ಕೇರಳ: ಕಾನೂನು ನೆರವು ಕೋರಿ ಬಂದಿದ್ದ ಯುವತಿ ಮೇಲೆ ಅತ್ಯಾಚಾರ: ಸರ್ಕಾರಿ ವಕೀಲ ರಾಜೀನಾಮೆ

|

Updated on: Dec 01, 2023 | 9:14 AM

ಕಾನೂನು ನೆರವು ಕೋರಿ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಸರ್ಕಾರಿ ವಕೀಲರೊಬ್ಬರು ರಾಜೀನಾಮೆ ನೀಡಿದ್ದಾರೆ. ಹಿರಿಯ ಸರ್ಕಾರಿ ವಕೀಲ ಪ. ಜಿ ಮನು ರಾಜೀನಾಮೆ ನೀಡಿ ಅಡ್ವೊಕೇಟ್ ಜನರಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಕೇರಳ: ಕಾನೂನು ನೆರವು ಕೋರಿ ಬಂದಿದ್ದ ಯುವತಿ ಮೇಲೆ ಅತ್ಯಾಚಾರ: ಸರ್ಕಾರಿ ವಕೀಲ ರಾಜೀನಾಮೆ
ಅಪರಾಧನ
Image Credit source: India Today
Follow us on

ಕಾನೂನು ನೆರವು ಕೋರಿ ಬಂದಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿದ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಸರ್ಕಾರಿ ವಕೀಲರೊಬ್ಬರು ರಾಜೀನಾಮೆ ನೀಡಿದ್ದಾರೆ. ಹಿರಿಯ ಸರ್ಕಾರಿ ವಕೀಲ ಪ. ಜಿ ಮನು ರಾಜೀನಾಮೆ ನೀಡಿ ಅಡ್ವೊಕೇಟ್ ಜನರಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಹಿಂದೆ ಕಾನೂನು ನೆರವು ಕೋರಿದ್ದ ಯುವತಿಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು.

25 ವರ್ಷದ ಮಹಿಳೆಯೊಬ್ಬರು ಗ್ರಾಮಾಂತರ ಎಸ್ಪಿಗೆ ನೀಡಿದ ದೂರಿನ ಮೇರೆಗೆ ಚೋಟಾನಿಕರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2018 ರಲ್ಲಿ, ಎರ್ನಾಕುಲಂನ ಮಹಿಳೆಯೊಬ್ಬರು ಕಿರುಕುಳ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಗಾಗಿ ಸರ್ಕಾರಿ ವಕೀಲರನ್ನು ಸಂಪರ್ಕಿಸಿದರು. ಆದರೆ ಸರ್ಕಾರಿ ವಕೀಲರಾಗಿದ್ದ ಪಿ.ಜಿ.ಮನು ಎಂಬಾತನ ನೆರವು ಕೋರಿದ್ದಳು.

ಮಹಿಳೆಯನ್ನು ಕಡವಂತರದಲ್ಲಿರುವ ತನ್ನ ಕಚೇರಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತನ್ನ ನಗ್ನ ಚಿತ್ರಗಳನ್ನು ಕೂಡ ತೆಗೆದುಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಮತ್ತಷ್ಟು ಓದಿ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ವಿಮ್ಸ್‌ ನಿರ್ದೇಶಕರ ವಿರುದ್ಧ ಎಫ್ಐಆರ್ ದಾಖಲು

ಅಕ್ಟೋಬರ್ 10, 2023 ರಂದು ಆರೋಪಿ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಮಹಿಳೆಯ ಮನೆಗೆ ತೆರಳಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ಆಲುವಾ ಗ್ರಾಮಾಂತರ ಎಸ್ಪಿಗೆ ದೂರು ನೀಡಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ