- Kannada News Technology Amazon Great Indian Festive Sale Here are some of the options to buy a smart TV for under Rs 20000
Amazon: ಅಮೆಜಾನ್ನಲ್ಲಿ ಹೀಗೊಂದು ಆಫರ್: ಕೇವಲ 20,000 ರೂ. ಒಳಗೆ ಲಭ್ಯವಿದೆ ಈ 5 ಸ್ಮಾರ್ಟ್ ಟಿವಿಗಳು
Smart TV under Rs 20000: ಇದೇ ಅಕ್ಟೋಬರ್ 4 ರಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭವಾಗಲಿದೆ. ಆದರೆ, ಈಗಾಗಲೇ ಕೆಲವು ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹಾಗಾದ್ರೆ 20,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ ಟಿವಿಗಳು ಪರಿಚಯ ಇಲ್ಲಿದೆ.
Updated on: Sep 25, 2021 | 1:27 PM

ಗ್ರಾಹಕರಿಗೆ ಸದಾ ಒಂದಲ್ಲಾ ಒಂದು ಆಫರ್ಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಇ ಕಾಮರ್ಸ್ ತಾಣವಾ ಅಮೆಜಾನ್ ಸದ್ಯದಲ್ಲೇ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಸೇಲ್ ಅನ್ನು ನಡೆಸಲು ಮುಂದಾಗಿದೆ. ಆದರೆ, ಈಗಾಗಲೇ ಅಮೆಜಾನ್ನಲ್ಲಿ ಬಂಪರ್ ಡಿಸ್ಕೌಂಟ್ಗೆ ಕೆಲವು ಸ್ಮಾರ್ಟ್ ಟಿವಿಗಳು ಮಾರಾಟವಾಗುತ್ತಿದೆ.

ಹೌದು, ಇದೇ ಅಕ್ಟೋಬರ್ 4 ರಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆರಂಭವಾಗಲಿದೆ. ಆದರೆ, ಈಗಾಗಲೇ ರಿಯಲ್ ಮಿ, ರೆಡ್ಮಿ ಸ್ಯಾಮ್ಸಂಗ್, ಒನ್ಪ್ಲಸ್ ಬ್ರಾಂಡ್ಗಳ ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹಾಗಾದ್ರೆ 20,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್ ಟಿವಿಗಳು ಪರಿಚಯ ಇಲ್ಲಿದೆ.

ಅಮೆಜಾನ್ ಬೇಸಿಕ್ಸ್ 32 ಇಂಚಿನ ಸ್ಮಾರ್ಟ್ ಎಲ್ಇಡಿ ಫೈರ್ ಟಿವಿ: ಅಮೆಜಾನ್ ತನ್ನದೇ ಸ್ಮಾರ್ಟ್ಟಿವಿಗಳನ್ನು ಅಮೆಜಾನ್ ಬೇಸಿಕ್ಸ್ ಬ್ರ್ಯಾಂಡಿಂಗ್ ಹೆಸರಿನಲ್ಲಿ ಸೇಲ್ ಮಾಡುತ್ತಿದೆ. 32 ಇಂಚಿನ ಈ ಸ್ಮಾರ್ಟ್ ಟಿವಿ ಅಮೆಜಾನ್ ನಲ್ಲಿ ನಿಮಗೆ ಕೇವಲ 16,999 ರೂ.ಗಳಿಗೆ ಲಭ್ಯವಾಗಲಿದೆ.

ಎಂಐ 80 cm ಹೆಚ್ಡಿ ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED TV 4A PRO: ಶವೋಮಿ ಸಂಸ್ಥೆಯ Mi ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ 4A ಪ್ರೊ ಸ್ಮಾರ್ಟ್ ಟಿವಿ 16,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಟಿವಿ 32-ಇಂಚಿನ ಡಿಸ್ ಪ್ಲೇ ಹೊಂದಿದ್ದು, 60hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಟಿವಿ 3 ಹೆಚ್ ಡಿ ಎಂಐ ಪೋರ್ಟ್ಗಳನ್ನು ಹೊಂದಿದೆ.

ಒನ್ಪ್ಲಸ್ ವೈ ಸರಣಿ: ಒನ್ಪ್ಲಸ್ ವೈ ಸರಣಿಯಲ್ಲಿ ಹೆಚ್ ಡಿ ರೆಡ್ಮಿ ಟಿವಿ 32 ಇಂಚಿನ ಸ್ಕ್ರೀನ್ ಗಾತ್ರದಲ್ಲಿ ನೀಡಲಾಗಿದೆ. ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೆಲೆ ಕೇವಲ 18,999 ರೂ.

ಸ್ಯಾಮ್ಸಂಗ್ ವಂಡರ್ ಟೈನ್ಮೆಂಟ್ ಸರಣಿ: ಈ ಸರಣಿಯಲ್ಲಿ ನೀವು 32 ಇಂಚಿನ ಆಯ್ಕೆಯ ಸ್ಮಾರ್ಟ್ ಟಿವಿಯನ್ನು 18,290 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು ಡಾಲ್ಬಿ ಡಿಜಿಟಲ್ ಪ್ಲಸ್ ಬೆಂಬಲಿಸುವ 20 ವ್ಯಾಟ್ ಸ್ಪೀಕರ್ಗಳನ್ನು ಅಳವಡಿಸಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 HDMI ಪೋರ್ಟ್ಗಳು, ಬ್ಲೂ ರೇ ಪ್ಲೇಯರ್ಗಳು, ಗೇಮಿಂಗ್ ಕನ್ಸೋಲ್, ಹಾರ್ಡ್ ಡ್ರೈವ್ಗಳನ್ನು ಬೆಂಬಲಿಸಲಿದೆ.

ಎಲ್ಜಿ ಸ್ಮಾರ್ಟ್ ಎಲ್ಇಡಿ ಟಿವಿ 32LM563BPTC: 20,000 ರೂ. ಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್ ಟಿವಿಗಳಲ್ಲಿ ಎಲ್ ಜಿ ಸ್ಮಾರ್ಟ್ ಎಲ್ಇಡಿ ಟಿವಿ 32LM563BPTC ಕೂಡ ಒಂದಾಗಿದೆ. ಈ ಸ್ಮಾರ್ಟ್ ಟಿವಿಯ ಬೆಲೆ ಅಮೆಜಾನ್ನಲ್ಲಿ 17,999ರೂ ಹೊಂದಿದೆ. ಇದು 32 ಇಂಚಿನ ಸ್ಕ್ರೀನ್ ಗಾತ್ರದಲ್ಲಿ ಲಭ್ಯವಾಗಲಿದೆ.




