Crime News: ಮಧ್ಯರಾತ್ರಿ ಕಾರಿನಲ್ಲಿ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆಯೇ ಮದ್ಯ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ವ್ಯಕ್ತಿ

| Updated By: ಆಯೇಷಾ ಬಾನು

Updated on: Apr 15, 2022 | 9:17 AM

ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ, ಮುಂದೆ ಪೊಲೀಸ್ ಠಾಣೆ ಇದ್ದರೂ ರಾಜಾರೋಷವಾಗಿ ಮದ್ಯ ಸೇವಿಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಕಾರಿನಲ್ಲಿ ಬಂದು ಠಾಣೆ ಎದುರು ಎಣ್ಣೆ ಪಾರ್ಟಿ ಮಾಡಿದ್ದಾರೆ.

Crime News: ಮಧ್ಯರಾತ್ರಿ ಕಾರಿನಲ್ಲಿ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆಯೇ ಮದ್ಯ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ವ್ಯಕ್ತಿ
Crime News: ಮಧ್ಯರಾತ್ರಿ ಕಾರಿನಲ್ಲಿ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆಯೇ ಮದ್ಯ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ವ್ಯಕ್ತಿ
Follow us on

ಬೆಂಗಳೂರು: ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಂದೆಯೇ ವ್ಯಕ್ತಿ ರಾಜಾರೋಷವಾಗಿ ಮದ್ಯ ಸೇವನೆ ಮಾಡಿದ್ದಾರೆ. ಕಾರ್ಪೊರೇಷನ್ ಬಸ್ ನಿಲ್ದಾಣದಲ್ಲೇ ಮದ್ಯ ಕುಡಿದು ತೂರಾಡಿದ್ದಾರೆ. ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ, ಮುಂದೆ ಪೊಲೀಸ್ ಠಾಣೆ ಇದ್ದರೂ ರಾಜಾರೋಷವಾಗಿ ಮದ್ಯ ಸೇವಿಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಕಾರಿನಲ್ಲಿ ಬಂದು ಠಾಣೆ ಎದುರು ಎಣ್ಣೆ ಪಾರ್ಟಿ ಮಾಡಿದ್ದಾರೆ.

ನಾಯಿ ದಾಳಿಯಿಂದ ಬಾಲಕನಿಗೆ ಗಾಯ
ಮೈಸೂರು: ಬೀದಿ ನಾಯಿಗಳ ದಾಳಿಯಿಂದ ಬಾಲಕನಿಗೆ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬನ್ನಿಮಂಟಪದ ಟಿಪ್ಪು ಮಸೀದಿಯ ಬಳಿ ಬೀದಿ ನಾಯಿಗಳು ದಾಳಿ ಮಾಡಿದ್ದು ಮೊಹಮ್ಮದ್ ಉಮೈಜ್(9) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕುತ್ತಿಗೆ ಬೆನ್ನು ಕಾಲಿಗೆ ಗಾಯಗಳಾಗಿವೆ. ಉಮೈಜ್‌ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೈಸೂರಿನ ಕಿಡ್ನ್ಯಾಪ್ ಕೇಸ್ ಪತ್ತೆಗೆ ಕೇರಳದತ್ತ ಮುಖ ಮಾಡಿದ ಪೊಲೀಸರು
ಮೈಸೂರಿನ ನಂಜನಗೂಡು ರಸ್ತೆಯ ಕಡಕೊಳದಲ್ಲಿ ಮುಸುಕುಧಾರಿಗಳಿಂದ ಕಾರು ಚಾಲಕನ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಕೇರಳ ನೋಂದಣಿಯ ಕಾರಿನಲ್ಲಿ ಚಾಲಕನ ಕಿಡ್ನ್ಯಾಪ್ ಆಗಿರುವುದು ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಈಗ ಕೇರಳದತ್ತ ಮುಖ ಮಾಡಿದ್ದಾರೆ. ಕಿಡ್ನ್ಯಾಪರ್ಸ್ ಪತ್ತೆಗಾಗಿ ಸಿಸಿ ಕ್ಯಾಮರಾಗಳ ದೃಶ್ಯ ಪರಿಶೀಲನೆ ಮಾಡಲಾಗುತ್ತಿದೆ. ಕಳೆದ ವಾರ ಹಾಡಹಗಲೇ ಚಾಲಕನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

ತಾಯಿ, ಮಗು ವಿಷ ಸೇವಿಸಿ ಆತ್ಮಹತ್ಯೆ
ಉತ್ತರ ಕನ್ನಡ: ಶಿರಸಿ ತಾಲೂಕಿನ ಹುಲೇಕಲ್‌ನ ಕಮಟಗಿಯಲ್ಲಿ ವಿಷ ಸೇವಿಸಿ ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಅಶ್ವಿನಿ ಮಂಜುನಾಥ ಚೆನ್ನಯ್ಯ(28), ಮಗ ಸಾತ್ವಿಕ್ ಮಂಜುನಾಥ ಚೆನ್ನಯ್ಯ(5) ಮೃತರು. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿವೃತ್ತ ಯೋಧ ಕೊಲೆ ಆರೋಪಿಗಳು ಅರೆಸ್ಟ್
ಬೆಂಗಳೂರು: ನಿವೃತ್ತ ಯೋಧ ಸುರೇಶ್ ಅಲಿಯಾಸ್ ಜೂಡ್ ಕೊಲೆ ಪ್ರಕರಣದಲ್ಲಿ 24 ಗಂಟೆಯಲ್ಲೇ ಐವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬಾಬು ಕುಟ್ಟಿ ಸೇರಿ ಐವರು ಆರೋಪಿಗಳು ಅರೆಸ್ಟ್. ಏಪ್ರಿಲ್ ತಿಂಗಳ 13ರಂದು ಸುರೇಶ್ ಕೈಕಾಲು ಕಟ್ಟಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಬಳಿಕ ಸಾಕ್ಷಿ ನಾಶಕ್ಕೆಂದು ಆರೋಪಿಗಳು ಮನೆಯಲ್ಲಾ ಖಾರದಪುಡಿ ಚೆಲ್ಲಾಡಿದ್ದರು. ಸುರೇಶ್ನ ಸಂಪತ್ತನ್ನು ಲೂಟಿ ಮಾಡಲು ಕೊಲೆ ಮಾಡಿರೋದು ಪತ್ತೆಯಾಗಿದ್ದು ಹಲಸೂರು ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ನ್ಯಾಯ ಪಂಚಾಯಿತಿ ಕರೆದಿದ್ದಾಗ ಮಾರಾಮಾರಿ
ಯಾದಗಿರಿ: ಜಿಲ್ಲೆ ಗುರುಮಠಕಲ್‌ ತಾಲೂಕಿನ ಪುಟ್ಪಾಕ್ ಗ್ರಾಮದಲ್ಲಿ 2 ಸಮುದಾಯಗಳ ಮಧ್ಯೆ ಮಾರಾಮಾರಿಯಾಗಿದೆ. ರಾತ್ರಿ ವೇಳೆ ಮದ್ಯೆ ಸೇವಿಸಲು ಕುಳಿತುಕೊಂಡಾಗ ಎರಡು ಸಮುದಾಯದ ಯುವಕರ ಮಧ್ಯೆ ಗಲಾಟೆಯಾಗಿತ್ತು. ಇದೇ ವಿಚಾರಕ್ಕೆ ನ್ಯಾಯ ಪಂಚಾಯಿತಿ ಕರೆದಿದ್ದಾಗ ಮಾರಾಮಾರಿಯಾಗಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಬಂಧನ
ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆ ಜಾನ್ ಸನ್ ಓಮಿತುಂಡೇ ಪೀಟರ್(43)ನನ್ನು ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ನೈಜಿರಿಯಾ ಮೂಲದ ಆರೋಪಿ ಜಾನ್ ಹೆಚ್ಚಾಗಿ ಪ್ರಾರ್ಟಿ ಮೂಡ್ನ ಯುವಕರನ್ನೇ ಟಾರ್ಗೆಟ್ ಮಾಡುತಿದ್ದ. ಸದ್ಯ ಬಂಧಿತನಿಂದ 21 ಎಕ್ಸ್‌ಟಸಿ ಮಾತ್ರೆ, 0.8ಗ್ರಾಂ ಎಂಡಿಎಂಎ ಪೌಡರ್, ನಗದು, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಪವಾಡ ಪ್ರಸಿದ್ಧ ಎರಿತಾತ ಮಠದಲ್ಲಿ ಭಕ್ತರ ಕಾಣಿಕೆ ರಿಜಿಸ್ಟರ್ ಸಮೇತ ಕ್ಯಾಶಿಯರ್ ನಾಪತ್ತೆ; ತನಿಖೆಗೆ ಆದೇಶಿಸಿದ ದತ್ತಿ ಇಲಾಖೆ