AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ 4,400 ರೂ. ಏರಿಕೆ; ಇಂದಿನ ಚಿನ್ನದ ದರ ಹೀಗಿದೆ

Silver Price Today: ಇಂದು 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 4,400 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,100 ರೂ. ಇದ್ದುದು ಇಂದು 71,500 ರೂ.ಗೆ ಏರಿಕೆಯಾಗಿದೆ.

Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಬರೋಬ್ಬರಿ 4,400 ರೂ. ಏರಿಕೆ; ಇಂದಿನ ಚಿನ್ನದ ದರ ಹೀಗಿದೆ
ಚಿನ್ನದ ಬೆಲೆ
TV9 Web
| Edited By: |

Updated on: Apr 11, 2022 | 5:56 AM

Share

ಬೆಂಗಳೂರು: ಕಳೆದೆರಡು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು ಯಾವುದೇ ಏರಿಳಿತವಾಗಿಲ್ಲ. ಆದರೆ, ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ ದಾಖಲೆಯ 4,400 ರೂ. ಏರಿಕೆಯಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ 2 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 48,250 ರೂ. ಇದ್ದುದು 48,600 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,630 ರೂ. ಇದ್ದುದು 53,020 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,190 ರೂ. ಮುಂಬೈ- 48,600 ರೂ, ದೆಹಲಿ- 48,600 ರೂ, ಕೊಲ್ಕತ್ತಾ- 48,600 ರೂ, ಬೆಂಗಳೂರು- 48,600 ರೂ, ಹೈದರಾಬಾದ್- 48,600 ರೂ, ಕೇರಳ- 48,600 ರೂ, ಪುಣೆ- 48,700 ರೂ, ಮಂಗಳೂರು- 48,600 ರೂ, ಮೈಸೂರು- 48,600 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 53,660 ರೂ, ಮುಂಬೈ- 53,020 ರೂ, ದೆಹಲಿ- 53,020 ರೂ, ಕೊಲ್ಕತ್ತಾ- 53,020 ರೂ, ಬೆಂಗಳೂರು- 53,020 ರೂ, ಹೈದರಾಬಾದ್- 53,020 ರೂ, ಕೇರಳ- 53,020 ರೂ, ಪುಣೆ- 53,120 ರೂ, ಮಂಗಳೂರು- 53,020 ರೂ, ಮೈಸೂರು- 53,020 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಏರಿಳಿತವಾಗಿಲ್ಲ. ಬೆಳ್ಳಿ ಬೆಲೆ (Silver Price) ಕೂಡ ಏರಿಕೆಯಾಗುತ್ತಲೇ ಇದೆ.

ಇಂದಿನ ಬೆಳ್ಳಿಯ ದರ: ಇಂದು 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 4,400 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 67,100 ರೂ. ಇದ್ದುದು ಇಂದು 71,500 ರೂ.ಗೆ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,500 ರೂ, ಮೈಸೂರು- 71,500 ರೂ., ಮಂಗಳೂರು- 71,500 ರೂ., ಮುಂಬೈ- 71,500 ರೂ, ಚೆನ್ನೈ- 71,500 ರೂ, ದೆಹಲಿ- 67,000 ರೂ, ಹೈದರಾಬಾದ್- 71,500 ರೂ, ಕೊಲ್ಕತ್ತಾ- 67,000 ರೂ. ಆಗಿದೆ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ಮತ್ತೆ ಏರಿಕೆ; ಒಂದೇ ದಿನದಲ್ಲಿ 4,200 ರೂ. ಕುಸಿತ ಕಂಡ ಬೆಳ್ಳಿ ದರ

Gold Price Today: ಒಂದೇ ದಿನ 4,800 ರೂ. ಏರಿಕೆಯಾಗಿ ದಾಖಲೆ ಬರೆದ ಬೆಳ್ಳಿ ದರ; ಚಿನ್ನದ ಬೆಲೆಯೂ ಹೆಚ್ಚಳ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್