Redmi 9 Activ: ಸದ್ದಿಲ್ಲದೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿ ಮಾರಾಟ ಕೂಡ ಶುರು ಮಾಡಿದ ರೆಡ್ಮಿ

ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಫೋನಿಗೆ 9,499 ರೂ. ನಿಗದಿ ಮಾಡಲಾಗಿದೆ.

Redmi 9 Activ: ಸದ್ದಿಲ್ಲದೆ ಹೊಸ ಸ್ಮಾರ್ಟ್​ಫೋನ್ ರಿಲೀಸ್ ಮಾಡಿ ಮಾರಾಟ ಕೂಡ ಶುರು ಮಾಡಿದ ರೆಡ್ಮಿ
Redmi 9 Activ
Follow us
TV9 Web
| Updated By: Vinay Bhat

Updated on: Sep 26, 2021 | 1:32 PM

ಚೀನಾ ಮೂಲದ ಶವೋಮಿ (Xiaomi) ಕಂಪನಿ ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತವೆ. ಅದಕ್ಕಾಗಿ ಇದು ಭಾರತದ ನಂಬರ್ ಒನ್ ಬ್ರ್ಯಾಂಡ್ (India’s No. 1 Smartphone Brand) ಆಗಿ ಕಾಣಿಸಿಕೊಂಡಿದೆ. ತನ್ನ ಬ್ರ್ಯಾಂಡ್​ನಡಿಯಲ್ಲಿ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವಾಗ ಶವೋಮಿ ಕಂಪನಿಯ ಪ್ರಚಾರವೂ ಜೋರಾಗಿಯೇ ಇರುತ್ತದೆ. ಆದರೆ, ಈ ಬಾರಿ ಸದ್ದಿಲ್ಲದೆ ಶವೋಮಿ ರೆಡ್ಮಿ 9 ಸರಣಿಯಲ್ಲಿ (Redmi 9 Series) ಹೊಸ ಫೋನೊಂದನ್ನು ಅನಾವರಣ ಮಾಡಿದ್ದಲ್ಲದೆ ಅದರ ಮಾರಾಟ ಕೂಡ ಶುರು ಮಾಡಿದೆ. ಹೌದು, ರೆಡ್ಮಿ 9 ಸರಣಿಯಲ್ಲಿ ಮುಂದುವರಿದ ಭಾಗವಾಗಿ ಹೊಸ ರೆಡ್ಮಿ 9 ಆಕ್ಟಿವ್ (Redmi 9 Activ) ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು ಮಾರಾಟ ಕಾಣುತ್ತಿದೆ. ಈ ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಆಕರ್ಷಕ ಲುಕ್​ನಲ್ಲಿ ಕಾಣಿಸಿಕೊಂಡಿದೆ.

ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತಿದೆ. 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಫೋನಿಗೆ 9,499 ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM ಮತ್ತು 128GB ಸ್ಟೋರೆಜ್ ಆಯ್ಕೆಯ ಮತ್ತೊಂದು ಮಾದರಿ ಕೂಡ ಇದ್ದು ಇದರ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ಇನ್ನು ಈ ಫೋನ್ ಕಾರ್ಬನ್ ಬ್ಲ್ಯಾಕ್, ಕೋರಲ್ ಗ್ರೀನ್ ಮತ್ತು ಮೆಟಾಲಿಕ್ ಪರ್ಪಲ್ ಬಣ್ಣಗಳ ಆಯ್ಕೆ ಒಳಗೊಂಡಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಈ ಫೋನ್ ಸೇಲ್ ಕಾಣುತ್ತಿದೆ.

ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ.

ಇನ್ನೂ ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿಯ ಸೆನ್ಸಾರ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ.

ರೆಡ್ಮಿ 9 ಆಕ್ಟೀವ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. ಇದರೊಂದಿಗೆ ಸೈಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ, ಬ್ಲೂಟೂತ್, ಹಾಟ್‌ಸ್ಟಾಪ್ ಸೇರಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLET, ವೈ-ಫೈ 802.11 ಎ / ಬಿ / ಜಿ / ಎನ್, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿದಂತೆ ಇತ್ತೀಚೆಗಿನ ಪ್ರಮುಖ ಆಯ್ಕೆಯನ್ನು ನೀಡಲಾಗಿದೆ.

Instagram: iOS ಬಳಕೆದಾರರಿಗೆ ಇನ್​ಸ್ಟಾಗ್ರಾಮ್​ನಿಂದ ಹೊಸ ಅಪ್ಡೇಟ್: ಆಡಿಯೋ ತೊಂದರೆ ನಿವಾರಣೆ

Realme Narzo 50i: ರಿಯಲ್ ಮಿಯಿಂದ ಕೇವಲ 7,499 ರೂ. ಗೆ ಬಲಿಷ್ಠ ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

(Redmi 9 Activ 5000mAh battery Dual Rear Camera launched and Sale started in India via Amazon)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್