ಜೋ ಬೈಡನ್- ಭಾರತದ ನಡುವಿನ ಸಂಬಂಧದ ರಹಸ್ಯ ಬಯಲು; ಅಮೆರಿಕ ಅಧ್ಯಕ್ಷರಿಗೆ ದಾಖಲೆ ನೀಡಿದ ಮೋದಿ

ಇದೀಗ ವಾಷಿಂಗ್ಟನ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಮ್ಮ ಪೂರ್ವಜರ ಬಗ್ಗೆ ದಾಖಲೆ ಸಂಗ್ರಹಿಸಲು ಸಹಾಯ ಮಾಡಬಹುದು ಎಂದು ಜೋ ಬೈಡನ್ ತಮಾಷೆ ಮಾಡಿದ್ದರು.

ಜೋ ಬೈಡನ್- ಭಾರತದ ನಡುವಿನ ಸಂಬಂಧದ ರಹಸ್ಯ ಬಯಲು; ಅಮೆರಿಕ ಅಧ್ಯಕ್ಷರಿಗೆ ದಾಖಲೆ ನೀಡಿದ ಮೋದಿ
ನರೇಂದ್ರ ಮೋದಿ- ಜೋ ಬೈಡನ್ ಭೇಟಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 25, 2021 | 1:41 PM

ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಭಾರತ ಮೂಲದವರು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ, ಜೋ ಬೈಡನ್ ಕುಟುಂಬಕ್ಕೂ ಭಾರತಕ್ಕೂ ನಂಟಿದೆ ಎಂಬ ವಿಷಯ ಅಮೆರಿಕದ ಅಧ್ಯಕ್ಷರಾಗಿ ಬೈಡನ್ ಆಯ್ಕೆಯಾದ ಸಂದರ್ಭದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. 2015ರಲ್ಲಿ ಭಾರತಕ್ಕೆ ಬಂದಾಗ ಭಾರತದೊಂದಿಗಿನ ಸಂಬಂಧದ ಬಗ್ಗೆ ಹೇಳಿದ್ದ ಜೋ ಬೈಡನ್ ತಮ್ಮ ಪೂರ್ವಜರಲ್ಲಿ ಒಬ್ಬರಾದ ಜಾರ್ಜ್ ಬೈಡನ್ ಅವರು ಚೆನ್ನೈನ ಮನೆಯೊಂದರಲ್ಲಿ ವಾಸವಿದ್ದರು ಎಂದಿದ್ದರು. ಆ ಬಗ್ಗೆ ಕೆಲವು ದಾಖಲೆಗಳನ್ನುಸಂಗ್ರಹಿಸಿರುವುದಾಗಿ  ಪ್ರಧಾನಿ ಮೋದಿ ಜೋ ಬೈಡನ್​ಗೆ ತಿಳಿಸಿದ್ದಾರೆ. 

ಜೋ ಬೈಡನ್ ಅವರ ಮತ್ತೊಬ್ಬ ಪೂರ್ವಜರಾದ ಕ್ರಿಸ್ಟೋಫರ್ ಬೈಡನ್ 1858ರಲ್ಲಿ ಮದ್ರಾಸ್‌ನಲ್ಲಿ ನಿಧನರಾದರು. ಅವರನ್ನು ಕ್ಯಾಥೆಡ್ರಲ್ ಪಕ್ಕದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ಆ ಸ್ಮಾರಕದಲ್ಲಿ ಬೈಡನ್ ಅವರ ನಾಯಿ ಹೆಕ್ಟೇರ್ ಭಾವಚಿತ್ರವೂ ಇದೆ. ಬೈಡನ್ ಅವರ ಪೂರ್ವಜರು ಮೂಲತಃ ಐರ್ಲೆಂಡ್ ಮೂಲದವರು. ಈ ಕುರಿತು ಖುದ್ದಾಗಿ ಜೋ ಬೈಡನ್ ಅವರೇ ಹೇಳಿದ್ದರು. ನಾನು 29 ವರ್ಷದವನಾಗಿದ್ದಾಗ ನಾನು ಯುನೈಟೆಡ್ ಸ್ಟೇಟ್ಸ್ ಸೆನೆಟ್​ಗೆ ಆಯ್ಕೆಯಾಗಿದ್ದೆ. ಆಗ ನನಗೆ ಬೈಡನ್ ಎಂಬ ವ್ಯಕ್ತಿಯಿಂದ ಮುಂಬೈನಿಂದ ಪತ್ರ ಬಂದಿತ್ತು ಎಂದು ಸೆಪ್ಟೆಂಬರ್ 21, 2015 ರಂದು ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್​ನಲ್ಲಿ ಮಾಡಿದ ಭಾಷಣದಲ್ಲಿ ಜೋ ಬೈಡನ್​ ಹೇಳಿದ್ದರು.

ಅವರ ಪೂರ್ವಜರೊಬ್ಬರು 1700ರ ದಶಕದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಬ್ರಿಟಿಷ್ ಕ್ಯಾಪ್ಟನ್ ಆಗಿದ್ದರು ಮತ್ತು ಮುಂಬೈಗೆ ಬಂದಿದ್ದರು. ಭಾರತೀಯ ಮಹಿಳೆಯನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದರು ಎಂದು ಜೋ ಬೈಡನ್ ಹೇಳಿದ್ದರು. ಭಾರತದ ಪತ್ರಕರ್ತರು ನನಗೆ ತಿಳಿಸಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಇನ್ನೂ ಕೆಲವು ಬೈಡನ್​ಗಳಿದ್ದಾರೆ ಎಂದಿದ್ದರು. ಆದರೆ, ಇದಕ್ಕೆ ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ. ಇದೀಗ ವಾಷಿಂಗ್ಟನ್​ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಮ್ಮ ಪೂರ್ವಜರ ಬಗ್ಗೆ ದಾಖಲೆ ಸಂಗ್ರಹಿಸಲು ಸಹಾಯ ಮಾಡಬಹುದು ಎಂದು ಜೋ ಬೈಡನ್ ತಮಾಷೆ ಮಾಡಿದ್ದರು.

ಆದರೆ, ಇದಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮ ಕುಟುಂಬಕ್ಕೂ ಮುಂಬೈಗೂ ಇರುವ ಸಂಪರ್ಕದ ಬಗ್ಗೆ ನಾನು ಕೆಲವು ದಾಖಲೆಗಳನ್ನು ತಂದಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್​ಗೆ ಹೇಳಿದ್ದಾರೆ. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಜೋ ಬೈಡನ್ ‘ಅದು ನನಗೆ ಸಂಬಂಧಿಸಿದ್ದಾ?’ ಎಂದು ಪ್ರಶ್ನಿಸಿದ್ದಾರೆ.

ಆ ದಾಖಲೆಗಳನ್ನು ಜೋ ಬೈಡನ್​ಗೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಬೈಡನ್ ಪೂರ್ವಜರು ಮುಂಬೈನಲ್ಲಿ ವಾಸವಾಗಿದ್ದರು ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಯಲ್ಲಿ ಕಾಣಿಸಿಕೊಂಡಿರುವ ಹವಾನಾ ಸಿಂಡ್ರೋಮ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

ಅಮೆರಿಕಾದ ಶ್ವೇತ ಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ; ಚೀನಾ, ಕೊವಿಡ್, ಹವಾಮಾನ, ರಕ್ಷಣಾ ವಿಚಾರಗಳ ಚರ್ಚೆ

(Mystery Behind US President Joe Biden Family Connection to India Finally Solved PM Narendra Modi Carries Documentation)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ