Viral Video: ಬಾಂಗ್ರಾ ನೃತ್ಯಕ್ಕೆ ಸಖತ್ತಾಗಿ ಹೆಜ್ಜೆ ಹಾಕಿದ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್; ವಿಡಿಯೋ ವೈರಲ್
Charanjit Singh Channi Dance | ಸಿಎಂ ಚರಣ್‌ಜಿತ್ ಸಿಂಗ್ ವಿದ್ಯಾರ್ಥಿಗಳು ಬಾಂಗ್ರಾ ನೃತ್ಯ ಮಾಡುತ್ತಿದ್ದಾಗ ತಾವೂ ಎದ್ದು ವೇದಿಕೆ ಹತ್ತಿದರು. ಆ ವಿದ್ಯಾರ್ಥಿಗಳೊಂದಿಗೆ ಸೇರಿ ಪಂಜಾಬ್ನ ಸಾಂಪ್ರದಾಯಿಕ ನೃತ್ಯವಾದ ಬಾಂಗ್ರಾಗೆ ಸಖತ್ತಾಗೇ ಹೆಜ್ಜೆ ಹಾಕಿದರು.
ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಚರಣ್‌ಜಿತ್ ಸಿಂಗ್ ಛನ್ನಿ (Charanjit Singh Channi) ವೇದಿಕೆಯಲ್ಲಿ ಬಾಂಗ್ರಾ (Bhangra) ನೃತ್ಯಕ್ಕೆ ಭರ್ಜರಿಯಾಗಿ ಹೆಜ್ಜೆ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಪಂಜಾಬ್ನಲ್ಲಿ ಮೊದಲ ಬಾರಿಗೆ ದಲಿತ ನಾಯಕ ಚರಣ್‌ಜಿತ್ ಸಿಂಗ್ ಛನ್ನಿ ಸಿಎಂ ಪಟ್ಟಕ್ಕೆ ಏರಿದ್ದರು.
ಕಪುರ್ತಲದಲ್ಲಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಚರಣ್‌ಜಿತ್ ಸಿಂಗ್ ಅಲ್ಲಿ ವಿದ್ಯಾರ್ಥಿಗಳು ಬಾಂಗ್ರಾ ನೃತ್ಯ ಮಾಡುತ್ತಿದ್ದಾಗ ತಾವೂ ಎದ್ದು ವೇದಿಕೆ ಹತ್ತಿದರು. ಆ ವಿದ್ಯಾರ್ಥಿಗಳೊಂದಿಗೆ ಸೇರಿ ಪಂಜಾಬ್ನ ಸಾಂಪ್ರದಾಯಿಕ ನೃತ್ಯವಾದ ಬಾಂಗ್ರಾಗೆ ಸಖತ್ತಾಗೇ ಹೆಜ್ಜೆ ಹಾಕಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಟರ್ಬಾನ್ ಹಾಕಿಕೊಂಡಿರುವ ಸಿಎಂ ಛನ್ನಿ ಡ್ಯಾನ್ಸ್ನ ವಿಡಿಯೋ ನೀವಿನ್ನೂ ನೋಡದಿದ್ದರೆ ನೋಡಿ ಬಿಡಿ.
ಕಳೆದ ಸೋಮವಾರವಷ್ಟೆ ಚರಣ್‌ಜಿತ್ ಸಿಂಗ್ ಪಂಜಾಬ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ನವಜೀತ್ ಸಿಂಗ್ ಸಿಧು ಮತ್ತಿತರ ನಾಯಕರು ಆಯ್ಕೆ ಮಾಡಿರುವವರು ಚರಣ್‌ಜಿತ್ ಸಿಂಗ್ ಪಂಜಾಬ್ನ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೆ ಏರಿದ್ದಾರೆ. ನವಜೋತ್ ಸಿಂಗ್ ಸಿಧು ಜೊತೆಗಿನ ಭಿನ್ನಾಭಿಪ್ರಾಯದಿಂದ ಹಾಗೂ ಪಂಜಾಬ್ನ ಕಾಂಗ್ರೆಸ್ ನಾಯಕರ ಅಸಮಾಧಾನದಿಂದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಅದಾದ ಬಳಿಕ ಚರಣ್‌ಜಿತ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು.
Chief Minister @CHARANJITCHANNI enjoying Bhangra with the students of IK Gujral Punjab Technical University, Kapurthala. pic.twitter.com/r910EyLALs
— CMO Punjab (@CMOPb) September 23, 2021
48 ವರ್ಷದ ಚರಣ್‌ಜಿತ್ ಸಿಂಗ್ ಛನ್ನಿ ಚಾಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. 3 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಇವರು ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ತರಬೇತಿ ಸಚಿವರಾಗಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಧ್ವನಿ ಎತ್ತಿದ್ದ ಪಂಜಾಬ್ ಕಾಂಗ್ರೆಸ್ ನಾಯಕರಲ್ಲಿ ಚರಣ್‌ಜಿತ್ ಸಿಂಗ್ ಛನ್ನಿ ಕೂಡ ಒಬ್ಬರಾಗಿದ್ದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಸುಖ್ಜಿಂದರ್ ರಾಂಧವ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ಅಂತಿಮವಾಗಿ ದಲಿತ ನಾಯಕ ಚರಣ್‌ಜಿತ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿತ್ತು.
Charanjit Singh Channi ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ
(Viral Video Punjab Chief Minister Charanjit Singh Channi Performs Bhangra Dance with Students Watch Video)