ವಿಶ್ವದ ಅತ್ಯಂತ ಎತ್ತರದಲ್ಲಿರುವ ರೇಡಿಯೋ ಕೇಂದ್ರದಲ್ಲಿ ಅಧಿಕ ಶಕ್ತಿಯ ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಸಚಿವ ಅನುರಾಗ್​ ಠಾಕೂರ್​

ಇದೀಗ ಉದ್ಘಾಟನೆಯಾದ ಹೈಪವರ್​ ಟ್ರಾನ್ಸ್​ಮಿಟರ್​ಗಳಿಂದಾಗಿ ಪವರ್ತ ಪ್ರದೇಶದಲ್ಲಿ ವಾಸವಾಗಿರುವ ಜನರೂ ಕೂಡ ರೇಡಿಯೋ ಹಾಗೂ ದೂರದರ್ಶನದಿಂದ ಗುಣಮಟ್ಟದ ಸೇವೆ ಪಡೆಯುವಂತಾಗುತ್ತದೆ.

ವಿಶ್ವದ ಅತ್ಯಂತ ಎತ್ತರದಲ್ಲಿರುವ ರೇಡಿಯೋ ಕೇಂದ್ರದಲ್ಲಿ ಅಧಿಕ ಶಕ್ತಿಯ ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಸಚಿವ ಅನುರಾಗ್​ ಠಾಕೂರ್​
ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಅನುರಾಗ್​ ಠಾಕೂರ್​
Follow us
TV9 Web
| Updated By: Lakshmi Hegde

Updated on:Sep 25, 2021 | 2:11 PM

ಕಾರ್ಗಿಲ್​​ನ ಹಂಬಟಿಂಗ್ಲಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ ರೇಡಿಯೋ ಕೇಂದ್ರದಲ್ಲಿ ಅತ್ಯಧಿಕ ವಿದ್ಯುತ್​ ಶಕ್ತಿ ಹೊಂದಿರುವ ಎರಡು  ಟ್ರಾನ್ಸ್​ಮಿಟರ್​(High power transmitters)ಗಳನ್ನು ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್​ ಉದ್ಘಾಟಿಸಿದ್ದಾರೆ.  ಸಮುದ್ರಮಟ್ಟದಿಂದ 13,300 ಅಡಿ ಎತ್ತರದಲ್ಲಿರುವ ಏರ್​ಇಂಡಿಯಾ ಎಫ್​ಎಂ ರೇಡಿಯೋ ಸ್ಟೇಶನ್​​ನಲ್ಲಿ​ಉದ್ಘಾಟನೆಯಾದ ವಿದ್ಯುತ್​ ಟ್ರಾನ್ಸ್​ಮಿಟರ್​ಗಳಿಗೆ ಚಾಲನೆ ನೀಡಲಾಗಿದೆ. ಪ್ರತಿ ಟ್ರಾನ್ಸ್​ಮಿಟರ್ 10KW ಶಕ್ತಿ ಹೊಂದಿದ್ದು, ಇವುಗಳಿಂದಾಗಿ   ಕಾರ್ಗಿಲ್​ ಮತ್ತು ಬಟಾಲಿಕ್​ ವಲಯಗಳಲ್ಲಿ ಎಫ್​ಎಂ ರೇಡಿಯೋ ಮತ್ತು ದೂರದರ್ಶನದ ಪ್ರಸರಣದ ಗುಣಮಟ್ಟ ಸುಧಾರಿಸುತ್ತದೆ. 

ಇದೀಗ ಉದ್ಘಾಟನೆಯಾದ ಹೈಪವರ್​ ಟ್ರಾನ್ಸ್​ಮಿಟರ್​ಗಳಿಂದಾಗಿ ಪವರ್ತ ಪ್ರದೇಶದಲ್ಲಿ ವಾಸವಾಗಿರುವ ಜನರೂ ಕೂಡ ರೇಡಿಯೋ ಹಾಗೂ ದೂರದರ್ಶನದಿಂದ ಗುಣಮಟ್ಟದ ಸೇವೆ ಪಡೆಯುವಂತಾಗುತ್ತದೆ. ಅಂದರೆ ನೆಟ್​ವರ್ಕ್​ ಸಮಸ್ಯೆ ಸುಧಾರಣೆಯಾಗುತ್ತದೆ. ಲಡಾಖ್​ನ ಗಡಿ ಗ್ರಾಮಗಳ ಜನರಿಗೂ ಜಗತ್ತಿನ ಆಗುಹೋಗುಗಳ ಮಾಹಿತಿ ಸರಿಯಾಗಿ ತಲುಪಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಅದರ ಒಂದು ಭಾಗವಾಗಿ ಕಾರ್ಗಿಲ್​​ನಲ್ಲಿರುವ ವಿಶ್ವದ ಅತ್ಯಂತ ಎತ್ತರವಾದ ಏರ್​ಸ್ಟೇಶನ್​​ನಲ್ಲಿ ಹೆಚ್ಚು ವಿದ್ಯುಚ್ಛಕ್ತಿಯುಳ್ಳ ಟ್ರಾನ್ಸ್​ಮಿಟರ್​ಗಳನ್ನು ಅಳವಡಿಸಲಾಗಿದೆ.

ಈ ವೇಳೆ ಲಡಾಖ್​ ಎಂಪಿ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್ ಕೂಡ ಹಾಜರಿದ್ದರು. ಇನ್ನು ಅಕ್ಟೋಬರ್​ ವೇಳೆಗೆ ಕಾರ್ಯಕ್ರಮಗಳ ಪ್ರಸಾರವನ್ನು ದ್ವಿಗುಣಗೊಳಿಸುವುದಾಗಿಯೂ ಅನುರಾಗ್​ ಠಾಕೂರ್​ ಮತ್ತು ಡಿಡಿ ಕಾಶ್ಮೀರದ ಲಡಾಖಿ ನ್ಯೂಸ್​ ಡಿಟಿಎಚ್​ ಪ್ಲ್ಯಾಟ್​ಫಾರ್ಮ್ ಭರವಸೆ ನೀಡಿದೆ.  ಲಡಾಖ್​​ನ ಮೂಲೆಮೂಲೆಗೆ ಮಾಹಿತಿ ರವಾನೆ ಸಲುವಾಗಿ ಆಲ್​ ಇಂಡಿಯಾ ರೇಡಿಯೋ ಸೇವೆಗಳನ್ನು ಇನ್ನಷ್ಟು ಪರಿಷ್ಕರಿಸಲಾಗುವುದು ಎಂದೂ ಅನುರಾಗ್​ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: Loan Transfer: ಸಾಲ ವರ್ಗಾವಣೆಗೆ ಹೊಸ ಮಾರ್ಗದರ್ಶಿ ನಿಯಮಾವಳಿ ಘೋಷಿಸಿದ ಆರ್​ಬಿಐ

ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

(High power transmitters at world’s highest radio station inaugurated By Union Minister Anurag Thakur)

Published On - 1:45 pm, Sat, 25 September 21