AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 700 ರೂ. ಹೆಚ್ಚಳ

Silver Price Today: ನಿನ್ನೆ 1 ಕೆಜಿ ಬೆಳ್ಳಿ ಬೆಲೆ 1,500 ರೂ. ಏರಿಕೆಯಾಗಿತ್ತು. ಇಂದು 1 ಕೆಜಿಗೆ 700 ರೂ. ಏರಿಕೆ ಕಂಡಿದೆ.

Gold Price Today: ಚಿನ್ನದ ಬೆಲೆ ಮತ್ತೆ ಕೊಂಚ ಏರಿಕೆ; ಬೆಳ್ಳಿ ದರ 700 ರೂ. ಹೆಚ್ಚಳ
ಚಿನ್ನದ ಬೆಲೆ
TV9 Web
| Edited By: |

Updated on: Apr 15, 2022 | 6:10 AM

Share

ಬೆಂಗಳೂರು: ಕಳೆದ ವಾರ ಚಿನ್ನದ ಬೆಲೆ ಹೆಚ್ಚೇನೂ ಏರಿಳಿತಗಳನ್ನು ಕಂಡಿರಲಿಲ್ಲ. ಆದರೆ, ನಿನ್ನೆಯಿಂದ ಮತ್ತೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಇಂದು ಚಿನ್ನದ ದರ (Gold Rate) 220 ರೂ. ಏರಿಕೆ ಕಂಡಿದೆ. ಆದರೆ, ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 700 ರೂ. ಏರಿಕೆಯಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 49,350 ರೂ. ಇದ್ದುದು 49,550 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 53,840 ರೂ. ಇದ್ದುದು 54,060 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,050 ರೂ. ಮುಂಬೈ- 49,550 ರೂ, ದೆಹಲಿ- 49,550 ರೂ, ಕೊಲ್ಕತ್ತಾ- 49,550 ರೂ, ಬೆಂಗಳೂರು- 49,550 ರೂ, ಹೈದರಾಬಾದ್- 49,550 ರೂ, ಕೇರಳ- 49,550 ರೂ, ಪುಣೆ- 49,580 ರೂ, ಮಂಗಳೂರು- 49,550 ರೂ, ಮೈಸೂರು- 49,550 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 54,600 ರೂ, ಮುಂಬೈ- 54,060 ರೂ, ದೆಹಲಿ- 54,060 ರೂ, ಕೊಲ್ಕತ್ತಾ- 54,060 ರೂ, ಬೆಂಗಳೂರು- 54,060 ರೂ, ಹೈದರಾಬಾದ್- 54,060 ರೂ, ಕೇರಳ- 54,060 ರೂ, ಪುಣೆ- 54,090 ರೂ, ಮಂಗಳೂರು- 54,060 ರೂ, ಮೈಸೂರು- 54,060 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ (Silver Price) ಭಾರೀ ಏರಿಕೆಯಾಗಿದೆ.

ಇಂದಿನ ಬೆಳ್ಳಿಯ ದರ: ನಿನ್ನೆ 1 ಕೆಜಿ ಬೆಳ್ಳಿ ಬೆಲೆ 1,500 ರೂ. ಏರಿಕೆಯಾಗಿತ್ತು. ಇಂದು 1 ಕೆಜಿಗೆ 700 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 69,300 ರೂ. ಇದ್ದುದು ಇಂದು 70,000 ರೂ.ಗೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,400 ರೂ, ಮೈಸೂರು- 74,400 ರೂ., ಮಂಗಳೂರು- 74,400 ರೂ., ಮುಂಬೈ- 70,000 ರೂ, ಚೆನ್ನೈ- 74,400 ರೂ, ದೆಹಲಿ- 70,000 ರೂ, ಹೈದರಾಬಾದ್- 74,400 ರೂ, ಕೊಲ್ಕತ್ತಾ- 70,000 ರೂ. ಆಗಿದೆ.

ಇದನ್ನೂ ಓದಿ: Gold Price Today: ಬೆಂಗಳೂರಿನಲ್ಲಿ 74,200ಕ್ಕೇರಿದ ಬೆಳ್ಳಿ ಬೆಲೆ; ಚಿನ್ನದ ದರವೂ ಹೆಚ್ಚಳ

Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ 4,400 ರೂ. ಏರಿಕೆ; ಇಂದಿನ ಚಿನ್ನದ ದರ ಹೀಗಿದೆ

Follow Us
TV9 Web
TV9 Web

TV9 Kannada

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!