Karkala: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕ

ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಸಚ್ಚರಿಪೇಟೆ ಕುದ್ರುಟ್ಟುವಿನಲ್ಲಿ ನಡೆದಿದೆ.

Karkala: ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕ
ಆತ್ಮಹತ್ಯೆ ಮಾಡಿಕೊಂಡ ಚಾಲಕ ಕೃಷ್ಣ ಸಫಲಿಗ
Updated By: ಗಂಗಾಧರ​ ಬ. ಸಾಬೋಜಿ

Updated on: Jan 26, 2023 | 9:58 PM

ಉಡುಪಿ: ಕಾರಿನೊಳಗೆ ಪೆಟ್ರೋಲ್ (petrol) ಸುರಿದುಕೊಂಡು ಚಾಲಕ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಸಚ್ಚರಿಪೇಟೆ ಕುದ್ರುಟ್ಟುವಿನಲ್ಲಿ ನಡೆದಿದೆ. ಕುದ್ರುಟ್ಟು ನಿವಾಸಿ ಕಾರು ಚಾಲಕ ಕೃಷ್ಣ ಸಫಲಿಗ(46) ಮೃತ ವ್ಯಕ್ತಿ. ಸಹೋದರನ ಮನೆಯಿಂದ ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ಮುಗಿಸಿ ಬರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗುತ್ತಿದ್ದು, ಆತ್ಮಹತ್ಯೆಗೆ ಇದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪಿತೃವಿಯೋಗ

ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪಿತೃವಿಯೋಗವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಮೇಗೌಡ(85) ನಿಧನ ಹೊಂದಿದ್ದಾರೆ. ಗುಬ್ಬಿ ತಾಲೂಕಿನ ಸರ್ವೇಗಾರನಪಾಳ್ಯ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನಡೆಯಲಿದೆ. ಶಾಸಕ ಶ್ರೀನಿವಾಸ್ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಅಗಲಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಹೆಸರಿನಲ್ಲಿ ಖಾಸಗಿ ಕಂಪನಿಗೆ 9 ಕೋಟಿ 60 ಲಕ್ಷ ರೂ. ವಂಚನೆ: ಇಬ್ಬರ ಬಂಧನ

ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವು: 

ಚಿತ್ರದುರ್ಗ: ಕಾರು ಡಿಕ್ಕಿಯಾಗಿ ಬೈಕ್‌ ಸವಾರ ಸಾವನ್ನಪ್ಪಿದ್ದು, ಪುತ್ರಿ, ಮೊಮ್ಮಕ್ಕಳಿಬ್ಬರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರುದ್ರಮ್ಮನಹಳ್ಳಿ ಬಳಿ ಅಪಘಾತ ಉಂಟಾಗಿದೆ. ಗಿರಿಯಮ್ಮನಹಳ್ಳಿಯ ನಿವಾಸಿ ಓಬಯ್ಯ(52) ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಪುತ್ರಿ, ಇಬ್ಬರು ಮೊಮ್ಮಕ್ಕಳಿಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರಿನ ಹೈಗ್ರೌಂಡ್ಸ್​ ಠಾಣೆ ಪೊಲೀಸರಿಂದ ನಾಲ್ವರು ವಂಚಕರ ಬಂಧನ

ಬೆಂಗಳೂರು: ನಗರದ ಹೈಗ್ರೌಂಡ್ಸ್​ ಠಾಣೆ ಪೊಲೀಸರಿಂದ ನಾಲ್ವರು ವಂಚಕರ ಬಂಧನ ಮಾಡಿದ್ದಾರೆ. ಶೇಖ್​ ಸಾದಿಕ್, ಯೋಗೇಶ್, ಪ್ರಮೋದ್, ಸುನಿಲ್ ಜೋಶಿ ಬಂಧಿತರು. ಇ ಬಯೋಮೆಟ್ರಿಕ್ ಎವಲ್ಯೂಷನ್​ ಕಂಪನಿ ಕಾರ್ಯಕ್ರಮ ಆಯೋಜಿಸಿ ವಂಚಿಸುತ್ತಿದ್ದರು. ಗ್ರಾಹಕರಿಂದ ಡೆಪಾಸಿಟ್​ ಮಾಡಿಕೊಂಡು ಹೆಚ್ಚಿನ ಹಣದ ಆಮಿಷ ತೋರಿಸುತ್ತಿದ್ದರು. ಮಲ್ಟಿ ಲೆವೆಲ್​ ಮನಿ ಮಾರ್ಕೆಟಿಂಗ್​ ಸ್ಕೀಮ್​ ನಡೆಸಲು ಜಾಹೀರಾತು ನೀಡಿದ್ದರು. ಮ್ಯಾಗ್ನೆಟಿಕ್ ಉತ್ಪನ್ನಗಳ ಮಾರಾಟದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಈಗಾಗಲೇ 10 ಲಕ್ಷದವರೆಗೆ ಸಂಪಾದಿಸಿದ್ದಾರೆಂದು ಸನ್ಮಾನಿಸಿ ಪ್ರಚೋದನೆ ನೀಡಿದ್ದರು. ಇದು ವಂಚನೆ ಪ್ರಕರಣ ಎಂದು ಗುಪ್ತವಾರ್ತೆ ಸಿಬ್ಬಂದಿ ದೂರು ನೀಡಿದ್ದಾರೆ. ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ.

ಇದನ್ನೂ ಓದಿ: ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಕೇಸ್​​: ಅರಸೀಕೆರೆ ಪೊಲೀಸರಿಂದ ಬಿಜೆಪಿ ಮುಖಂಡ ಮತ್ತು ಕಾರು ಚಾಲಕನ ಬಂಧನ

ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ ಮನೆಗಳ್ಳರ ಬಂಧನ: 660 ಗ್ರಾಂ ಚಿನ್ನ ವಶಕ್ಕೆ

ಬೆಂಗಳೂರು: ಅರವತ್ತು ಬಾರಿ ಕಳ್ಳತನ ಮಾಡಿದ್ದ ನಟೋರಿಯಸ್ ಮನೆಗಳ್ಳರನ್ನು ಹೆಣ್ಣೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಫಯಾಜ್, ಪ್ರಸಾದ್ ಬಂಧಿತ ಆರೋಪಿಗಳು. ಸದ್ಯ ಆರೋಪಿಗಳಿಂದ 660 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರ, ಕೋಲಾರದಲ್ಲಿ ನ್ಯಾಯಾಧೀಶರ ನಿವಾಸ ಕಳ್ಳತನ ಮಾಡಿದ್ರು. ಆರೋಪಿಗಳು ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ಮಾಡಿದ್ದರು. ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಹೊರಡುತ್ತಿದ್ದರು. ಎಲ್ಲಿಯೂ ಒಂದು ಕಡೆ ನಿಲ್ಲುತ್ತಿರಲಿಲ್ಲಾ.

ಕಳ್ಳತನ ಮಾಡಿದ ಬಳಿಕ ಒಂದೊಂದು ಊರು ಅಲೆಯುತಿದ್ರು. ಹೋದ ಊರುಗಳಲ್ಲಿ ಕದ್ದ ಚಿನ್ನವನ್ನು ಅಡಮಾನ ಹಣ ಪಡೆದು ಮಜಾ ಮಾಡ್ತಿದ್ರು. ಇದುವರೆಗೆ ಹಲವಾರು ಬಾರಿ ಆರೋಪಿಗಳು ಅರೆಸ್ಟ್ ಆಗಿದ್ದರು. ಕಳೆದ ಒಂದು ವಾರದಲ್ಲಿ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಗಳು ಮತ್ತೆ ಕಳ್ಳತನ ಮಾಡಿದ್ರು. ಸದ್ಯ ಪೊಲೀಸರು ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.