ಚೆನ್ನೈ ಮೂಲದ 2 ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ಬಹಿರಂಗ ಪಡಿಸದ ಆದಾಯ ಪತ್ತೆ
ಈ ಹಣಕಾಸು ಸಂಸ್ಥೆಗಳು ಆಸ್ತಿ ಹೂಡಿಕೆ ಮಾಡಿವೆ. ನೈಜ ಆದಾಯವನ್ನು ಮರೆಮಾಚಿ ಮೋಸ ಮಾಡಿವೆ. ಅಸುರಕ್ಷಿತ ಸಾಲದ ದಂಧೆ ನಡೆಸುತ್ತಿವೆ ಎಂಬ ಬಗ್ಗೆ ಐಟಿ ಇಲಾಖೆಗೆ ಸಾಕ್ಷಿ ದೊರೆತಿದೆ.
ಆದಾಯ ತೆರಿಗೆ ಇಲಾಖೆ (Income Tax Department) ಚೆನ್ನೈ ಮೂಲದ ಎರಡು ಖಾಸಗಿ ಸಿಂಡಿಕೇಟ್ ಹಣಕಾಸು ಗ್ರೂಪ್ಗಳ ಮೇಲೆ ಸೆಪ್ಟೆಂಬರ್ 23ರಂದು ದಾಳಿ ನಡೆಸಿದೆ. ಈ ಎರಡು ಹಣಕಾಸು ಸಂಸ್ಥೆಗಳಿಗೆ ಸಂಬಂಧಪಟ್ಟ ಚೆನ್ನೈನಲ್ಲಿರುವ ಒಟ್ಟು 35 ಪ್ರದೇಶಗಳಲ್ಲಿ ಹುಡುಕಾಟ ನಡೆಸಿರುವ ಐಟಿ ಇಲಾಖೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ಸಿಂಡಿಕೇಟ್ ಹಣಕಾಸು ಸಂಸ್ಥೆಗಳು ತಮಿಳುನಾಡಿನ ಹಲವು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು, ಉದ್ಯಮಗಳಿಗೆ ಸಾಲ ನೀಡಿವೆ. ಅದರಲ್ಲೂ ಹೆಚ್ಚಾಗಿ ನಗದುರೂಪದಲ್ಲೇ ಹಣ ನೀಡುತ್ತವೆ. ಅತ್ಯಂತ ಅಧಿಕ ಮೊತ್ತದ ಬಡ್ಡಿ ವಿಧಿಸುತ್ತವೆ ಮತ್ತು ತೆರಿಗೆ ವಂಚನೆ ಮಾಡಿವೆ ಎಂಬುದು ಇದೀಗ ಸಿಕ್ಕ ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ಐಟಿ ಹೇಳಿದೆ. ಈ ಹಣಕಾಸು ಸಂಸ್ಥೆಗಳು ಸಾಲಗಾರರಿಂದ ಬಡ್ಡಿ ಸ್ವೀಕರಿಸಲು ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿವೆ ಎಂದೂ ಮಾಹಿತಿ ನೀಡಿದೆ.
ಈ ಹಣಕಾಸು ಸಂಸ್ಥೆಗಳು ಆಸ್ತಿ ಹೂಡಿಕೆ ಮಾಡಿವೆ. ನೈಜ ಆದಾಯವನ್ನು ಮರೆಮಾಚಿ ಮೋಸ ಮಾಡಿವೆ. ಅಸುರಕ್ಷಿತ ಸಾಲದ ದಂಧೆ ನಡೆಸುತ್ತಿವೆ ಎಂಬುದು ಐಟಿ ಇಲಾಖೆಗೆ ಸಿಕ್ಕ ಸಾಕ್ಷಿಗಳಿಂದ ಪಕ್ಕಾ ಆಗಿದೆ. ಐಟಿ ಇಲಾಖೆ ಇಲ್ಲಿವರೆಗೆ ನಡೆಸಿದ ಶೋಧದಲ್ಲಿ ಸುಮಾರು 300 ಕೋಟಿ ರೂ.ಬಹಿರಂಗಪಡಿಸದ ಆದಾಯವನ್ನು ಪತ್ತೆ ಹಚ್ಚಿದೆ. ಹಾಗೇ, 9 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಇನ್ನೂ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಬರ್ತ್ ಡೇ ಪಾರ್ಟಿಗೆ ಬಂದು ಜಕ್ಕಲಮಡಗು ಹಿನ್ನೀರಿನಲ್ಲಿ ಶವವಾದ ಬೆಂಗಳೂರಿನ ಅಕ್ಸೆಂಚರ್ ಟೆಕ್ಕಿ
ಕಳ್ಳತನಕ್ಕೆ ಅಡ್ಡಿಯಾಗುತ್ತೆಂದು ಸಿಸಿ ಕ್ಯಾಮರಾ ಹೊಡೆದು ಹಾಕಿದ ಮಹಿಳೆ; ವಿಡಿಯೋ ನೋಡಿ