AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sneha Dubey: ಕಾಶ್ಮೀರದ ಪ್ರಸ್ತಾಪವೆತ್ತಿದ ಪಾಕ್​ ಪ್ರಧಾನಿಗೆ ಕಟು ಉತ್ತರ ಕೊಟ್ಟ ಸ್ನೇಹಾ ದುಬೆ ಯಾರು? ಚಿಕ್ಕವಯಸ್ಸಿನ ಅಧಿಕಾರಿ ಬಗ್ಗೆ ಇಲ್ಲಿದೆ ಮಾಹಿತಿ

2012ರ ಬ್ಯಾಚ್ ಐಎಫ್ಎಸ್ (Indian Foreign Service) ಅಧಿಕಾರಿಯಾಗಿರುವ ಸ್ನೇಹ ದುಬೆ, ಗೋವಾದಲ್ಲಿ ಶಾಲಾ ಶಿಕ್ಷಣ ಪಡೆದವರು. ಬಳಿಕ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ.

Sneha Dubey: ಕಾಶ್ಮೀರದ ಪ್ರಸ್ತಾಪವೆತ್ತಿದ ಪಾಕ್​ ಪ್ರಧಾನಿಗೆ ಕಟು ಉತ್ತರ ಕೊಟ್ಟ ಸ್ನೇಹಾ ದುಬೆ ಯಾರು? ಚಿಕ್ಕವಯಸ್ಸಿನ ಅಧಿಕಾರಿ ಬಗ್ಗೆ ಇಲ್ಲಿದೆ ಮಾಹಿತಿ
ಸ್ನೇಹಾ ದುಬೆ
TV9 Web
| Updated By: Lakshmi Hegde|

Updated on: Sep 25, 2021 | 2:51 PM

Share

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ಗೆ ತಿರುಗೇಟು ನೀಡಿದ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸ್ನೇಹಾ ದುಬೆ (Sneha Dubey)ಯವರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯುನ್​ ಸಾಮಾನ್ಯ ಸಭೆಯಲ್ಲಿ ಮಾತನಾಡುವಾಗ ಕಾಶ್ಮೀರದ ಬಗ್ಗೆ ವೃಥಾ ಉಲ್ಲೇಖ ಮಾಡಿದ್ದ ಇಮ್ರಾನ್​ ಖಾನ್ (Pak PM Imran Khan)​​ಗೆ ಕಟುವಾಗಿ ತಿರುಗೇಟು ನೀಡಿದ್ದಾರೆ ಈ ಸ್ನೇಹಾ. ವಾಸ್ತವದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿರುವ ಪಾಕಿಸ್ತಾನ, ತನ್ನನ್ನು ತಾನು ಬೆಂಕಿ ಶಮನ ಮಾಡಿಕೊಳ್ಳುವವನಂತೆ ಜಗತ್ತಿನೆದುರು ಸೋಗು ಹಾಕಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದಿದ್ದ ಸ್ನೇಹಾ, ಈಗ ಪಾಕಿಸ್ತಾನ ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗಗಳನ್ನು ಬಿಟ್ಟು ಹೊರಡಬೇಕು ಎಂದು ಹೇಳಿದ್ದರು. 

ಪಾಕಿಸ್ತಾನವನ್ನು ಭಯೋತ್ಪಾದನೆಯ ಪೋಷಕ, ಇಡೀ ಜಗತ್ತಿಗೆ ತೊಂದರೆ ಕೊಡುತ್ತಿರುವ ದೇಶ ಎಂದು ನಿರರ್ಗಳವಾಗಿ  ಭಾಷಣ ಮಾಡಿರುವ ಯುನ್​ನ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ವಿಡಿಯೋ ವೈರಲ್​ ಆಗುತ್ತಿದ್ದಂತೆ ದೇಶದ ಜನರು ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ಆಕೆಯ ಧೈರ್ಯಕ್ಕೆ ಶಹಬಾಸ್​ ಎಂದಿದ್ದಾರೆ. ಹಾಗೇ, ಸ್ನೇಹಾ ದುಬೆ ಬಗ್ಗೆ ಕುತೂಹಲವೂ ಕೂಡ ಹೆಚ್ಚಾಗಿದೆ. ಈ ಸ್ನೇಹಾ ಯಾರು? ಚಿಕ್ಕ ವಯಸ್ಸಿನಲ್ಲೇ  ಇಷ್ಟು ಮಹತ್ವದ ಜವಾಬ್ದಾರಿ ಹೊರಲು ಕಾರಣ ಏನು? ಎಂಬ ಪ್ರಶ್ನೆಗಳು ಎದ್ದಿವೆ.  ಚಿಕ್ಕ ವಯಸ್ಸಿನಲ್ಲಿ ಸ್ನೇಹ ದುಬೆಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅದನ್ನು ಅವರು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂಬ ಮೆಚ್ಚುಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಯಾರಿವರು ಸ್ನೇಹಾ ದುಬೆ? 2012ರ ಬ್ಯಾಚ್ ಐಎಫ್ಎಸ್ (Indian Foreign Service) ಅಧಿಕಾರಿಯಾಗಿರುವ ಸ್ನೇಹ ದುಬೆ, ಗೋವಾದಲ್ಲಿ ಶಾಲಾ ಶಿಕ್ಷಣ ಪಡೆದವರು. ಬಳಿಕ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ. ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಸ್ನೇಹ ದುಬೆಗೆ 12 ವರ್ಷದ ಬಾಲಕಿಯಾಗಿದ್ದಾಗಲೇ, ಇಂಡಿಯನ್ ಫಾರಿನ್ ಸರ್ವೀಸ್ ಸೇರುವ ಆಸೆ ಇತ್ತು. 2011ರಲ್ಲಿ ಮೊದಲ ಯತ್ನದಲ್ಲೇ ಅಖಿಲ ಭಾರತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ.

ಇಂಡಿಯನ್ ಫಾರಿನ್ ಸರ್ವೀಸ್ ಸೇರಲು, ತನಗಿರುವ ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಕಲಿಯುವ ಆಸಕ್ತಿ ಹಾಗೂ ಹೊಸ ಸಂಸ್ಕೃತಿ, ದೇಶವನ್ನು ಪ್ರತಿನಿಧಿಸುವ ಆಸೆಗಳೇ ಕಾರಣ ಎಂದು ಸ್ನೇಹ ದುಬೆ ಹೇಳಿದ್ದಾರೆ. ಜೊತೆಗೆ ಸರ್ಕಾರದ ಪ್ರಮುಖ ನೀತಿ, ತೀರ್ಮಾನಗಳ ಭಾಗವಾಗುವುದು, ಜನರಿಗೆ ಸಹಾಯ ಮಾಡುವುದು ಸ್ನೇಹಗೆ ಇಷ್ಟ. ಸ್ನೇಹಗೆ ಟ್ರಾವೆಲ್ ಮಾಡುವುದು ಅಂದರೇ ಬಹಳ ಇಷ್ಟ. ಐಎಫ್ಎಸ್ ಅಧಿಕಾರಿಯಾಗಿ ಈಗ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಸ್ನೇಹ ಕುಟುಂಬದಲ್ಲಿ ಸರ್ಕಾರಿ ಸೇವೆಯಲ್ಲಿರುವುದೇ ಸ್ನೇಹ ದುಬೆಯೇ ಮೊದಲು. ಸ್ನೇಹ ತಂದೆ, ಎಂಎನ್‌ಸಿ ಕಂಪನಿಯೊಂದರಲ್ಲಿ ಉದ್ಯೋಗಿ. ತಾಯಿ ಶಾಲಾ ಶಿಕ್ಷಕಿ. ಐಎಫ್ಎಸ್ ಗೆ ಸೇರ್ಪಡೆಯಾದ ಬಳಿಕ ಸ್ನೇಹ ದುಬೆ ಮೊದಲಿಗೆ ಕೇಂದ್ರದ ವಿದೇಶಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ 2014ರ ಆಗಸ್ಟ್ ತಿಂಗಳಿನಲ್ಲಿ ಮ್ಯಾಡ್ರಿಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ತೆರಳಿದ್ದರು. ಸದ್ಯ ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘನೆ ಟ್ವಿಟರ್​ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ನೇಹ ದುಬೆಯನ್ನು ಭಾರತದ ಜನರು ಶ್ಲಾಘಿಸುತ್ತಿದ್ದಾರೆ. ಪಾಕಿಸ್ತಾನದ ಜೋಕರ್ ಗಳ ಬಾಯಿ ಬಂದ್ ಮಾಡಿದ್ದಾರೆ ಎಂದು ಒಬ್ಬರು ಶ್ಲಾಘಿಸಿದರೇ, ಪ್ರತಿಯೊಂದು ಪದವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು, ಸತ್ಯದೊಂದಿಗೆ ಬ್ರಿಲಿಯಂಟ್ ಆಗಿ ಭಾಷಣ ಮಾಡಿದ್ದಾರೆ ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ ಭಾರತದ ಐಎಫ್ಎಸ್ ಅಧಿಕಾರಿಗಳನ್ನು ಸ್ನೇಹ ದುಬೆಯ ಜೊತೆಗೆ ಹೋಲಿಕೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಈ ಹಿಂದೆ, ಇನಾಂ ಗಂಭೀರ್, ವಿಧಿಶಾ ಮೈತ್ರಾ ಕೂಡ ಇದೇ ರೀತಿ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದರು. ಪಾಕಿಸ್ತಾನದ ಪ್ರಧಾನಿಗಳ ಭಾಷಣಕ್ಕೆ ತಿರುಗೇಟು ನೀಡಿದ್ದರು. ಈಗ ಸ್ನೇಹ ದುಬೆ ಸರದಿ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ವಿಶೇಷ ವರದಿ: ಎಸ್.ಚಂದ್ರಮೋಹನ್, ನ್ಯಾಷನಲ್ ಬ್ಯೂರೋ, ಟಿವಿ9 ಕನ್ನಡ

ಇದನ್ನೂ ಓದಿ: Sneha Dubey: ‘ಕಾಶ್ಮೀರದಿಂದ ಮೊದಲು ಜಾಗ ಖಾಲಿ ಮಾಡಿ..’-ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಕಟು ಉತ್ತರ ನೀಡಿದ ಭಾರತ

WhatsApp: ಹಣ ಪಾವತಿ ಮಾಡಿ ಹಣ ಗಳಿಸಿ: ಬಂಪರ್ ಆಫರ್ ಪರಿಚಯಿಸಲಿದೆ ವಾಟ್ಸ್​ಆ್ಯಪ್: ಹೇಗೆ ಗೊತ್ತಾ?

ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್
ಸಿಎಂ, ಡಿಸಿಎಂ ಮತ್ತು ಹೆಚ್​ಎಂ ನಾಡಿನ ಬೇಷರತ್ ಕ್ಷಮೆ ಕೇಳಬೇಕು: ಸುರೇಶ್