Amazon: ಊಹಿಸಲಾಗದಷ್ಟು ಡಿಸ್ಕೌಂಟ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ಗೆ ದಿನಾಂಕ ಫಿಕ್ಸ್

Amazon Great Indian Festival sale: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೇಳವು ಇದೇ ಅಕ್ಟೋಬರ್ 4 ರಂದು ಆರಂಭವಾಗಲಿದೆ ಎಂದು ಅಮೆಜಾನ್ ಕಂಪನಿ ಹೇಳಿಕೊಂಡಿದೆ.

Amazon: ಊಹಿಸಲಾಗದಷ್ಟು ಡಿಸ್ಕೌಂಟ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ಗೆ ದಿನಾಂಕ ಫಿಕ್ಸ್
Amazon Great Indian Festival sale
Follow us
TV9 Web
| Updated By: Vinay Bhat

Updated on: Sep 25, 2021 | 12:24 PM

ಆನ್​ಲೈನ್ ಇ ಕಾಮರ್ಸ್​ ತಾಣಗಳಲ್ಲಿ ಹೆಚ್ಚಾಗಿ ಬಳಸುವ ಬಳಕೆದಾರರಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಫ್ಲಿಪ್​ಕಾರ್ಟ್​ (Flipkart) ತನ್ನ ಬಿಗ್ ಬಿಲಿಯನ್ ಡೇ ಸೇಲ್ ಆಯೋಜನೆ ಮಾಡುವ ಬಗ್ಗೆ ತಿಳಿಸಿದ ಕೆಲವೇ ದಿನಗಳಲ್ಲಿ ಮತ್ತೊಂದು ಪ್ರಮುಖ ಇ-ಕಾಮರ್ಸ್ ತಾಣ ಅಮೆಜಾನ್‌ (Amazon) ಕೂಡ ತನ್ನ ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale) ಆರಂಭಿಸುವುದಾಗಿ ತಿಳಿಸಿದೆ. ಈ ಸೇಲ್ ಮೇಳವು ಇದೇ ಅಕ್ಟೋಬರ್ 4 ರಂದು ಆರಂಭವಾಗಲಿದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಹಬ್ಬದ ಸಂದರ್ಭದಲ್ಲಿ ಈ ಸೇಲ್‌ ಹೆಚ್ಚು ಆಕರ್ಷಕ ಎನಿಸಲಿದ್ದು, ಎಲ್ಲ ಬಗೆಯ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಸಿಗಲಿದೆ. ಈಗಾಗಲೇ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಬಗ್ಗೆ ಅಧಿಕೃತ ಟೀಸರ್ ಹೊರಡಿಸಿರುವ ಅಮೆಜಾನ್ ಬಂಪರ್ ಡಿಸ್ಕೌಂಟ್​ನಲ್ಲಿ ಅನೇಕ ಪ್ರಾಡಕ್ಟ್​ಗಳು ಲಭ್ಯವಾಗಲಿವೆ.

ಅಮೆಜಾನ್ ತನ್ನ ಈ ಬಿಗ್‌ ಸೇಲ್‌ನಲ್ಲಿ ಸ್ಮಾರ್ಟ್ ಫೋನ್ , ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ಸ್ ಮೇಲೆ ದೊಡ್ಡ ರಿಯಾಯಿತಿ ಕೊಡುಗೆಗಳನ್ನು ನೀಡುವ ಬಗ್ಗೆ ತಿಳಿಸಿದೆ. ಜೊತೆಗೆ ಕೆಲವು ಬ್ಯಾಂಕ್ಗಳು ಕೂಡ ಕೈಜೋಡಿಸಿದ್ದು, ಅದರಲ್ಲಿ HDFC ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳೊಂದಿಗೆ, ಗ್ರಾಹಕರು ಹೆಚ್ಚುವರಿ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿಯನ್ನು ನೀಡಲು ಅಮೆಜಾನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

ಇನ್ನೂ ಈ ಸೇಲ್​ನಲ್ಲಿ ಶವೋಮಿಯ ಹೊಸ ಮಿ ಬ್ಯಾಂಡ್ 6 ಡಿವೈಸ್‌ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಬ್ಯವಾಗಲಿದೆ. ಈ ಡಿವೈಸ್ 5 1.1 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 126×294 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಜೊತೆಗೆ ಒಪ್ಪೋ ಬ್ಯಾಂಡ್ ಸ್ಟೈಲ್‌ ಡಿವೈಸ್‌ ಸಹ ಆಕರ್ಷಕ ರಿಯಾಯಿತಿಯಲ್ಲಿ ಸಿಗಲಿದೆ. ಇದು 1.1 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಈ ಡಿವೈಸ್ ವಾಕಿಂಗ್, ಸೈಕ್ಲಿಂಗ್, ಈಜು, ಬ್ಯಾಡ್ಮಿಂಟನ್, ಕ್ರಿಕೆಟ್ ಸೇರಿದಂತೆ ಒಟ್ಟು 12 ವರ್ಕೌಟ್ ಮೋಡ್‌ಗಳನ್ನು ಒಳಗೊಂಡಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಸ್ಮಾರ್ಟ್ ಟಿವಿಗಳು ಮತ್ತು ಇತರ ಗೃಹೋಪಯೋಗಿ ಉಪಕರಣಗಳಂತಹ ಉತ್ಪನ್ನಗಳು ಭಾರೀ ರಿಯಾಯಿತಿಯೊಂದಿಗೆ ದೊರೆಯಲಿದ್ದು, ವಿವಿಧ ಎಲೆಕ್ಟ್ರಾನಿಕ್ಸ್ ಪರಿಕರಗಳು ಶೇ. 40 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತವೆ. ಈ ಮಾರಾಟದ ಸಮಯದಲ್ಲಿ ವಿಶೇಷ ಬಿಡುಗಡೆಗಳೊಂದಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಎಕೋ, ಕಿಂಡಲ್ ಮತ್ತು ಫೈರ್ ಟಿವಿಯಂತಹ ಶ್ರೇಣಿಯ ಮೇಲೆ ದರ ಕಡಿತ ಮತ್ತು ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಮೆಜಾನ್ ಪ್ರೈಮ್ ಸದಸ್ಯರು ಒಂದು ದಿನ ಮೊದಲು ಮಾರಾಟಕ್ಕೆ ಪ್ರವೇಶ ಪಡೆಯುತ್ತಾರೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ. ಹಾಗೆಯೇ, ಪ್ರೈಮ್ ಸದಸ್ಯರಿಗಾಗಿಯೇ ಈ ಬಾರಿ ಹೆಚ್ಚು ಕೊಡುಗೆಗಳನ್ನು ನೀಡಲು ಸಂಸ್ಥೆ ಮುಂದಾಗಿದ್ದು, ಖರೀದಿಸಿದ ಉತ್ಪನ್ನಗಳನ್ನು ಒಂದೇ ದಿನದಲ್ಲಿ ಉಚಿತವಾಗಿ ಮನೆಗೆ ತಲುಪಿಸುವ ಕಾರ್ಯವೂ ಆಗಲಿದೆ.

Samsung Galaxy F42 5G: ಸ್ಯಾಮ್​ಸಂಗ್​ನಿಂದ ಗ್ಯಾಲಕ್ಸಿ F ಸರಣಿಯಲ್ಲಿ ಭರ್ಜರಿ ಫೀಚರ್ಸ್​ನ ಹೊಸ 5G ಸ್ಮಾರ್ಟ್​ಫೋನ್

ಬರೋಬ್ಬರಿ 97 ಕೋಟಿ ರೂ. ಮೊಬೈಲ್ ಬಗ್ಗೆ ಕೇಳಿದ್ದೀರಾ?: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತಾ?

(Amazon annual Great Indian Festival sale will start October 4)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ