Punjab Cabinet: ಪಂಜಾಬ್​ನಲ್ಲಿ ನಾಳೆ ಸಂಜೆ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ; ಅಮರೀಂದರ್ ಬಣದ ಐವರಿಗೆ ಗೇಟ್​ಪಾಸ್​

Punjab CM: ಹೊಸ ಸರ್ಕಾರದಲ್ಲಿ ಹಳೆಯ ಸಚಿವರ ಜೊತೆಗೆ 7 ಹೊಸ ಸಚಿವರಿಗೆ ಸ್ಥಾನ ನೀಡಲಾಗಿದೆ. ಅಮರೀಂದರ್ ಸಿಂಗ್ ಸಂಪುಟದ ಐವರು ಸಚಿವರನ್ನು ಕೈ ಬಿಡಲಾಗಿದ್ದು, ನವಜೋತ್ ಸಿಂಗ್ ಸಿಧು ಬಣದ 7 ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.

Punjab Cabinet: ಪಂಜಾಬ್​ನಲ್ಲಿ ನಾಳೆ ಸಂಜೆ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ; ಅಮರೀಂದರ್ ಬಣದ ಐವರಿಗೆ ಗೇಟ್​ಪಾಸ್​
ರಾಹುಲ್ ಗಾಂಧಿ ಜೊತೆ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಛನ್ನಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 25, 2021 | 2:35 PM

ನವದೆಹಲಿ: ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಂಜಾಬ್​ನ ನೂತನ ಮುಖ್ಯಮಂತ್ರಿಯಾಗಿ ಚರಣ್​ಜಿತ್ ಸಿಂಗ್ ಛನ್ನಿ ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಸಂಪುಟ ರಚನೆಯ ಕಾರ್ಯ ಅಂತಿಮಗೊಂಡಿದ್ದು, ಭಾನುವಾರ ಸಂಜೆ ಪಂಜಾಬ್​ನ ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿ ಸಿಎಂ ಚರಣ್​ಜಿತ್ ಸಿಂಗ್ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ನಾಳೆ 15 ಸಚಿವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಛನ್ನಿ ಇಂದು ಪಂಜಾಬ್ ರಾಜ್ಯಪಾಲರನ್ನು ಭೇಟಿ ಮಾಢೀದ್ದು, ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಮಯಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸ ಸರ್ಕಾರದಲ್ಲಿ ಹಳೆಯ ಸಚಿವರ ಜೊತೆಗೆ 7 ಹೊಸ ಸಚಿವರಿಗೆ ಸ್ಥಾನ ನೀಡಲಾಗಿದೆ ಎನ್ನಲಾಗಿದೆ. ಅಮರೀಂದರ್ ಸಿಂಗ್ ಸಂಪುಟದ ಐವರು ಸಚಿವರನ್ನು ಕೈ ಬಿಡಲಾಗಿದ್ದು, ನವಜೋತ್ ಸಿಂಗ್ ಸಿಧು ಬಣದ 7 ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಸೋಮವಾರ ಚರಣ್​ಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಈ ಸಮಾರಂಭಕ್ಕೆ ರಾಹುಲ್ ಗಾಂಧಿ ಕೂಡ ಆಗಮಿಸಿದ್ದರು. ನೂತನ ಸಚಿವ ಸಂಪುಟದ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚಿಸಿ ಇಂದು ಚರಣ್​ಜಿತ್ ಸಿಂಗ್ ದೆಹಲಿಯಿಂದ ವಾಪಾಸ್ ಬಂದಿದ್ದರು. ಈಗಾಗಲೇ ಸಚಿವರ ಪಟ್ಟಿ ಅಂತಿಮವಾಗಿದ್ದು, ನಾಳೆ ಸಂಜೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಮೂಲಗಳ ಪ್ರಕಾರ, ರಾಜ್​ಕುಮಾರ್ ವರ್ಕ, ಕುಲಜೀತ್​ ನಗಾರ, ಗುರ್​ಕಿರತ್ ಸಿಂಗ್ ಕೋಟ್ಲಿ, ಪರ್ಗತ್ ಸಿಂಗ್, ಅಮರೀಂದರ್ ಸಿಂಗ್, ರಾಜ ವರಿಂಗ್, ರಾಣಾ ಗುರ್ಜೀತ್, ಸುರ್ಜಿತ್ ಸಿಂಗ್ ಧೀಮನ್ ಅವರನ್ನು ನೂತನ ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.

ಸತತ ಮೂರು ಬಾರಿ ಶಾಸಕರಾಗಿರುವ ದಲಿತ ನಾಯಕ ಚರಣಜಿತ್ ಸಿಂಗ್ ಛನ್ನಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಪಂಜಾಬ್​ನ ಮುಖ್ಯಮಂತ್ರಿಯಾಗಿ ನೇಮಿಸಿತ್ತು. ಚಮ್ಕೌರ್ ಸಾಹಿಬ್ ನ ಶಾಸಕರಾದ ಛನ್ನಿ ಪಂಜಾಬ್​ನ ಮೊದಲ ದಲಿತ ಮುಖ್ಯಮಂತ್ರಿ ಹಾಗೂ ಅತಿ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿ ಪದವಿಗೇರಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಛನ್ನಿ ದೆಹಲಿಯಿಂದ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ಮತ್ತೆ ದೆಹಲಿಗೆ ಕರೆದ ಕಾಂಗ್ರೆಸ್

Viral Video: ಬಾಂಗ್ರಾ ನೃತ್ಯಕ್ಕೆ ಸಖತ್ತಾಗಿ ಹೆಜ್ಜೆ ಹಾಕಿದ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್; ವಿಡಿಯೋ ವೈರಲ್

(Punjab New Cabinet Ministers Take Oath Tomorrow Captain Amarinder Singh Loyalists May Be Dropped)