PM Modi in Nee York: ನ್ಯೂಯಾರ್ಕ್​ ತಲುಪಿದ ಪ್ರಧಾನಿ ಮೋದಿ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ

PM Narendra Modi US Visit: ನ್ಯೂಯಾರ್ಕ್​ ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿಯವರನ್ನು, ಅಮರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್​ ಸಂಧು ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್​. ತಿರುಮೂರ್ತಿ ಸ್ವಾಗತಿಸಿದರು. 

PM Modi in Nee York: ನ್ಯೂಯಾರ್ಕ್​ ತಲುಪಿದ ಪ್ರಧಾನಿ ಮೋದಿ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ
ನ್ಯೂಯಾರ್ಕ್​ ತಲುಪಿದ ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on:Sep 25, 2021 | 2:34 PM

ಸೆಪ್ಟೆಂಬರ್​ 23ರಿಂದ ಯುಎಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Modi US Visits)ಇಂದು ನ್ಯೂಯಾರ್ಕ್​​ನಲ್ಲಿ ನಡೆಯಲಿರುವ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76ನೇ ಸೆಷನ್ಸ್​​ನಲ್ಲಿ ಮಾತನಾಡಲಿದ್ದಾರೆ. ನಿನ್ನೆ (ಸೆಪ್ಟೆಂಬರ್​ 24) ವಾಷಿಂಗ್ಟನ್​ ಡಿಸಿಯಲ್ಲಿರುವ ಶ್ವೇತಭವನದಲ್ಲಿ ನಡೆದ ಕ್ವಾಡ್​ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಿಟ್​ನಲ್ಲಿ ಅಮೆರಿಕ, ಭಾರತ, ಜಪಾನ್​ ಮತ್ತು ಆಸ್ಟ್ರೇಲಿಯಾ ನಾಯಕರು ಭಾಗವಹಿಸಿ, ಇಂಡೋ ಫೆಸಿಫಿಕ್​ನಲ್ಲಿ ಶಾಂತಿಸ್ಥಾಪನೆ, ಕೊವಿಡ್​ 19 ವಿರುದ್ಧ ಹೋರಾಟ..ಇತ್ಯಾದಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.  

ನಿನ್ನೆ ಶ್ವೇತಭವನದಲ್ಲಿ ಯುಎಸ್​ ಅಧ್ಯಕ್ಷ ಜೋ ಬೈಡನ್​ರನ್ನು ಭೇಟಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿಯವರನ್ನು, ಅಮರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್​ ಸಂಧು ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್​.ತಿರುಮೂರ್ತಿ ಸ್ವಾಗತಿಸಿದರು.  ನ್ಯೂಯಾರ್ಕ್​​ನ ಹೋಟೆಲ್​ ಒಂದರ ಬಳಿ ಹೊರಗೆ ಮೋದಿಯವರನ್ನು ನೋಡಲೆಂದೇ ಅನೇಕ ಭಾರತೀಯ ಮೂಲದ ಜನರು ಸೇರಿದ್ದರು. ಅವರು ಮೋದಿಯನ್ನು ನೋಡಿ, ವಂದೇ ಮಾತರಂ, ಭಾರತ್​ ಮಾತಾ ಕಿ ಜೈ ಘೋಷಣೆಯನ್ನು ಕೂಗಿದ್ದಾರೆ. ನರೇಂದ್ರ ಮೋದಿಯವರೂ ಕೂಡ ಅವರೆಡೆಗೆ ಕೈ ಬೀಸಿದ್ದಾರೆ. ಕೈ ಮುಗಿದು ಮುಂದೆ ಸಾಗಿದ್ದಾರೆ.

ನ್ಯೂಯಾರ್ಕ್​ಗೆ ತಲುಪುತ್ತಿದ್ದಂತೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ನಾನು ನ್ಯೂಯಾರ್ಕ್​ ತಲುಪಿದ್ದೇನೆ. ಇಲ್ಲಿನ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಪ್ರಾರಂಭವಾಗುತ್ತದೆ. ಅದರಲ್ಲಿ ನಾನು ಭಾಷಣ ಮಾಡುತ್ತೇನೆ ಎಂದಿದ್ದಾರೆ. ಇನ್ನು ಇಂದು, ಕೊವಿಡ್​ 19ನಿಂದ ಚೇತರಿಸಿಕೊಳ್ಳುವ ಆಶಯದೊಂದಿಗೆ ಸ್ಥಿತಿಸ್ಥಾಪಕತ್ವ ಸ್ಥಾಪನೆ, ಸುಸ್ಥಿರತೆ ಪುನರ್​ನಿರ್ಮಾಣ, ಜಾಗತಿಕ ಅಗತ್ಯಗಳಿಗೆ ಸ್ಪಂದನೆ, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯ ಪುನರುಜ್ಜೀವನ  ಈ ಬಾರಿಯ ಸಾಮಾನ್ಯ ಸಭೆಯ ಥೀಮ್ ಆಗಿದೆ. ಇದೇ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಸಂಜೆ 7.30ಕ್ಕೆ ಪ್ರಧಾನಿ ಮೋದಿ ಭಾಷಣ ಶುರುವಾಗಲಿದ್ದು, ಸರ್ಕಾರದ ಟ್ವಿಟರ್​, ಫೇಸ್​ಬುಕ್​, ಯೂಟ್ಯೂಬ್ ಗಳಲ್ಲಿ ಲೈವ್​ ಪ್ರಸಾರವಾಗಲಿದೆ. ಬಹುತೇಕ ಸುದ್ದಿ ವಾಹಿನಿಗಳು ಲೈವ್​ ಕೊಡಲಿವೆ.​

ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆಗ ಮಾತನಾಡಿದ್ದ ನಾಯಕರು ರೆಕಾರ್ಡೆಡ್​ ವಿಡಿಯೋ ಮಾಡಿ ಸಭೆಯಲ್ಲಿ ಹಾಕಲಾಗಿತ್ತು. ಈ  ಬಾರಿ ನರೇಂದ್ರ ಮೋದಿ ವರ್ಚ್ಯುವಲ್​ ಆಗಿ ಭಾಷಣ ಮಾಡಲಿದ್ದಾರೆ. ನಂತರ ಅವರು ಭಾರತಕ್ಕೆ ಮರಳಲಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​

ಇಂದಿನಿಂದ ಸಿಎಂ ಬೊಮ್ಮಾಯಿ ಜಿಲ್ಲಾ ಪ್ರವಾಸ; ಬೆಳಗಾವಿಯಲ್ಲಿ ತಟ್ಟಲಿದೆ ರೈತರ ಪ್ರತಿಭಟನೆಯ ಬಿಸಿ!

(PM Narendra Modi to address 76th UN General Assembly in New York UNGA Latest News in Kannada)

Published On - 9:21 am, Sat, 25 September 21