Realme Narzo 50i: ರಿಯಲ್ ಮಿಯಿಂದ ಕೇವಲ 7,499 ರೂ. ಗೆ ಬಲಿಷ್ಠ ಬ್ಯಾಟರಿಯ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
Realme Narzo 50A: ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್ 6,000mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು 53 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ.
ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ತಾಣವಾಗಿರುವ ಭಾರತದಲ್ಲಿ ರಿಯಲ್ ಮಿ (Realme) ಕಂಪನಿ ಎರಡು ಹೊಸ ಫೋನನ್ನು ಮಾರುಕಟ್ಟೆಗೆ ಅನಾವರಣ ಮಾಡಿದೆ. ರಿಯಲ್ ಮಿ ನಾರ್ಜೊ 50ಎ ಮತ್ತು ರಿಯಲ್‌ಮಿ ನಾರ್ಜೊ 50ಐ (Realme Narzo 50A and Realme Narzo 50i) ಸ್ಮಾರ್ಟ್‌ಫೋನ್‌ಗ ಭಾರತದಲ್ಲಿ ಲಾಂಚ್ ಆಗಿದ್ದು ಆಕರ್ಷಕ ಫೀಚರ್ಗಳಿಂದ ಕೂಡಿದೆ. ನಾರ್ಜೊ 50A ಪ್ರೀಮಿಯಂ ಮಾದರಿಯಾಗಿದ್ದು ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ನಾರ್ಜೊ 50i ಸ್ಮಾರ್ಟ್‌ಫೋನ್ (Smartphone) ಯುನಿಸೋಕ್ 9863 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಅಕ್ಟೋಬರ್ 7 ರಿಂದ ಮಧ್ಯರಾತ್ರಿ 12 ಗಂಟೆಗೆ ರಿಯಲ್ ಮಿ ಅಧಿಕೃತ ವೆಬ್ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಖರೀದಿಗೆ ಸಿಗಲಿದೆ.
ಬೆಲೆ ಎಷ್ಟು?:
ರಿಯಲ್ ಮಿ ನಾರ್ಜೊ 50A ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 11,499 ರೂ. ನಿಗದಿ ಮಾಡಲಾಗಿದೆ. ಅಂತೆಯೆ 4GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಫೋನ್ 12,499 ರೂ. ಗೆ ಮಾರಾಟ ಕಾಣಲಿದೆ. ಇತ್ತ ರಿಯಲ್ ಮಿ ನಾರ್ಜೊ 50i ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಗೆ ಕೇವಲ 7,499 ರೂ. ಬೆಲೆಯನ್ನು ಹೊಂದಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ 8,499 ರೂ. ಇದೆ.
ರಿಯಲ್‌ಮಿ ನಾರ್ಜೊ 50i:
ಈ ಸ್ಮಾರ್ಟ್‌ಫೋನ್ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೋಕ್ 9863 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
8 ಮೆಗಾಪಿಕ್ಸೆಲ್ AI ರಿಯರ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 5 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 43 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ಹೊಂದಿರಲಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಸಹ ಹೊಂದಿದೆ.
ರಿಯಲ್‌ಮಿ ನಾರ್ಜೊ 50A:
ಈ ಸ್ಮಾರ್ಟ್‌ಫೋನ್ 6.5-ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11. ಆಧಾರಿತ ರಿಯಲ್‌ಮಿ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6,000mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು 53 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ.
WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್ಆ್ಯಪ್: ಹೇಗೆ ಗೊತ್ತಾ?
Amazon: ಅಮೆಜಾನ್ನಲ್ಲಿ ಹೀಗೊಂದು ಆಫರ್: ಕೇವಲ 20,000 ರೂ. ಒಳಗೆ ಲಭ್ಯವಿದೆ ಈ 5 ಸ್ಮಾರ್ಟ್ ಟಿವಿಗಳು
(Realme Narzo 50A and Realme Narzo 50i Big Battery smartphones were launched in India)