ಕೊಡಗಿನಲ್ಲಿ ಫೈನಾನ್ಸ್ ಕಂಪನಿಗಳಿಗೆ ಬುರ್ಖ ತಂದಿಟ್ಟ ಸಂಕಷ್ಟ; ಯಾರದ್ದೋ ಹೆಸರಿನಲ್ಲಿ ಇನ್ಯಾರಿಗೋ ಸಾಲ‌

ಫೈನಾನ್ಸ್ ಕಂಪೆನಿಗಳಿಗೆ ಬುರ್ಖ ಧರಿಸಿದ ಮಹಿಳೆಯಿಂದ ವಂಂಚನೆ ಎಸಗಲಾಗಿದೆ. ಸರಿಯಾಗಿ ತಪಾಸಣೆ ನಡೆಸದಂತೆ ಯಾರದ್ದೋ ಹೆಸರಿನಲ್ಲಿ ಇನ್ನಾರಿಗೋ ಸಾಲ‌ನೀಡಿ ಕೊಡಗಿನ ಮೈಕ್ರೋಫೈನಾನ್ಸ್ ಕಂಪನಿಗಳು ಎಡವಟ್ಟು ಮಾಡಿಕೊಂಡಿವೆ.

ಕೊಡಗಿನಲ್ಲಿ ಫೈನಾನ್ಸ್ ಕಂಪನಿಗಳಿಗೆ ಬುರ್ಖ ತಂದಿಟ್ಟ ಸಂಕಷ್ಟ; ಯಾರದ್ದೋ ಹೆಸರಿನಲ್ಲಿ ಇನ್ಯಾರಿಗೋ ಸಾಲ‌
ಕೊಡಗಿನಲ್ಲಿ ಫೈನಾನ್ಸ್ ಕಂಪನಿಗಳಿಗೆ ಬುರ್ಖ ತಂದಿಟ್ಟ ಸಂಕಷ್ಟ
Updated By: Rakesh Nayak Manchi

Updated on: Oct 15, 2022 | 1:49 PM

ಕೊಡಗು: ಮೈಕ್ರೋಫೈನಾನ್ಸ್ ಕಂಪೆನಿಗಳು ಸಾಲ ನೀಡುವ ವಿಚಾರದಲ್ಲಿ ಮಾಡಿದ ತಪ್ಪಿನಿಂದಾಗಿ ವಂಚನೆಗೆ ಒಳಗಾಗಿದೆ. ಅಂದರೆ ಬುರ್ಖ ಧರಿಸಿದ ಮಹಿಳೆಯೊಬ್ಬಳು ನಕಲಿ ದಾಖಲೆ ನೀಡಿ ಸಾಲ ಪಡೆದಿದ್ದಾಳೆ. ಆದರೆ ದಾಖಲೆಯಲ್ಲಿರುವ ಫೋಟೋ ಮತ್ತು ಮಹಿಳೆಯ ಮುಖದ ವ್ಯತ್ಯಾಸವನ್ನು ಗುರುತಿಸದೆ ನೇರವಾಗಿ ಲಕ್ಷಾಂತರ ರೂಪಾಯಿ ಸಾಲ ನೀಡಿದ ಫೈನಾನ್ಸ್ ಕಂಪನಿಗಳು ಸಂಕಷ್ಟಕ್ಕೆ ಒಳಗಾಗಿವೆ.
ಆಶಿಯಾ ಎಂಬಾಕೆ ಕೊಡಗಿನ ಕುಶಾಲನಗರ ಪಟ್ಟಣದಲ್ಲಿನ ಸಮಸ್ತ, ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಆಗಮಿಸಿ ತನ್ನದೇ ಹೆಸರಿನ ಬೇರೆಯವರ ಆಧಾರ್ ಕಾರ್ಡ್ ನೀಡಿ ಲಕ್ಷಾಂತರ ಸಾಲ ಮಾಡಿದ್ದಾಳೆ. ಆದರೆ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಆಕೆಯ ಬುರ್ಖಾ ತೆಗೆದು ಮುಖ‌ ಪರಿಶೀಲಿಸದೇ ಸಾಲ ಮಂಜೂರು ಮಾಡಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿಗಳನ್ನು ಫೈನಾನ್ಸ್ ಕಂಪನಿಗಳು ಕಳೆದುಕೊಂಡಿವೆ.

ವಂಚಕಿ ಆಶಿಯಾ ಇದೇ ರೀತಿ ಹಲವು ಫೈನಾನ್ಸ್ ಕಂಪೆನಿಗಳಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಫೈನಾನ್ಸ್​ ಕಂಪನಿಗಳು ಮಾಡಿದ ತಪ್ಪಿನಿಂದಾಗಿ ವಂಚನೆಗೊಳಗಾದ ಆಧಾರ್ ಕಾರ್ಡ್ ಮಾಲೀಕರು ಪರದಾಡುವಂತಾಗಿದೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸುತ್ತಿದ್ದು, ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಂಚನೆಗೊಳಗಾದ ಮಡಿಕೇರಿ ನಿವಾಸಿ ಆಶಿಯಾ, ಮಿಶ್ರಿಯಾ ಬೆದರಿಕೆ ಹಾಕಿದ್ದಾರೆ.

ಜಾತ್ರೆಗೆ ಹೋದವನ ಮೇಲೆ ಹಲ್ಲೆ

ಬೆಂಗಳೂರು: ಜಾತ್ರೆಗೆ ಹೋಗಿದ್ದ ಯುವಕನೊಬ್ಬನ ಮೇಲೆ ಕ್ಷುಲಕ ಕಾರಣಕ್ಕೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಕ್ತಿವೇಲು ಎಂಬ ಯುವಕ ವಾರದ ಹಿಂದೆ ಕಮ್ಮನಹಳ್ಳಿ ಜಾತ್ರೆ ನೋಡಲು ಹೋಗಿದ್ದನು. ಈ ವೇಳೆ ಫ್ರೇಜರ್ ಟೌನ್​ನ ಥಾಮಸ್ ಬೇಕರಿ ಬಳಿ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಶಕ್ತಿವೇಲುನನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡ ಪುಲಿಕೇಶಿನಗರ ಪೊಲೀಸರು, ವಿಘ್ನೇಶ್ ಹಾಗೂ ಪುರುಷೋತ್ತಮ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರೋ ಮಾರ್ಷಲ್ ಎಂಬಾತನ ಬಂಧನಕ್ಕೆ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:41 pm, Sat, 15 October 22