ಮೊಬೈಲ್ ಹೊಂದಿರದ ಅಂಜಲಿ ಕೊಲೆ ಆರೋಪಿ ವಿಶ್ವನನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು: ಪೊಲೀಸ್ ಕಮೀಶನರ್
ವಿಶ್ವ ಮಹಾರಾಷ್ಟ್ರ ಇಲ್ಲವೇ ಗೋವಾಗೆ ಪರಾರಿಯಾಗಿ ಒಂದೆರಡು ವರ್ಷ ಕಾಲ ತಲೆಮರೆಸಿಕೊಳ್ಳುವ ಯೋಚನೆ ಮಾಡಿದ್ದನಂತೆ. ಹೋಟೆಲ್ ಗಳಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿತ್ತು ಎಂದು ರೇಣುಕಾ ಹೇಳುತ್ತಾರೆ. ಅಂಜಲಿ ಮತ್ತು ತನ್ನ ನಡುವೆ ಪ್ರೀತಿಯಿತ್ತು ಅಂತ ಅವನು ಹೇಳುತ್ತಾನಾದರೂ ಅದನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಹುಬ್ಬಳ್ಳಿ: ಅಂಜಲಿ ಅಂಬಿಗೇರ್ (Anjali Ambiger) ಹೆಸರಿನ ಯುವತಿಯನ್ನು ಬರ್ಬರವಾಗಿ ಹತ್ಯೆ ಆರೋಪಿ ಗಿರೀಶ್ ಸಾವಂತ್ ಅಲಿಯಾಸ್ ವಿಶ್ವನನ್ನು (Vishwa) ಪೊಲೀಸರು ದಾವಣೆಗೆರೆಯಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದಾರೆ. ಅವನ ಬಂಧನ ಹೇಗೆ ಸಾಧ್ಯವಾಯಿತು ಅನ್ನೋದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರೇಣುಕಾ ಸುಕುಮಾರ್ (Renuka Sukumar) ಟಿವಿ9 ಗೆ ವಿವರಿಸಿದ್ದಾರೆ. ಕಳೆದ 6 ತಿಂಗಳುಗಳಿಂದ ಮೈಸೂರಿನ ಬಾರ್ ಮತ್ತು ರೆಸ್ಟುರಾಂಟೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿಶ್ವನ ಬಳಿ ಮೊಬೈಲ್ ಫೋನ್ ಇರದಿದ್ದ ಕಾರಣ ಅವನನ್ನು ಪತ್ತೆ ಮಾಡುವುದು ಪೊಲೀಸರಿಗೆ ಒಂದು ಸವಾಲಾಗಿತ್ತು. ಪೊಲೀಸರ 8 ತಂಡಗಳನ್ನು ರಚಿಸಿ ವಿಶ್ವನನ್ನು ಪತ್ತೆ ಮಾಡುವ ಕೆಲಸಕ್ಕೆ ಇಳಿಸಲಾಗಿತ್ತು. ಅವನು ದಾವಣಗೆರೆಯಲ್ಲಿರುವ ಬಗ್ಗೆ ಅಲ್ಲಿನ ರೇಲ್ವೇ ಪೊಲೀಸರಿಂದ ಮಾಹಿತಿ ಲಭ್ಯವಾಗಿತ್ತು. ಅಲ್ಲಿಯೂ ಇದ್ದ ತಮ್ಮದೊಂದು ತಂಡ ಅವನನ್ನು ಬಂಧಿಸಿತು ಎಂದು ಕಮೀಶನರ್ ಹೇಳುತ್ತಾರೆ. ವಿಶ್ವ ಮಹಾರಾಷ್ಟ್ರ ಇಲ್ಲವೇ ಗೋವಾಗೆ ಪರಾರಿಯಾಗಿ ಒಂದೆರಡು ವರ್ಷ ಕಾಲ ತಲೆಮರೆಸಿಕೊಳ್ಳುವ ಯೋಚನೆ ಮಾಡಿದ್ದನಂತೆ. ಹೋಟೆಲ್ ಗಳಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿತ್ತು ಎಂದು ರೇಣುಕಾ ಹೇಳುತ್ತಾರೆ. ಅಂಜಲಿ ಮತ್ತು ತನ್ನ ನಡುವೆ ಪ್ರೀತಿಯಿತ್ತು ಅಂತ ಅವನು ಹೇಳುತ್ತಾನಾದರೂ ಅದನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Hubballi Anjali Murder Case: ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ?