ಮಾಜಿ ಪ್ರೇಯಸಿಯನ್ನು ಜೀವಸಹಿತ ಸೂಟ್ಕೇಸ್ನಲ್ಲಿ ತುಂಬಿ ಕಾಡಿಗೆ ಎಸೆದಿದ್ದವನಿಗೆ 30 ವರ್ಷ ಜೈಲುಶಿಕ್ಷೆ..
ಡಾ ಸಿಲ್ವಾ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಆತನ ಪರ ವಕೀಲರು ಹೇಳಿದರೂ ಪ್ರಾಸಿಕ್ಯೂಟರ್ ಅದನ್ನು ಒಪ್ಪಲಿಲ್ಲ. ಆತನಿಗೆ ಶಿಕ್ಷೆಯಾಗಲೇಬೇಕು ಎಂದು ವಾದಿಸಿದರು.
ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿ, ನಂತರ ಆಕೆಯನ್ನು ಸೂಟ್ಕೇಸ್ನಲ್ಲಿ ತುಂಬಿ ಕೊಂದಿದ್ದ ವ್ಯಕ್ತಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಈ ಘಟನೆ ನಡೆದದ್ದು ನ್ಯೂಯಾರ್ಕ್ನಲ್ಲಿ. ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯೊಂದಿಗೆ ಜಗಳ ಮಾಡಿದ್ದಲ್ಲದೆ, ಆಕೆಯ ಕೈಕಾಲು ಕಟ್ಟಿ, ಸೂಟ್ಕೇಸ್ನಲ್ಲಿ ತುಂಬಿದ್ದ. ಆಕೆ ಉಸಿರುಕಟ್ಟಿ ಮೃತಪಟ್ಟಿದ್ದಳು. ಆರೋಪಿಯನ್ನು ಜೇವಿಯರ್ ಡಾ ಸಿಲ್ವಾ (26) ಎಂದು ಗುರುತಿಸಲಾಗಿದೆ. ದಕ್ಷಿಣ ಅಮೆರಿಕಾದ ವೆನಿಜುವೆಲಾದಿಂದ 2019ರಲ್ಲಿ ವಲಸೆ ಬಂದವನಾಗಿದ್ದ. 2019ರಲ್ಲಿ ಈತ ಮಾಡಿದ್ದ ಕೊಲೆ ಕೇಸ್ನಡಿ ಇದೀಗ ನ್ಯೂಯಾರ್ಕ್ನ ವೈಟ್ ಪ್ಲೇನ್ಸ್ನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ವಿನ್ಸೆಂಟ್ ಬ್ರಿಚೆಟ್ಟಿ ಎಂಬುವರು ಶಿಕ್ಷೆ ಪ್ರಕಟಿಸಿದ್ದಾರೆ.
ಬುಕ್ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 24ವರ್ಷದ ಯುವತಿ ವ್ಯಾಲೆರಿ ರೆಯೆಸ್ ಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಡಾ ಸಿಲ್ವಾ ವಿರುದ್ಧ ಕಳೆದವರ್ಷ ಪ್ರಕರಣ ದಾಖಲಾಗಿತ್ತು. ಡಾ ಸಿಲ್ವಾ ಒಬ್ಬ ಸ್ವಾರ್ಥಿ, ಆಸೆಬುರುಕ ಎಂದು ರೆಯೆಸ್ ತಾಯಿ ಕೂಡ ಕೋರ್ಟ್ಗೆ ಹೇಳಿದ್ದರು. ತನಗೂ ಮತ್ತು ರೆಯೆಸ್ಗೂ ಸಂಬಂಧವಿತ್ತು. ಆದರೆ ಬ್ರೇಕ್ಅಪ್ ಆಯ್ತು..ಅದಾದ 9 ತಿಂಗಳ ನಂತರ ಅವಳ ಅಪಾರ್ಟ್ಮೆಂಟ್ನಲ್ಲೇ ನಮ್ಮಿಬ್ಬರಿಗೂ ಸಿಕ್ಕಾಪಟೆ ಜಗಳ ಆಯ್ತು ಎಂಬುದನ್ನು ಡಾ ಸಿಲ್ವಾ ಕೋರ್ಟ್ ಎದುರು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಕೃತ್ಯದ ಬಗ್ಗೆ ರೆಯೆಸ್ ತಾಯಿಯ ಬಳಿ ಅಳುತ್ತ ಕ್ಷಮೆಯನ್ನೂ ಕೇಳಿದ್ದಾನೆ.
ಇನ್ನು ಡಾ ಸಿಲ್ವಾ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಆತನ ಪರ ವಕೀಲರು ಹೇಳಿದರೂ ಪ್ರಾಸಿಕ್ಯೂಟರ್ ಅದನ್ನು ಒಪ್ಪಲಿಲ್ಲ. ಯುವತಿಯನ್ನು ಸೂಟ್ಕೇಸ್ನಲ್ಲಿ ಹಾಕುವಾಗ ಆತ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ, ಆಕೆಯದ್ದೇ ಡೆಬಿಟ್ ಕಾರ್ಡ್ ಬಳಸಿ 5000 ಡಾಲರ್ಗಳಷ್ಟು ಹಣ ವಿತ್ಡ್ರಾ ಮಾಡಿದ್ದಾನೆ. ಅವಳ ಐಪ್ಯಾಡ್ ಕೂಡ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಧೀಶರಿಗೆ ಹೇಳಿದ್ದರು. ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿದ ಡಾ ಸಿಲ್ವಾ ಸೂಟ್ಕೇಸ್ನಲ್ಲಿ ತುಂಬಿ ಗ್ರೀನ್ವಿಚ್ ಕಾಡಿನಲ್ಲಿ ಎಸೆದಿದ್ದ. ಅದು ಒಂದು ವಾರದ ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಅಷ್ಟರಲ್ಲಾಗಲೇ ರೆಯೆಸ್ ಉಸಿರುಕಟ್ಟಿ ಮೃತಪಟ್ಟಿದ್ದಳು. ಅಲ್ಲಿಂದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದರು.
ಇದನ್ನೂ ಓದಿ: ‘ಸೋಜುಗಾದ ಸೂಜುಮಲ್ಲಿಗೆ..’ ಸಿಂಗರ್ ಅನನ್ಯಾ ಭಟ್ ಈಗ ಹೀರೋಯಿನ್; ‘ಸೇನಾಪುರ’ಕ್ಕೆ ಸಂಗೀತವೂ ಅವರದ್ದೇ
ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳು ಪ್ರಕಟ; ಕಣ್ಮನ ಸೆಳೆಯುವ ಚಿತ್ರಗಳು ಇಲ್ಲಿವೆ
(A man who stuffed his girlfriend in a suitcase was sentenced to 30 years in prison at New York)
Published On - 4:18 pm, Sat, 25 September 21