Charanjit Singh Channi ನಾನೊಬ್ಬ ಸಾಮಾನ್ಯ ಮನುಷ್ಯ, ರೈತರ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಛನ್ನಿ

TV9 Digital Desk

| Edited By: Rashmi Kallakatta

Updated on: Sep 20, 2021 | 3:23 PM

Punjab CM: ನಾನೂ ಆಮ್ ಆದ್ಮಿ (ಸಾಮಾನ್ಯ ಮನುಷ್ಯ ) ಎಂದು ಹೇಳಿದ ಛನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವು ಸಾಮಾನ್ಯ ಮನುಷ್ಯನನ್ನು ಸಿಎಂ ಮಾಡಿದೆ ಎಂದು ಹೇಳಿದರು.

Charanjit Singh Channi ನಾನೊಬ್ಬ ಸಾಮಾನ್ಯ ಮನುಷ್ಯ, ರೈತರ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಛನ್ನಿ
ಚರಣ್​​ಜಿತ್ ಸಿಂಗ್ ಛನ್ನಿ

Follow us on

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಚರಣ್​​ಜಿತ್ ಸಿಂಗ್ ಛನ್ನಿ(Charanjit Singh Channi)  ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ತಮ್ಮ ಸರ್ಕಾರವು ರೈತರೊಂದಿಗೆ ಇದೆ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಾರ್ಟಿಗೆ (AAP)ಗೆ ಟಾಂಗ್ ನೀಡುತ್ತಾ ನಾನೂ ಆಮ್ ಆದ್ಮಿ (ಸಾಮಾನ್ಯ ಮನುಷ್ಯ ) ಎಂದು ಹೇಳಿದ ಛನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವು ಸಾಮಾನ್ಯ ಮನುಷ್ಯನನ್ನು ಸಿಎಂ ಮಾಡಿದೆ ಎಂದು ಹೇಳಿದರು. “ನಾನು ಬಡವರನ್ನು ಪ್ರತಿನಿಧಿಸುತ್ತೇನೆ. ಸಾಮಾನ್ಯ ವ್ಯಕ್ತಿಯ ಆಡಳಿತವನ್ನು ಸ್ಥಾಪಿಸಲಾಗಿದೆ, ”ನಮ್ಮ ಪಕ್ಷವೇ ಎಲ್ಲಕ್ಕಿಂತ ಮೇಲು, ಸಿಎಂ ಅಥವಾ ಕ್ಯಾಬಿನೆಟ್ ಅಲ್ಲ. ಪಕ್ಷದ ಸಿದ್ಧಾಂತದ ಪ್ರಕಾರ ಸರ್ಕಾರ ಕೆಲಸ ಮಾಡುತ್ತದೆ ಎಂದು ಛನ್ನಿ ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕ ಹರೀಶ್ ರಾವತ್ ಮತ್ತು ಕಾಂಗ್ರೆಸ್ ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಬೆಂಬಲ ಪಡೆದ ಛನ್ನಿ “ಬಡವರ ಬಾಕಿ ಇರುವ ಎಲ್ಲ ವಿದ್ಯುತ್ ಬಿಲ್​​ಗಳನ್ನು  ಮನ್ನಾ ಮಾಡಲಾಗುವುದು ಮತ್ತು ಅವರ ವಿದ್ಯುತ್ ಸಂಪರ್ಕಗಳನ್ನು ಮರುಸ್ಥಾಪಿಸಲಾಗುವುದು” ಎಂದು ಹೇಳಿದರು. “18 ಅಂಶಗಳ ಕಾರ್ಯಸೂಚಿಯನ್ನು ಒಂದೊಂದಾಗಿ ಜಾರಿಗೊಳಿಸಲಾಗುವುದು” ಎಂದು ಅವರು ಭರವಸೆ ನೀಡಿದರು.

ಅಮರಿಂದರ್ ಸಿಂಗ್ ಅವರ ನಂತರ ಪಂಜಾಬ್ ನ 16 ನೇ ಮುಖ್ಯಮಂತ್ರಿಯಾದ 58 ವರ್ಷದ ಛನ್ನಿ ಸಿಂಗ್ ಅವರನ್ನು ಹೊಗಳಿದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಜನರಿಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ನಾವು ಅವರ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಚರಣ್ ಜಿತ್ ಸಿಂಗ್ ಛನ್ನಿಯನ್ನು ಅಭಿನಂದಿಸಿದರು ಮತ್ತು ಕೇಂದ್ರವು ತನ್ನ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. “ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಚರಣ್ ಜಿತ್ ಸಿಂಗ್ ಚನ್ನಿ ಜೀ ಅವರಿಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಂದ ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿ ಸುಖ್ಜಿಂದರ್ ಸಿಂಗ್ ರಂಧಾವಾ ಮತ್ತು ಒಪಿ ಸೋನಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಛನ್ನಿ ಪಂಜಾಬಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಹುಲ್ ಗಾಂಧಿ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಭಾಗಿಯಾಗಿದ್ದು ಅಮರಿಂದರ್ ಸಿಂಗ್ ಸಮಾರಂಭಕ್ಕೆ ಗೈರಾಗಿದ್ದಾರೆ.

ಇದನ್ನೂ ಓದಿ: Charanjit Singh Channi ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ

(Punjab CM Charanjit Singh Channi Calling himself an aam aadmi says his government is with the farmers)

ತಾಜಾ ಸುದ್ದಿ

Related Stories

Click on your DTH Provider to Add TV9 Kannada