ಬೆಂಗಳೂರು ಸೆ.19: ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯ ಕುತ್ತಿಗೆ ಕೂಯ್ದು ಕೊಲೆ ಮಾಡಿದ್ದ ಆರೋಪಿಗಳನ್ನು ಸಂಪಿಗೆಹಳ್ಲಿ ಪೊಲೀಸ್ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ. ಫಾರೂಕ್ ಖಾನ್ ಕೊಲೆಯಾದ ವ್ಯಕ್ತಿ. ಸುಹೇಲ್, ಮುಬಾರಕ್, ಅಲಿ ಅಕ್ರಮ್ ಬಂಧಿತ ಅರೋಪಿಗಳು. ಆರೋಪಿಗಳು ಸೋಮವಾರ ಬೆಳಿಗ್ಗೆ ಫಾರೂಕ್ ಖಾನ್ ಅವರನ್ನು ಆಟೋದಲ್ಲಿ ಕಿಡ್ನಾಪ್ (Kidnap) ಮಾಡಿಕೊಂಡು ಹೋಗಿದ್ದಾರೆ. ನಂತರ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾವತಿ ಲೇಔಟ್ ರಸ್ತೆಯಲ್ಲಿ ಚಾಕುವಿಬಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದಾರೆ.
ಫಾರೂಕ್ ಖಾನ್ ಕಾಣದಿದ್ದಾಗ, ಕುಟುಂಬಸ್ಥರು ಸಂಪಿಗೆಹಳ್ಳಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಇದೇ ವೇಳೆ ಈ ವೇಳೆ ಕೊಲೆ ಮಾಡಿರುವ ಆರೋಪಿಗಳು ಸಹ ಪೊಲೀಸ್ ಠಾಣೆಗೆ ಬಂದು, ತಾವೇ ತಮ್ಮ ದ್ವೇಷಕ್ಕಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಆರೋಪಿಗಳು ಮತ್ತು ಫಾರೂಕ್ ಖಾನ್ ಎಲ್ಲರೂ ಪರಿಚಿತರೇ ಆಗಿದ್ದಾರೆ.
ಆರೋಪಿ ಸುಹೇಲ್ಗೆ, “ನೀನು ಕೆಟ್ಟದಾಗಿ ಮಾತನಾಡುತ್ತೀಯಾ, ನನ್ನನ್ನು ಕೆಟ್ಟದಾಗಿ ಬಿಂಬಿಸುತ್ತಿಯಾ ಮತ್ತು ಗಾಂಜಾ ಮಾರಾಟ ಮಾಡುತ್ತೀಯಾ. ಈ ಬಗ್ಗೆ ನಾನು ಪೊಲೀಸರಿಗೆ ಹೇಳುತ್ತೇನೆ” ಎಂದು ಫಾರೂಕ್ ಖಾನ್ ಹೇಳಿದ್ದರು.
ಇದನ್ನೂ ಓದಿ: ಒಂಬತ್ತು ಇಂಚು ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಇದರಿಂದ ಕೋಪಗೊಂಡಿದ್ದ ಸುಹೇಲ್ “ನಾನು ಗಾಂಜಾ ವ್ಯವಹಾರ ನಡೆಸುತಿರಲಿಲ್ಲ. ಆದರೂ ಸಹ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ” ಎಂದು ಸುಹೇಲ್ ಆಟೋದಲ್ಲಿ ಕರೆದುಕೊಂಡು ಹೋಗಿ ಇತರರೊಂದಿಗೆ ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ