WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್​ಆ್ಯಪ್: ಹೇಗೆ ಗೊತ್ತಾ?

Wabetainfo ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಬಳಕೆದಾರರಿಗೆ ವಾಟ್ಸ್​ಆ್ಯಪ್ ಪೇಮೆಂಟ್​ ಮಾಡಿದ ತಕ್ಷಣ ಕ್ಯಶ್​ಬ್ಯಾಕ್ ಆಫರ್ ಎಂಬ ಹೊಸ ವೈಶಿಷ್ಟ್ಯವನ್ನು ತರಲು ವಾಟ್ಸ್​ಆ್ಯಪ್ ಡೆವಲಪರ್‌ಗಳು ಹೊಸ ಕೆಲಸ ಮಾಡುತ್ತಿದ್ದಾರೆ

WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್​ಆ್ಯಪ್: ಹೇಗೆ ಗೊತ್ತಾ?
WhatsApp Payments
Follow us
| Updated By: Vinay Bhat

Updated on: Sep 25, 2021 | 2:06 PM

ಬಳಕೆದಾರರಿಗೆ ಹೊಸ ಹೊಸ ಫೀಚರ್​​ಗಳನ್ನು ಪರಿಚಯಿಸುತ್ತಿರುವ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (WhatsApp) ಈಗ ಹೊಸ ಆಫರ್​ಗಳನ್ನೂ ನೀಡಲು ಮುಂದಾಗಿದೆ. 2020 ರಲ್ಲಿ ಭಾರತೀಯರಿಗೆ ವಾಟ್ಸ್​ಆ್ಯಪ್ ಪೇಮೆಂಟ್ (whatsapp payment) ಎಂಬ ಹೊಸ ವೈಶಿಷ್ಟ್ಯವನ್ನು ಸಂಸ್ಥೆ ಪರಿಚಯಿಸಿತ್ತು. ಆದರೆ, ದೇಶದಲ್ಲಿ ಇದು ಅಷ್ಟೊಂದು ಕ್ಲಿಕ್ ಆಗಲಿಲ್ಲ. ಭಾರತೀಯರು ಈಗಾಗಲೇ ಆನ್​ಲೈನ್ ಹಣದ ವ್ಯವಹಾರಕ್ಕೆ ಫೋನ್ ಪೇ (PhonePe), ಗೂಗಲ್ ಪೇ (Google Pay) ಯಂತಹ ಇತರೆ ಆ್ಯಪ್​ಗಳನ್ನು ಬಳಸುತ್ತಿರುವ ಕಾರಣ ವಾಟ್ಸ್​ಆ್ಯಪ್ ಪೇಮೆಂಟ್ ಅಷ್ಟೊಂದು ಪ್ರಸಿದ್ಧಿ ಪಡೆದಿರಲಿಲ್ಲ. ಸದ್ಯ ವಾಟ್ಸ್​ಆ್ಯಪ್ ಬಳಕೆದಾರರನ್ನು ತನ್ನತ್ತ ಸೆಳೆಯಲು ಹೊಸ ಯೋಜನೆ ಮಾಡಿಕೊಂಡಿದೆ. ಈಗ ವಾಟ್ಸಾಪ್ ಪಾವತಿ ವೈಶಿಷ್ಟ್ಯವನ್ನು ಬಳಸುವ ಭಾರತೀಯ ಬಳಕೆದಾರರಿಗೆ ಕ್ಯಾಶ್​ಬ್ಯಾಕ್​​​ (Whatsapp Cashback) ಆಫರ್ ನೀಡಲು ಮುಂದಾಗಿದೆ.

Wabetainfo ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಬಳಕೆದಾರರಿಗೆ ವಾಟ್ಸ್​ಆ್ಯಪ್ ಪೇಮೆಂಟ್​ ಮಾಡಿದ ತಕ್ಷಣ ಕ್ಯಶ್​ಬ್ಯಾಕ್ ಆಫರ್ ಎಂಬ ಹೊಸ ವೈಶಿಷ್ಟ್ಯವನ್ನು ತರಲು ವಾಟ್ಸ್​ಆ್ಯಪ್ ಡೆವಲಪರ್‌ಗಳು ಹೊಸ ಕೆಲಸ ಮಾಡುತ್ತಿದ್ದಾರೆ. ಈ ಹೊಸ ಕ್ಯಾಶ್‌ಬ್ಯಾಕ್ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ.

ಕುಸಿದಿರುವ ವಾಟ್ಸ್​ಆ್ಯಪ್ ಪೇಮೆಂಟ್ ಬಳಕೆದಾರರನ್ನು ಮೇಲೆತರಲು ಮತ್ತು ಗೂಗಲ್ ಪೇ, ಫೋನ್ ಪೇ ಯಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲು ವಾಟ್ಸ್​ಆ್ಯಪ್ ಬಹುಮಾನದ ರಿಯಾಯಿತಿಗಳನ್ನು ಪರಿಚಯಿಸುತ್ತಿದೆ. ಕ್ರಿಯಾತ್ಮಕತೆಯು ಇನ್ನೂ ಅಭಿವೃದ್ಧಿಯಲ್ಲಿದೆ ಮತ್ತು ಅದನ್ನು ಯಾರಿಂದಲೂ ಬಳಸಲಾಗುವುದಿಲ್ಲ. ಇದು ಆ್ಯಪ್‌ನ ಭವಿಷ್ಯದ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದೆ.

ಈ ಸೇವೆಯು ಭಾರತದಲ್ಲಿ ವಾಟ್ಸ್​ಆ್ಯಪ್ ಅನ್ನು ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಸೀಮಿತವಾಗಿರುತ್ತದೆ. 10  ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಯು ಕ್ಯಾಶ್‌ಬ್ಯಾಕ್ ವೋಚರ್‌ಗಳಾಗಿ ಸಿಗಲಿದೆ ಎಂದು ಹೇಳಲಾಗಿದೆ. ಪಾವತಿ ಮಾಡುವ ಬಳಕೆದಾರರು ಅದನ್ನು 48 ಗಂಟೆಗಳಲ್ಲಿ ಸ್ವೀಕರಿಸುತ್ತಾರೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ವೈಶಿಷ್ಟ್ಯದ ಅಧಿಕೃತ ಬಿಡುಗಡೆಯ ನಂತರ, ಕ್ಯಾಶ್‌ಬ್ಯಾಕ್ ಮೊತ್ತ ಮತ್ತು ಕ್ಯಾಶ್‌ಬ್ಯಾಕ್‌ಗಳ ಸಂಖ್ಯೆಯು ಬದಲಾಗುವ ಸಾಧ್ಯತೆಯಿದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು ಭಾರತದಲ್ಲಿ UPI ಪಾವತಿಗಳನ್ನು ಮಾತ್ರ ಮಾಡಬಹುದು ಎಂಬುದನ್ನು ಬಳಕೆದಾರರು ಗಮನಿಸಬೇಕು.

ಇನ್ನೂ ವಾಟ್ಸ್ಆ್ಯಪ್ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್ ಪರಿಚಯಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಟ್ರಾನ್ಸ್​ಕ್ರಿಪ್ಶನ್ ಎಂಬ ಫೀಚರ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.

ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್​ಕ್ರಿಪ್ಶನ್ ಫೀಚರ್​ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್​ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್​ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆಯಂತೆ.

Amazon: ಅಮೆಜಾನ್​ನಲ್ಲಿ ಹೀಗೊಂದು ಆಫರ್: ಕೇವಲ 20,000 ರೂ. ಒಳಗೆ ಲಭ್ಯವಿದೆ ಈ 5 ಸ್ಮಾರ್ಟ್ ಟಿವಿಗಳು

Amazon: ಊಹಿಸಲಾಗದಷ್ಟು ಡಿಸ್ಕೌಂಟ್: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್​ಗೆ ದಿನಾಂಕ ಫಿಕ್ಸ್

(WhatsApp is planning to give out cashback to WhatsApp Payments users soon)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ