Madhya Pradesh: ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಾಪಸ್ ಬರುತ್ತಿದ್ದಾಗ ಭೀಕರ ಅಪಘಾತ; ನಾಲ್ವರು ಸಾವು
ಗಾಯಗೊಂಡ ಆರು ಮಂದಿಯಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರೂ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರೇವಾ: ಎಸ್ಯುವಿ ವಾಹನ ಮತ್ತು ಟ್ರಕ್ ನಡುವೆ ಡಿಕ್ಕಿಯಾಗಿ (Accident) ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೇವಾದ ಸಮೀಪ ಎನ್ಎಚ್ 30 ಹೆದ್ದಾರಿಯಲ್ಲಿರುವ ಕಿತ್ವಾರಿಯಾ ಬೈಪಾಸ್ನಲ್ಲಿ ಆ್ಯಕ್ಸಿಡೆಂಟ್ ಆಗಿದೆ.
ಎಸ್ಯುವಿ ವಾಹನದಲ್ಲಿ ಚಾಲಕ ಸೇರಿ ಒಟ್ಟು 14 ಮಂದಿ ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ 13 ವರ್ಷದ ಹುಡುಗಿ, 14 ವರ್ಷದ ಹುಡುಗ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ರಕ್ ಡಿಕ್ಕಿಯಾಗಿದ್ದರಿಂದ ಎಸ್ಯುವಿ ಸಂಪೂರ್ಣವಾಗಿ ಜಖಂ ಆಗಿದೆ ಎಂದು ಚೋಹ್ರಾತಾ ಠಾಣೆ ಅಧಿಕಾರಿ ವಿ.ವಿ.ತಿವಾರಿ ಹೇಳಿದ್ದಾರೆ. ಇನ್ನು ಎಸ್ಯುವಿ ವಾಹನದಲ್ಲಿದ್ದವರು ಉತ್ತರ ಪ್ರದೇಶದ ಪ್ರಯಾಗ್ರಾಜ್ನಿಂದ ತಮ್ಮ ಹುಟ್ಟೂರಾದ ಮಧ್ಯಪ್ರದೇಶದ ರೈಸನ್ ಜಿಲ್ಲೆಗೆ ವಾಪಸ್ ತೆರಳುತ್ತಿದ್ದರು. ಇವರೆಲ್ಲ ಗಂಗಾ ನದಿಯಲ್ಲಿ ಪವಿತ್ರ ಸ್ನಾನಕ್ಕಾಗಿ ತೆರಳಿದವರಾಗಿದ್ದರು ಎಂದು ಹೇಳಲಾಗಿದೆ.
ಇನ್ನು ಗಾಯಗೊಂಡ ಆರು ಮಂದಿಯಲ್ಲಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರೂ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತವಾಗುತ್ತಿದ್ದಂತೆ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಡ್ರೈವರ್ನನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುಪಿಎಸ್ಸಿ 2020: 35ನೇ ಶ್ರೇಣಿಯಲ್ಲಿ ಪಾಸಾದ ಬೆಂಗಳೂರು ಮೂಲದ ಅಪರ್ಣಾ ರಮೇಶ್!
Amazon: ಊಹಿಸಲಾಗದಷ್ಟು ಡಿಸ್ಕೌಂಟ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಗೆ ದಿನಾಂಕ ಫಿಕ್ಸ್
(Four dead, six injured as SUV collides with truck In Madhya Pradesh)