ಪವಾಡ ಪ್ರಸಿದ್ಧ ಎರಿತಾತ ಮಠದಲ್ಲಿ ಭಕ್ತರ ಕಾಣಿಕೆ ರಿಜಿಸ್ಟರ್ ಸಮೇತ ಕ್ಯಾಶಿಯರ್ ನಾಪತ್ತೆ; ತನಿಖೆಗೆ ಆದೇಶಿಸಿದ ದತ್ತಿ ಇಲಾಖೆ

ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಇತಿಹಾಸ ಪ್ರಸಿದ್ಧ ಎರಿತಾತ ಮಠ ಎರಿತಾತನವರ ಪವಾಡಗಳ ಸಿದ್ಧಿ ಸ್ಥಳವೆಂದೇ ಖ್ಯಾತಿ ಗಳಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರು, ಕಾಣಿಕೆಯಾಗಿ ಹಣ, ಬೆಳ್ಳಿ, ಬಂಗಾರ ನೀಡ್ತಾರೆ. ಆದ್ರೀಗ ಭಕ್ತರು ನೀಡೋ ಕಾಣಿಕೆ ವಿಚಾರದಲ್ಲಿ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ.

ಪವಾಡ ಪ್ರಸಿದ್ಧ ಎರಿತಾತ ಮಠದಲ್ಲಿ ಭಕ್ತರ ಕಾಣಿಕೆ ರಿಜಿಸ್ಟರ್ ಸಮೇತ ಕ್ಯಾಶಿಯರ್ ನಾಪತ್ತೆ; ತನಿಖೆಗೆ ಆದೇಶಿಸಿದ ದತ್ತಿ ಇಲಾಖೆ
ಎರಿತಾತ ಮಠ
Follow us
| Updated By: ಆಯೇಷಾ ಬಾನು

Updated on:Apr 15, 2022 | 7:47 AM

ಬಳ್ಳಾರಿ: ನೂರಾರು ವರ್ಷಗಳ ಇತಿಹಾಸವಿರುವ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಎರಿತಾತ ಮಠದಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ. ಎರಡು ರಾಜ್ಯಗಳ ಗಡಿಭಾಗಕ್ಕೆ ಹೊಂದಿಕೊಂಡಿರುವ ಆ ಮಠಕ್ಕೆ ನಿತ್ಯ ಸಾವಿರಾರು ಭಕ್ತರು ಬರ್ತಾರೆ. ಆದ್ರೆ ಭಕ್ತರು ಲೆಕ್ಕವಿಲ್ಲದಷ್ಟು ಕೊಟ್ಟ ದೇಣಿಗೆ, ಬೆಳ್ಳಿ, ಬಂಗಾರ ನಾಪತ್ತೆಯಾಗಿದ್ದು ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ಇತಿಹಾಸ ಪ್ರಸಿದ್ಧ ಎರಿತಾತ ಮಠ ಎರಿತಾತನವರ ಪವಾಡಗಳ ಸಿದ್ಧಿ ಸ್ಥಳವೆಂದೇ ಖ್ಯಾತಿ ಗಳಿಸಿದೆ. ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ನಿತ್ಯ ಭಕ್ತರು ಆಗಮಿಸಿ ದರ್ಶನ ಪಡೆದು ಪಾವನರಾಗ್ತಾರೆ. ಸಹಸ್ರಾರು ಸಂಖ್ಯೆಯಲ್ಲಿ ಬರುವ ಭಕ್ತರು, ಕಾಣಿಕೆಯಾಗಿ ಹಣ, ಬೆಳ್ಳಿ, ಬಂಗಾರ ನೀಡ್ತಾರೆ. ಆದ್ರೀಗ ಭಕ್ತರು ನೀಡೋ ಕಾಣಿಕೆ ವಿಚಾರದಲ್ಲಿ ಗೋಲ್ ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ.

ಅಂದಹಾಗೆ ಈ ಮಠದ ಟ್ರಸ್ಟ್‌ನ ಅಧ್ಯಕ್ಷರು-ಕ್ಯಾಶಿಯರ್ ನಡುವೆ ಹಲವು ವರ್ಷಗಳಿಂದ ಭಿನ್ನಭಿಪ್ರಾಯ ಇದೆಯಂತೆ. ಇವರಿಬ್ಬರ ಭಿನ್ನಾಭಿಪ್ರಾಯದಿಂದಲೇ ಮಠದಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಮಠಕ್ಕೆ ಕಾಣಿಕೆ, ದೇಣಿಗೆಯಾಗಿ ಬರುವ ಬೆಳ್ಳಿ, ಬಂಗಾರ, ಹಣದ ಲೆಕ್ಕವಿರುವ ರಿಜಿಸ್ಟರ್ ನೊಂದಿಗೆ ಕ್ಯಾಶಿಯರ್ ವಿರುಪಾಕ್ಷಗೌಡ ನಾಪತ್ತೆಯಾಗಿದ್ದಾರೆ ಅಂತಾ ಟ್ರಸ್ಟ್ ನ ಅಧ್ಯಕ್ಷರೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಗ್ರಾಮದ ಮುಖಂಡರು ಕ್ಯಾಶಿಯರ್ ವಿರೂಪಾಕ್ಷಗೌಡ ಹಾಗೂ ಮಠದ ಟ್ರಸ್ಟ್ರ್ ಅಧ್ಯಕ್ಷ ಬಾಳನಗೌಡರ ಅಕ್ರಮದ ಬಗ್ಗೆ ತನಿಖೆಯಾಗ ಬೇಕೆಂದು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.

ಗ್ರಾಮದ ಮುಖಂಡರು ನೀಡಿರೋ ದೂರಿನನ್ವಯ ಧಾರ್ಮಿಕ ದತ್ತಿ ಇಲಾಖೆ ತನಿಖೆಗೆ ಆದೇಶಿಸಿದ್ದು, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇನ್ನು ಮಠದ ಅಕೌಂಟೆಂಟ್‌ನ ಪ್ರಶ್ನೆ ಮಾಡಿದ್ರೆ, ಹೌದು. ಕ್ಯಾಶಿಯರ್ ನಾಪತ್ತೆ ಆಗಿದ್ದಾರೆ. ಆದ್ರೆ ಎಷ್ಟು ಹಣ ಬೆಳ್ಳಿ ಬಂಗಾರ ಇದೆ ಅನ್ನೋದು ಅಧ್ಯಕ್ಷರು, ಕ್ಯಾಶಿಯರ್‌ಗೆ ಮಾತ್ರ ಗೊತ್ತು ಅಂತಾರೆ. ಒಟ್ನಲ್ಲಿ ಸೂಕ್ತ ತನಿಖೆ ಬಳಿಕ ಯಾರ್ದು ತಪ್ಪು ಯಾರ್ದು ಸತ್ಯ ಅನ್ನೋದು ಬಯಲಾಗಲಿದೆ. ಆಗ ಮಠದ ಅಧ್ಯಕ್ಷರ ಹಾಗೂ ಕ್ಯಾಶಿಯರ್ ನಿಜಬಣ್ಣ ಬೆಳಕಿಗೆ ಬರಲಿದೆ.

ವರದಿ: ವೀರಪ್ಪ, ಟಿವಿ9 ಬಳ್ಳಾರಿ

yerrithatha mutt

ಎರಿತಾತ ಮಠ

ಇದನ್ನೂ ಓದಿ: Bengaluru Rains: ಕಾಮಾಕ್ಯ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಕೊಚ್ಚಿ ಹೋದ ವಾಹನಗಳು

Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 700 ರೂ. ಹೆಚ್ಚಳ

Published On - 7:46 am, Fri, 15 April 22

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು