​ ಅನ್ನು ಕಳ್ಳತನ ಮಾಡಲು ಯತ್ನಿಸಿದ್ದ ಘಟನೆ ಕಲಬುರಗಿ (Kalaburagi) ನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ (Police Commissioner office) ಆವರಣದಲ್ಲಿ ನಡೆದಿದೆ. ಸೋನು ಭಗಿರಥ ಕಳ್ಳತನದ ಆರೋಪಿ. ಕೆಎ 32 ಜಿ 1550 ನಂಬರ್​ನ ಸಿಆರ್​ಪಿಎಫ್​ ಪೊಲೀಸರ ಬಸ್ ಅನ್ನು ಕಮಿಷನರ್​ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿತ್ತು.

ಚತ್ತಿಸಘಡ ಮೂಲದ ಕಳ್ಳ ಸೋನು ಭಗಿರಥ ಕಲಬುರಗಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದನು. ಸೋಮವಾರ ಕುಡಿದ ನಶೆಯಲ್ಲಿ ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದೊಳಗೆ ಬಂದಿದ್ದಾನೆ. ಬಳಿಕ ಆವರಣದಲ್ಲಿ ನಿಲ್ಲಿಸಿದ್ದ ಸಿಆರ್​ಪಿಎಫ್​ ಪೊಲೀಸರ ಬಸ್ ಒಳಗಡೆ ಹೋಗಿದ್ದಾನೆ. ಬಸ್​ ಓರ್ವ ಕಾನ್​ಸ್ಟೇಬಲ್​ ಇದ್ದು, ನಿದ್ದೆಗೆ ಜಾರಿದ್ದರು.

ಪೊಲೀಸ್ ಕಾನ್ಸಟೇಬಲ್ ಬಸ್​ನ ಕಿಟಕಿಗೆ ತಮ್ಮ ಬಟ್ಟೆ ನೇತು ಹಾಕಿ, ಮಲಗಿದ್ದರು. ಇದನ್ನು ಕಂಡ ಕಳ್ಳ ಸೋನು ಪೊಲೀಸ್ ಕಾನ್ಸಟೇಬಲ್ ಜೇಬಿನಲ್ಲಿದ್ದ ಬಸ್​ ಕೀ ತೆಗೆದುಕೊಂಡಿದ್ದಾನೆ. ಬಳಿಕ ಬಸ್ ಸ್ಟಾರ್ಟ್ ಮಾಡುತ್ತಿದ್ದ ಹಾಗೆ ಪೊಲೀಸ್ ಕಾನ್ಸಟೇಬಲ್ ಎಚ್ಚೆತ್ತುಕೊಂಡಿದ್ದಾನೆ. ತಕ್ಷಣ ಪೊಲೀಸ್ ಕಾನ್ಸಟೇಬಲ್ ಆರೋಪಿ ಸೋನು ಭಗಿರಥನನ್ನು ಬಂಧಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಸರಣಿ ಕೊಲೆಗಳು, ಭುಗಿಲೆದ್ದ ಆಕ್ರೋಶ: ಕಾನೂನು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ನಾಯಕರಿಂದಲೇ ಅಸಮಾಧಾನ

ಒಡವೆ ಅಂಗಡಿಯಲ್ಲಿದ್ದ ಬಂಗಾರ ಕಳ್ಳತನ

ಇದೇ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್​ನಲ್ಲಿರುವ ತನಿಷ್ಕ ಒಡವೆ ಅಂಗಡಿಯಲ್ಲಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಇಬ್ಬರು ಮಹಿಳೆಯರು ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದಾರೆ. ಚಿನ್ನಾಭರಣ ಖರಿದಿ ನೇಪದಲ್ಲಿ ಹಲವು ಒಡವೆಗಳನ್ನ ತೆಗೆಸಿದ್ದರು. ಒಡೆವುಗಳನ್ನು ನೋಡುತ್ತಾ, ಅಂಗಡಿ ಸಿಬ್ಬಂದಿಗೆ ಕಾಣದಂತೆ ಬಂಗಾರದ ಬಳೆಯನ್ನು ಕದ್ದಿದ್ದಾರೆ. ಬಳಿಕ ಯಾವುದು ಇಷ್ಟವಾಗಲಿಲ್ಲ ಎಂದು ಮಹಿಳೆಯರು ಹೊರಗೆ ಹೋಗಿದ್ದಾರೆ. ಮಹಿಳೆಯರ ಖತರ್ನಾಕ್ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ