ಕೋಲಾರ: ಒಂಬತ್ತು ಇಂಚು ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
ಕೋಲಾರ ನಗರದ ಇದ್ರೀಸ್ ಸಾಬ್ ಬಡಾವಣೆಯಲ್ಲಿ ಒಂಬತ್ತು ಇಂಚು ಜಾಗದ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಕೋಲಾರ ಸೆ.19: ಕೋಲಾರ (Kolar) ನಗರದ ಇದ್ರೀಸ್ ಸಾಬ್ ಬಡಾವಣೆಯಲ್ಲಿ ಒಂಬತ್ತು ಇಂಚು ಜಾಗದ ವಿಚಾರವಾಗಿ ಶುರುವಾದ ಜಗಳ (Clash) ಕೊಲೆಯಲ್ಲಿ ಅಂತ್ಯ ಕಂಡಿದೆ. ಮುಜುಮಿಲ್ ಪಾಷಾ ಕೊಲೆಯಾದ ದುರ್ದೈವಿ. ರೋಷನ್, ಜಮೀರ್, ನಬೀವುಲ್ಲ, ಫಿರ್ದೋಸ್ ಕೊಲೆ ಮಾಡಿದ ಆರೋಪಿಗಳು. ಮುಜುಮಿಲ್ ಪಾಷಾ ತಂದೆ ಮನೆ ನಿರ್ಮಾಣ ವೇಳೆ 9 ಇಂಚು ಕಿಟಕಿ ಸರ್ಜಾ ಹೆಚ್ಚಾಗಿ ನಿರ್ಮಿಸಿದ್ದರು. ಇದರಿಂದ ಓಡಾಡೊಕೆ ತೊಂದರೆಯಾಗುತ್ತದೆ ಎಂದು ಪಕ್ಕದ ಮನೆಯವರು ಸೋಮವಾರ (ಸೆ.18) ತಕರಾರು ತೆಗೆದಿದ್ದರು.
ಈ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೆ ಏರಿ ಕೊಲೆಯಲ್ಲಿ ಅಂತ್ಯವಾಗಿದೆ. ಇದೀಗ ಆರೋಪಿಗಳು ಕುಟುಂಬ ಸಮೇತ ಪರಾರಿಯಾಗಿದ್ದಾರೆ. ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಷಹಾರ ಸೇವಿಸಿ ಹಸು ಸಾವು, ಎರಡು ಹಸುವಿನ ಸ್ಥಿತಿ ಗಂಭೀರ
ಇನ್ನು ಇದೇ ಜಿಲ್ಲೆಯ ಮಾಲೂರು ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ವಿಷಹಾರ ಸೇವಿಸಿ ಹಸು ಮೃತಪಟ್ಟಿದ್ದು, ಎರಡು ಹಸುವಿನ ಸ್ಥಿತಿ ಗಂಭೀರವಾಗಿದೆ. ರೈತ ಮಹದೇವ ಎಂಬುವರಿಗೆ ಸೇರಿದ ಲಕ್ಷ ಬೆಲೆ ಬಾಳುವ ಹಸುಗಳು ಇವಾಗಿವೆ.
ದುಷ್ಕರ್ಮಿಗಳು ತಿನ್ನುವ ಆಹಾರದಲ್ಲಿ ವಿಷ ಹಾಕಿ ಹಸುವಿಗೆ ನೀಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತೀವ್ರ ಅಸ್ವಸ್ಥಗೊಂಡ ಹಸುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೆಜ್ಜೇನು ದಾಳಿ: ಓರ್ವ ವ್ಯಕ್ತಿ ಸಾವು, 10 ಜನರಿಗೆ ಗಾಯ
ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಬಾಲಕ ಬಲಿ
ಬಂಗಾರಪೇಟೆ ತಾಲ್ಲೂಕು ತಮ್ಮೇನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಬಾಲಕ ಮೃತಪಟ್ಟಿದ್ದಾನೆ. ಪ್ರಜ್ವಲ್ (16) ಮೃತ ಬಾಲಕ. 11ಕೆವಿ ಕಂಬದಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದ್ದು, ಕಂಬದ ಬಳಿ ಹೋದ ಬಾಲಕನಿಗೆ ವಿದ್ಯುತ್ ತಗಲಿ ಸ್ಥಳದಲ್ಲೇ ಸಾವೀಗಿಡಾಗಿದ್ದಾನೆ. ವಿದ್ಯುತ್ ಕಂಬಕ್ಕೆ ಗ್ರೌಂಡಿಗ್ ಹಾಕದ ಪರಿಣಾಮ ವಿದ್ಯುತ್ ಸೋರಿಕೆಯಾಗಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ