Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!

| Updated By: ಸಾಧು ಶ್ರೀನಾಥ್​

Updated on: Oct 27, 2021 | 1:22 PM

ಹಣ ಪಾವತಿಸಲು ಪುಟ್ಟರಾಜುವಿನಿಂದ ATM ಕಾರ್ಡ್ ಡಿಟೇಲ್ಸ್ ಪಡೆದಿದ್ದ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ನಮ್ಮಲ್ಲಿ ಕಾರ್ಡ್ ಟು ಕಾರ್ಡ್ ಪೇಮೆಂಟ್ ಇದೆಯೆಂದು ಯಾಮಾರಿಸಿದ್ದ. ಹೀಗಾಗಿ ಮಂಡಿ ಮಾಲೀಕ ಪುಟ್ಟರಾಜು ಕಾರ್ಡ್ ಡಿಟೇಲ್ಸ್ ಕೊಟ್ಟಿದ್ದ. ಕಾರ್ಡ್ ಡಿಟೇಲ್ಸ್ ಕೊಡುತ್ತಿದ್ದಂತೆ ವಿಕ್ರಂ ಹಣ ಎಗರಿಸಿದ್ದ.

Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!
Kolar Cyber Crime: ಭಾರತೀಯ ಸೇನೆ ಹೆಸರಿನಲ್ಲಿ ಕೋಲಾರ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ!
Follow us on

ಕೋಲಾರ: ಭಾರತೀಯ ಸೈನಿಕರ ಹೆಸರಿನಲ್ಲಿ ಇಲ್ಲಿನ ಎಪಿಎಂಸಿ ಮಂಡಿ ಮಾಲೀಕನಿಗೆ ವಂಚನೆ ಎಸಗಲಾಗಿದ್ದು, ಮಂಡಿ ಮಾಲೀಕನ ಖಾತೆಯಲ್ಲಿದ್ದ ಹಣ ಎಗರಿಸಲಾಗಿದೆ. ಕೋಲಾರ APMC ಮಂಡಿ ಮಾಲೀಕ ಪುಟ್ಟರಾಜು ಬಳಿ ‘ನಮಗೆ 10 ದಿನಗಳಿಗೆ ತರಕಾರಿಗಳು ಬೇಕು’ ಎಂದು ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದ. ತನ್ನ ಹೆಸರು ವಿಕ್ರಂ ಎಂದೂ, ತಾನು ಇಂಡಿಯನ್ ಆರ್ಮಿಯಿಂದ ಕರೆ ಮಾಡುತ್ತಿರುವುದಾಗಿ ತರಕಾರಿ ಆರ್ಡರ್ ಮಾಡಿದ್ದ. ವಾಟ್ಸಾಪ್​ ಮಾತುಕತೆ ನಡೆಸಿದ್ದ.

ಬಳಿಕ ಹಣ ಪಾವತಿಸಲು ಪುಟ್ಟರಾಜುವಿನಿಂದ ATM ಕಾರ್ಡ್ ಡಿಟೇಲ್ಸ್ ಪಡೆದಿದ್ದ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ನಮ್ಮಲ್ಲಿ ಕಾರ್ಡ್ ಟು ಕಾರ್ಡ್ ಪೇಮೆಂಟ್ ಇದೆಯೆಂದು (Indian Army Canteen Smart Card) ಯಾಮಾರಿಸಿದ್ದ. ಹೀಗಾಗಿ ಮಂಡಿ ಮಾಲೀಕ ಪುಟ್ಟರಾಜು ಕಾರ್ಡ್ ಡಿಟೇಲ್ಸ್ ಕೊಟ್ಟಿದ್ದ. ಕಾರ್ಡ್ ಡಿಟೇಲ್ಸ್ ಕೊಡುತ್ತಿದ್ದಂತೆ ವಿಕ್ರಂ ಹಣ ಎಗರಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಮಂಡಿ ಮಾಲೀಕ ಪೊಲೀಸ್​ ಠಾಣೆಗೆ ದೂರು ನೀಡಿದ್ದ. ಸೈಬರ್ ಕ್ರೈಂ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Also Read:
ಮಾಜಿ ಪ್ರೇಯಸಿಯನ್ನು ಜೀವಸಹಿತ ಸೂಟ್​ಕೇಸ್​​ನಲ್ಲಿ ತುಂಬಿ ಕಾಡಿಗೆ ಎಸೆದಿದ್ದವನಿಗೆ 30 ವರ್ಷ ಜೈಲುಶಿಕ್ಷೆ..

News Top 9: ‘Karnataka’ Top Stories Of The Day (27-10-2021)

(Kolar Cyber Crime miscreants cheats apmc shopkeeper in the name of indian army)

Published On - 9:15 am, Wed, 27 October 21