ಭಾರತ ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ; ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ
ಭಾರತ ಸುಧಾರಣೆಯಾದ್ದರೆ ವಿಶ್ವವೇ ಸುಧಾರಣೆಯಾಗುತ್ತದೆ. ಭಾರತದ ಅಭಿವೃದ್ಧಿಯಿಂದ ವಿಶ್ವದ ಅಭಿವೃದ್ಧಿಗೆ ವೇಗ ಸಿಗುತ್ತದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಹೇಳಿದ್ದಾರೆ.
ನ್ಯೂಯಾರ್ಕ್: ಭಾರತ ಅಭಿವೃದ್ಧಿಯಾದರೆ ವಿಶ್ವದ ಅಭಿವೃದ್ಧಿಯಾಗುತ್ತದೆ. ಭಾರತ ಸುಧಾರಣೆಯಾದ್ದರೆ ವಿಶ್ವವೇ ಸುಧಾರಣೆಯಾಗುತ್ತದೆ. ಭಾರತದ ಅಭಿವೃದ್ಧಿಯಿಂದ ವಿಶ್ವದ ಅಭಿವೃದ್ಧಿಗೆ ವೇಗ ಸಿಗುತ್ತದೆ. ಕಲುಷಿತ ನೀರು ಇಡೀ ವಿಶ್ವಕ್ಕೆ ಶಾಪವಾಗಿ ಪರಿಣಮಿಸಿದೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತನ್ನು ಈ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕುಡಿಯಲು ಯೋಗ್ಯವಾದ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಹೇಳಿದ್ದಾರೆ.
ಜನರ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುತ್ತಿದ್ದೇವೆ. ಭಾರತದಲ್ಲಿ ಜನರಿಗೆ ಭೂಮಿಯ ಮಾಲೀಕತ್ವದ ಹಕ್ಕು ನೀಡಲಾಗಿದೆ. ಭಾರತದ 6 ಲಕ್ಷಕ್ಕೂ ಹೆಚ್ಚು ಗ್ರಾಮಗಳ ಡ್ರೋನ್ ಮೂಲಕ ಸರ್ವೆ ಮಾಡಲಾಗಿದೆ. ಜನರ ಆಸ್ತಿ ಡಿಜಿಟಲ್ ದಾಖಲೆ ನೀಡುತ್ತಿದ್ದೇವೆ. ಇದರಿಂದ ಬ್ಯಾಂಕ್ ಲೋನ್ ಪಡೆಯಲು ಸಹಾಯವಾಗುತ್ತದೆ. ಭಾರತದ ಕೊವಿನ್ ಪೋರ್ಟಲ್ ಮೂಲಕ ಕೋಟಿಗಟ್ಟಲೆ ಲಸಿಕೆ ನೀಡಲಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Addressing the @UN General Assembly. https://t.co/v9RtYcGwjX
— Narendra Modi (@narendramodi) September 25, 2021
UNGA 76ನೇ ಅಧಿವೇಶನ ಉದ್ದೇಶಿಸಿ ಮೋದಿ ಭಾಷಣ ಮಾಡುತ್ತಿದ್ದು, ಭಾರತ ಸ್ವಾತಂತ್ರ್ಯದ 75ನೇ ವರ್ಷ ಪ್ರವೇಶಿಸಿದೆ. ಕೊರೊನಾದಿಂದ ಮೃತಪಟ್ಟ ಎಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಭಾರತ ಉಜ್ವಲ ಪ್ರಜಾಪ್ರಭುತ್ವಕ್ಕೆ ಒಂದು ಉದಾಹರಣೆ ಆಗಿದೆ. ಭಾರತದ ಪ್ರಧಾನಿ ಆಗಿ 4ನೇ ಬಾರಿಗೆ UNGAಯಲ್ಲಿ ಭಾಷಣ ಮಾಡುತ್ತಿದ್ದೇನೆ. ದೇಶದ ಜನರ ಸೇವೆ ಮಾಡುತ್ತಾ 20 ವರ್ಷ ಕಳೆದಿದ್ದೇನೆ. ಪ್ರಜಾಪ್ರಭುತ್ವದಿಂದ ಮಾತ್ರ ಉತ್ತಮ ಆಳ್ವಿಕೆ ಸಾಧ್ಯ. ಅಭಿವೃದ್ಧಿಯಿಂದ ಯಾರನ್ನೂ ಹೊರಗಿಡುವುದಿಲ್ಲ. ಮೊದಲು ಮುಖ್ಯಮಂತ್ರಿಯಾಗು, ಈಗ ಪ್ರಧಾನಮಂತ್ರಿಯಾಗಿ ಜನರ ಕೆಲಸ ಮಾಡ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಸೇವಾ ಪರಮೋಧರ್ಮ ಎಂಬುದರಲ್ಲಿ ಭಾರತ ನಂಬಿಕೆಯಿಟ್ಟಿದೆ. ಭಾರತದ ವಿಶ್ವದ ಮೊದಲ ಡಿಎನ್‌ಎ ಲಸಿಕೆ ಸಂಶೋಧನೆ ಮಾಡಲಾಗಿದೆ. ಈ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು. ಎಂಆರ್‌ಎನ್‌ಎ ಲಸಿಕೆ ಸಂಶೋಧನೆ ಹಂತಿಮ ಅಂತದಲ್ಲಿದೆ. 43 ಕೋಟಿ ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆ ನೀಡಿದ್ದೇವೆ. 36 ಕೋಟಿ ಜನರಿಗೆ ವಿಮೆಯನ್ನು ನೀಡಿದ್ದೇವೆ. 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆ ನೀಡ್ತಿದ್ದೇವೆ. 3 ಕೋಟಿ ಜನರಿಗೆ ಪಕ್ಕಾ ಮನೆ ನಿರ್ಮಿಸಿದ್ದೇವೆ.
ಇದನ್ನೂ ಓದಿ: PM Modi in UNGA Summit: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ
PM Modi in Nee York: ನ್ಯೂಯಾರ್ಕ್ ತಲುಪಿದ ಪ್ರಧಾನಿ ಮೋದಿ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ