USB type-C: ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ಒಂದೇ ವಿಧದ ಚಾರ್ಜರ್: ಯುರೋಪಿಯನ್ ಯೂನಿಯನ್ ಆದೇಶ

ಯುರೋಪಿಯನ್ ಕಮಿಷನ್ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್‌ಫೋನ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ.

USB type-C: ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ಒಂದೇ ವಿಧದ ಚಾರ್ಜರ್: ಯುರೋಪಿಯನ್ ಯೂನಿಯನ್ ಆದೇಶ
Type-C Charger
Follow us
TV9 Web
| Updated By: Vinay Bhat

Updated on: Sep 24, 2021 | 1:41 PM

ಯುರೋಪಿಯನ್ ಕಮಿಷನ್ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಇನ್ಮುಂದೆ ಎಲ್ಲಾ ಮೊಬೈಲ್ ಫೋನ್‍ಗಳು, ಐಪಾಡ್ ಹಾಗೂ ಇಯರ್ ಫೋನ್‍ಗಳಿಗೆ ಒಂದೇ ವಿಧದ ಚಾರ್ಜರ್ ಪೋರ್ಟ್ ಇರಬೇಕೆಂದು ಹೇಳಿದೆ. ಈಗೀಗ ಐಫೋನ್ (Iphone)​ ಮತ್ತು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳ (Android Smartphone) ಚಾರ್ಜರ್​ಗೆ ವಿಭಿನ್ನವಾಗಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಇದರ ನಡುವೆ ವೈರ್​ಲೆಸ್​ ಚಾರ್ಜರ್​ಗಳು ಕೂಡ ತಲೆ ಎತ್ತಿದೆ. ಮತ್ತೊಂದೆಡೆ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಟೈಪ್​- ಸಿ ಚಾರ್ಜರ್​ (USB -C Charger) ನೀಡಲಾಗುತ್ತಿದೆ. ಹೀಗಿರುವಾಗ ಇದನ್ನು ಗಮನಿಸಿದ ಯುರೋಪಿಯನ್​ ಕಮಿಷನ್​ ಎಲ್ಲಾ ಮೊಬೈಲ್​ ಫೋನ್​, ಐಪ್ಯಾಡ್ (Ipad)​ ಹಾಗೂ ಇಯರ್​ ಫೋನ್​​ಗಳಿಗೆ (Earphone) ಒಂದೇ ವಿಧದ ಚಾರ್ಜರ್​ ಪೋರ್ಟ್​​ ಇರಬೇಕೆಂದು ಆದೇಶ ಹೊರಡಿಸಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ನಾನಾ ವಿಧಧ ಚಾರ್ಜರ್​ಗಳಿವೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ಗಳ ಚಾರ್ಜರ್​ ಭಿನ್ನವಾಗಿದೆ. ಐಪಾಡ್​ ಮತ್ತು ಇಯರ್​ ಫೋನ್​ಗಳಿಗೂ ಪ್ರತ್ಯೇಕ ಚಾರ್ಜರ್​ಗಳಿವೆ. ಅಷ್ಟು ಮಾತ್ರವಲ್ಲದೆ, ಆ್ಯಂಡ್ರಾಯ್ಡ್​ ಬಳಕೆದಾರರು ಟೈಪ್​- ಸಿ ಚಾರ್ಜರ್​, ಮೈಕ್ರೊ ಯುಎಸ್​ಬಿ ಬಳಸುತ್ತಿದ್ದಾರೆ. ಈ ಚಾರ್ಜರ್​​ಗಳು ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಅದರಲ್ಲೂ ಪ್ರಯಾಣದ ವೇಳೆ ಎಲ್ಲಾ ಚಾರ್ಜರ್​ಗಳನ್ನು ಹಿಡಿದುಕೊಂಡು ಹೋಗಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಯುರೋಪಿಯನ್​ ಕಮಿಷನ್​ ಎಲ್ಲಾ ಫೋನ್​, ಐಪ್ಯಾಡ್​, ಇಯರ್​ಫೋನ್​ಗೂ ಒಂದೇ ಚಾರ್ಜರ್​ ನೀಡುವ ಆದೇಶ ಹೊರಡಿಸಿದೆ.

ಯುರೋಪಿಯನ್ ಕಮಿಷನ್ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಹೆಡ್‌ಫೋನ್‌ಗಳಿಗೆ ಸಾಮಾನ್ಯ ಚಾರ್ಜಿಂಗ್ ಪೋರ್ಟ್ ಇರಬೇಕೆಂದು ಸೂಚಿಸಿದೆ. ಯುಎಸ್‌ಬಿ-ಸಿ ಕನೆಕ್ಟರ್ (USB-C) ಎಲ್ಲಾ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕ್ಯಾಮರಾಗಳು, ಹೆಡ್‌ಫೋನ್‌ಗಳು, ಪೋರ್ಟಬಲ್ ಸ್ಪೀಕರ್‌ಗಳು ಮತ್ತು ಹ್ಯಾಂಡ್‌ಹೆಲ್ಡ್ ವೀಡಿಯೋಗೇಮ್ ಕನ್ಸೋಲ್‌ಗಳಿಗೆ ಪ್ರಮಾಣಿತ ಪೋರ್ಟ್ ಆಗಬೇಕು ಎಂದಿದೆ.

ಚೀನಾ, ಜಪಾನ್​,ಅಮೆರಿಕ ಸೇರಿದಂತೆ ಹಲವು ದೇಶಗಳು ವಿಭಿನ್ನವಾದ ಆ್ಯಂಡ್ರಾಯ್ಡ್​ ಮತ್ತು ಐಫೊನ್​ ಅನ್ನಯ ಉತ್ಪಾದಿಸುತ್ತಾ ಬಂದಿದೆ. ಇವೆಲ್ಲವು ಒಂದಕ್ಕಿಂತ ಒಂದು ರೀತಿಯ ಚಾರ್ಜರ್​ ಪೋರ್ಟ್​ ಹೊಂದಿದೆ. ಅದರಲ್ಲೂ ಅದೇ ಕಂಪನಿಗಳು ತಯಾರಿಸುವ ಇಯರ್​ಫೋನ್​ ಮತ್ತು ಚಾರ್ಜರ್​ ಫೋರ್ಟ್​ಗಳು ಭಿನ್ನವಾಗಿದೆ.

ಇನ್ನು ಯುಸಿಯ ಹೊಸ ಪ್ರಸ್ತಾಪವನ್ನು ಆ್ಯಪಲ್ ಸಂಸ್ಥೆ ವಿರೋಧಿಸಿದೆ. ಈ ರೀತಿಯ ಕಟ್ಟುನಿಟ್ಟಿನ ನಿಯಂತ್ರಣವು ಇಲೆಕ್ಟ್ರಾನಿಕ್ ಸಾಧನಗಳ ನಾವೀನ್ಯತೆಯನ್ನು ಮೊಟಕುಗೊಳಿಸುತ್ತದೆ. ಇದು ಯುರೋಪ್ ಮತ್ತು ಪ್ರಪಂಚದ ಗ್ರಾಹಕರಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದೆ.

iPhone 13: ಇಂದು ಐಫೋನ್ 13 ಮೊದಲ ಸೇಲ್: ಖರೀದಿಸುವ ಮುನ್ನ ಈ ಡಿಸ್ಕೌಂಟ್​ ಆಫರ್ ಬಗ್ಗೆ ತಿಳಿದುಕೊಳ್ಳಿ

Itel A26: ದೇಶದಲ್ಲಿ ಐಟೆಲ್ ಎ26 ಸ್ಮಾರ್ಟ್​ಫೋನ್ ಬಿಡುಗಡೆ: ಇದರ ಬೆಲೆ ಕೇವಲ 5,999 ರೂ.

(Type-C Charger In Major Setback to Apple EU Proposes Universal Type-C Charger For All Devices)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್