ಬರೋಬ್ಬರಿ 97 ಕೋಟಿ ರೂ. ಮೊಬೈಲ್ ಬಗ್ಗೆ ಕೇಳಿದ್ದೀರಾ?: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತಾ?

ವಿಶ್ವದ ಅತ್ಯಂತ ದುಬಾರಿ ಐಫೋನ್ ಪ್ರಪಂಚದ ಮೊಬೈಲ್ ಮಾರುಕಟ್ಟೆಯಲ್ಲಿದೆ. ಬ್ಲ್ಯಾಕ್ ಡೈಮಂಡ್ ಬಣ್ಣದಲ್ಲಿ 97 ಕೋಟಿ ರೂ. ಬೆಲೆಯ ದುಬಾರಿ ಐಫೋನ್ ಇದಾಗಿದೆ.

ಬರೋಬ್ಬರಿ 97 ಕೋಟಿ ರೂ. ಮೊಬೈಲ್ ಬಗ್ಗೆ ಕೇಳಿದ್ದೀರಾ?: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತಾ?
Apple iPhone
Follow us
TV9 Web
| Updated By: Vinay Bhat

Updated on: Sep 24, 2021 | 2:44 PM

ಹೆಚ್ಚಿನವರಿಗೆ ಗೊತ್ತಿರುವ ದುಬಾರಿ ಫೋನ್​ಗಳೆಂದರೆ ಅದು ಐಫೋನ್. ಇದರ ಬೆಲೆ ಲಕ್ಷವಿರುತ್ತದೆ. ಇದುಬಿಟ್ಟರೆ ಎಲ್ಲೋ 10 ಅಥವಾ 20 ಲಕ್ಷದ ಫೋನುಗಳಿವೆ ಎಂಬ ಸುದ್ದಿ ಕೇಳಿರಬಹುದು. ಸಾಮಾನ್ಯವಾಗಿ ಫೋನ್​ನಲ್ಲಿರುವ ಕ್ಯಾಮೆರಾ ಕ್ವಾಲಿಟಿ, ಫೀಚರ್ಸ್​ಗೆ ತಕ್ಕಂತೆ ಅದರ ಬೆಲೆಯನ್ನು ನಿಗದಿ ಮಾಡಿರಲಾಗುತ್ತದೆ. ಸದ್ಯದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದುಬಾರಿ  ಫೋನ್​ಗಳೆಂದರೆ ಅದು ಐಫೋನ್ ಗಳು. ಐಫೋನ್ ಕಡಿಮೆ ದರದಿಂದ ಶುರುವಾಗಿ ಲಕ್ಷಾಂತರ ರೂಪಾಯಿವರೆಗೂ ಇರುತ್ತದೆ. ಆದರೆ, ಈ ಐಫೋನ್ ಒಂದರ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಅಷ್ಟು ಹಣ ಕೊಡುವಷ್ಟು ಆ ಫೋನಿನಲ್ಲಿ ಏನಿದೆ ಗೊತ್ತಾ?.

ವಿಶ್ವದ ಅತ್ಯಂತ ದುಬಾರಿ ಐಫೋನ್ ಮೊಬೈಲ್ ಮಾರುಕಟ್ಟೆಯಲ್ಲಿದೆ. ಬ್ಲ್ಯಾಕ್ ಡೈಮಂಡ್ ಬಣ್ಣದಲ್ಲಿ 97 ಕೋಟಿ ರೂ. ಬೆಲೆಯ ದುಬಾರಿ ಐಫೋನ್ ಇದಾಗಿದೆ. ವಿಶ್ವದ ಕೆಲವು ದುಬಾರಿ ಮತ್ತು ಐಷಾರಾಮಿ ವಸ್ತುಗಳ ಹೆಸರಾಂತ ಸೃಷ್ಟಿಕರ್ತ ಸ್ಟುವರ್ಟ್ ಹ್ಯೂಸ್ ಅವರು ಈ ವಿಶ್ವದ ದುಬಾರಿ ಐಫೋನ್ ಅನ್ನು ತಯಾರಿಸಿದ್ದಾರೆ. ಐಷಾರಾಮಿ ವೆಬ್ಸೈಟ್ alux.com ಇದನ್ನು ವಿಶ್ವದ ಅತ್ಯಂತ ದುಬಾರಿ ಐಫೋನ್ ಎಂದು ಹೇಳಿದೆ.

ಸಾಮಾನ್ಯ ಐಫೋನ್ ಆಗಿದ್ದ ಐಫೋನ್ 5 ಅನ್ನು ಚಿನ್ನ ಮತ್ತು ಡೈಮಂಡ್‌ನಿಂದ ಮಾಡಲಾಗಿದ್ದು, ಈ ಐಫೋನಿನ ಪೂರ್ಣ ದೇಹವನ್ನು ಅಲಂಕರಿಸಲಾಗಿವೆ. ಇನ್ನು ಹಿಂಬದಿಯಲ್ಲಿರುವ ಆ್ಯಪಲ್ ಲೋಗೋವನ್ನೂ ವಜ್ರದಿಂದಲೇ ವಿನ್ಯಾಸ ಮಾಡಲಾಗಿರುವುದು ಈ ದುಬಾರಿ ಐಫೋನಿನ ವಿಶೇಷಗಳಲ್ಲಿ ಒಂದು.

4 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್, 8 ಮೆಗಾ ಪಿಕ್ಸೆಲ್ನ ರೆಕಾರ್ಡಿಂಗ್ ಕ್ಯಾಮೆರಾ ಕೂಡಾ ಇದೆ. ಈ ದುಬಾರಿ ಐಫೋನ್ 6 ಜಿಬಿ, 32 ಜಿಬಿ ಹಾಗೂ 64 ಜಿಬಿಯ ಮೂರು ವೇರಿಯೆಂಟ್ಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಇದು ಬಿಟ್ಟರೆ ವೆರ್ಟು ಸಿಗ್ನೇಚರ್ ಡೈಮಂಡ್ ಎಂಬ ಫೋನ್ ವಿಶ್ವದ ಅತಿ ದುಬಾರಿ ಮೊಬೈಲ್ ಆಗಿದೆ. ವೆರ್ಟು ಎಂಬ ಕಂಪನಿಯು ಬ್ರಿಟನ್‌ ಮೂಲದ ಹ್ಯಾಂಡ್‌ ಮೇಡ್ ರೀಟೆಲ್‌ ಮೊಬೈಲ್ ತಯಾರಿಕಾ ಕಂಪನಿಯಾಗಿದ್ದು, 2018ರಲ್ಲಿ ನೋಕಿಯಾ ಫಿನಿಶ್ ಮೊಬೈಲ್‌ ಫೋನ್‌ ತಯಾರಕರಿಂದ ಸ್ಥಾಪಿತವಾಗಿದೆ. ಒಟ್ಟು ಎಂಟು ಬಾಹ್ಯ ವೇರಿಯಂಟ್‌ಗಳನ್ನು ಹೊಂದಿದ್ದು, ಅವುಗಳೆಂದರೇ, ಜೆಟ್ ಕ್ಯಾಲ್, ಗಾರ್ನೆಟ್ ಕ್ಯಾಲ್, ಗ್ರೇಪ್ ಲಿಜಾರ್ಡ್, ಶುದ್ಧ ಜೆಟ್ ಲಿಜಾರ್ಡ್, ಜೆಟ್ ಅಲಿಗೇಟರ್, ಶುದ್ಧ ನೇವಿ ಅಲಿಗೇಟರ್, ಕ್ಲಾಸ್ ಡಿ ಪ್ಯಾರಿಸ್ ಅಲಿಗೇಟರ್, ಮತ್ತು ಶುದ್ಧ ಜೆಟ್ ರೆಡ್ ಗೋಲ್ಡ್ ಆಗಿವೆ. ಇದರ ಬೆಲೆ 5,865,067.72 ರೂಪಾಯಿಗಳಾಗಿದೆ.

iQoo Z5: 44W ಫ್ಲ್ಯಾಶ್ ಚಾರ್ಜ್, 64MP ಕ್ಯಾಮೆರಾ: ಐಕ್ಯೂ ಕಂಪನಿಯ ಹೊಸ Z5 ಸ್ಮಾರ್ಟ್​ಫೋನ್ ಬಿಡುಗಡೆ

USB type-C: ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ಒಂದೇ ವಿಧದ ಚಾರ್ಜರ್: ಯುರೋಪಿಯನ್ ಯೂನಿಯನ್ ಆದೇಶ

(Apple iPhone iPhone 5 Black Diamond is the most expensive gadgets in the world)