ಗರ್ಭಿಣಿ, ಬಾಣಂತಿ ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಲಕ್ಷಾಂತರ ಮೌಲ್ಯದ ಮಾತ್ರೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ; ಸ್ಥಳೀಯರ ಆಕ್ರೋಶ

| Updated By: ಆಯೇಷಾ ಬಾನು

Updated on: Apr 22, 2022 | 12:48 PM

ಗರ್ಭಿಣಿಯರು, ಬಾಣಂತಿಯರಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಲಕ್ಷಾಂತರ ಮೌಲ್ಯದ ಮಾತ್ರೆಗಳು ಬಳಕೆ ಮಾಡದೆ ರಸ್ತೆಗೆ ಚೆಲ್ಲಲಾಗಿದೆ.

ಗರ್ಭಿಣಿ, ಬಾಣಂತಿ ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಲಕ್ಷಾಂತರ ಮೌಲ್ಯದ ಮಾತ್ರೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿ; ಸ್ಥಳೀಯರ ಆಕ್ರೋಶ
ಲಕ್ಷಾಂತರ ಮೌಲ್ಯದ ಮಾತ್ರೆಗಳು ಕುಪ್ಪೆಗೆ
Follow us on

ವಿಜಯನಗರ: ಜಿಲ್ಲೆಯ ಹೊಸಪೇಟೆಯ ಸಂಡೂರು ರಸ್ತೆಯ LFS ಶಾಲೆ ಬಳಿ ಅವಧಿ ಮೀರಿದ ಅಪಾರ ಪ್ರಮಾಣದ ಮಾತ್ರೆಗಳು ಪತ್ತೆಯಾಗಿವೆ. ಗರ್ಭಿಣಿಯರು, ಬಾಣಂತಿಯರಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಲಕ್ಷಾಂತರ ಮೌಲ್ಯದ ಮಾತ್ರೆಗಳು ಬಳಕೆ ಮಾಡದೆ ರಸ್ತೆಗೆ ಚೆಲ್ಲಲಾಗಿದೆ. ರಸ್ತೆಗೆ ಮಾತ್ರೆಗಳನ್ನ ಚೆಲ್ಲಿದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಂಠಿಯ ಚೀಲದ ಕೆಳಗೆ ಅಕ್ರಮವಾಗಿ ಸಾಗಿಸುತ್ತಿದ್ದ ದಿಮ್ಮಿ ವಶ
ಶುಂಠಿ ಚೀಲದ ಕೆಳಗೆ ಇರಿಸಿ ಕೇರಳಕ್ಕೆ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಬೀಟೆ ಮರದ ದಿಮ್ಮಿ ವಶಕ್ಕೆ ಪಡೆಯಲಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಹರೀಶ್ ಪೊನ್ನಪ್ಪಗೆ ಸೇರಿದ ವಾಹನದಲ್ಲಿ ಕೃತ್ಯ ನಡೆದಿದ್ದು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಬೀಟೆ ಮರದ ದಿಮ್ಮಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಹಾಗೂ ದಿಮ್ಮಿ ವಶಕ್ಕೆ ಪಡೆದಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಶೋಧದ ವೇಳೆ ಚಾಲಕ ಪರಾರಿಯಾಗಿದ್ದಾನೆ. ಶನಿವಾರ ಸಂತೆಯಿಂದ ಹುಣಸೂರು, ಹೆಚ್.ಡಿ.ಕೋಟೆ ಮಾರ್ಗವಾಗಿ ಬಾವಲಿ ಚೆಕ್ಪೋಸ್ಟ್ ಮೂಲಕ ಕೇರಳಕ್ಕೆ ಸಾಗಿಸಲು ಯತ್ನಿಸಿದ್ದರು. ಅರಣ್ಯ ಸಿಬ್ಬಂದಿ ಬೀಟೆ ಮರದ ದಿಮ್ಮಿ, ಗೂಡ್ಸ್ ವಾಹನ ವಶಕ್ಕೆ ಪಡೆದಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಷ್ಟ್ರ ಪಕ್ಷಿ ನವಿಲು ಸಾಗಿಸುತ್ತಿದ್ದವರಿಗೆ ದಂಡ ಹಾಕಿ ಮನೆ ಕಳಿಸಿದ ಪೊಲೀಸರು
ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿ ಬೈಕ್ ಮೇಲೆ ರಾಷ್ಟ್ರ ಪಕ್ಷಿ ನವಿಲುಯೊಂದನ್ನು ಚೀಲದಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ಹಿಡಿದಿದ್ದಾರೆ. ಮೊದಲಿಗೆ ಪೊಲೀಸರನ್ನು ನೋಡಿ ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಆದ್ರೆ ವಾಹನ ತಪಾಸಣೆ ಮಾಡುತ್ತಿದ್ದ ನಗರಠಾಣೆ ಪೊಲೀಸರು ಪರಾರಿಯಾಗುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಯುವಕರ ಪೈಕಿ ಒಬ್ಬ ಪರಾರಿಯಾಗಿದ್ದು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ನವಿಲು ಸಾಗಿಸುತ್ತಿದ್ದವರಿಗೆ ಹೆಲ್ಮೆಟ್ ದಂಡ ವಿಧಿಸಿರುವುದು ಅನುಮಾನ ತಂದಿದೆ. ಪೊಲೀಸರ ನೆಡೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ವಾಯುವಿಹಾರಕ್ಕೆ ಹೋದ ವೃದ್ದನಿಗೆ ಲಾರಿ ಡಿಕ್ಕಿ, ಸ್ಥಳದಲ್ಲಿಯೇ ಸಾವು
ದಾವಣಗೆರೆ: ಜಗಳೂರು ಪಟ್ಟಣದ ಕೊಟ್ಟೂರು ರಸ್ತೆಯ ಕೆರೆ ಏರಿ ಮೇಲೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧನಿಗೆ ಲಾರಿ ಡಿಕ್ಕಿ ಹೊಡೆದಿದ್ದು ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಕೆರೆ ಬಡಾವಣೆ ನಿವಾಸಿ ಹನುಮಂತಪ್ಪ(80) ಮೃತರು. ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಮತ್ತು ಒಮ್ನಿ ಮುಖಾಮುಖಿ, ಇಬ್ಬರ ಸಾವು
ದ.ಕನ್ನಡ: ಮುಲ್ಕಿ ಸಮೀಪದ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಒಮ್ನಿ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಭುಜಂಗ(58), ವಸಂತ ಕುಂದರ್ ಮೃತರು. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಮ್ನಿ ಕಾರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Petrol Price Today: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ; ದೆಹಲಿ, ಬೆಂಗಳೂರು ಸಹಿತ ಇತರ ನಗರಗಳಲ್ಲಿ ದರ ಹೀಗಿದೆ ನೋಡಿ

MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್​ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ

Published On - 9:21 am, Fri, 22 April 22