ಪಂಜಾಬ್ ನೂತನ ಮುಖ್ಯಮಂತ್ರಿಗೆ ಪ್ರಧಾನಿ ಅಭಿನಂದನೆ; ಜನರ ಒಳಿತು ನಮ್ಮ ಆದ್ಯತೆಯಾಗಲಿ ಎಂದ ಮೋದಿ
ಚರಣಜಿತ್ ಸಿಂಗ್ ಛನ್ನಿ ಅವರು ಪಂಜಾಬ್ನ ಮೊದಲ ಸಿಖ್ ದಲಿತ ಸಿಎಂ ಆಗಿದ್ದಾರೆ. ಇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳಾದ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಓಂ ಪ್ರಕಾಶ್ ಸೋನಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ದೆಹಲಿ: ಪಂಜಾಬ್ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಪಿಎಂ ಮೋದಿ, ಪಂಜಾಬ್ ಜನತೆಯ ಒಳಿತು, ಅಭಿವೃದ್ಧಿಗಾಗಿ ನಾವು ಅಲ್ಲಿನ ಹೊಸ ಸರ್ಕಾರದೊಂದಿಗೆ ಸೇರಿ ಕೆಲಸ ಮುಂದುವರಿಸುತ್ತೇವೆ ಎಂದಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಗುಜರಾತ್ನಲ್ಲಿ ಮುಖ್ಯಮಂತ್ರಿಯ ಬದಲಾವಣೆ ಮಾಡಿ, ಅಲ್ಲಿ ಹೊಸ ಮುಖ್ಯಮಂತ್ರಿ ನೇಮಕ ಮಾಡಿದೆ. ಪಂಜಾಬ್ನಲ್ಲೂ ಕೂಡ ಕಾಂಗ್ರೆಸ್ ಅದೇ ಮಾರ್ಗ ಅನುಸರಿಸಿದೆ. ಕ್ಯಾ.ಅಮರಿಂದರ್ ಸಿಂಗ್ರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ, ನಿನ್ನೆ ಚರಣಜಿತ್ ಸಿಂಗ್ ಛನ್ನಿ ಅವರನ್ನು ಆಯ್ಕೆ ಮಾಡಿತ್ತು. ಇಂದು ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
Congratulations to Shri Charanjit Singh Channi Ji on being sworn-in as Punjab’s Chief Minister. Will continue to work with the Punjab government for the betterment of the people of Punjab.
— Narendra Modi (@narendramodi) September 20, 2021
ಚರಣಜಿತ್ ಸಿಂಗ್ ಛನ್ನಿ ಅವರು ಪಂಜಾಬ್ನ ಮೊದಲ ಸಿಖ್ ದಲಿತ ಸಿಎಂ ಆಗಿದ್ದಾರೆ. ಇಂದು ಅವರೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳಾದ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಓಂ ಪ್ರಕಾಶ್ ಸೋನಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಪಂಜಾಬ್ನಲ್ಲಿ ಹಿಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಬಹುಕಾಲದ ಜಗಳವೇ ಈ ಸಿಎಂ ಬದಲಾವಣೆಗೆ ಕಾರಣವಾಗಿದೆ. ನಿನ್ನೆ ಚರಣಜಿತ್ ಸಿಂಗ್ ಛನ್ನಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ರಾಹುಲ್ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದರು. ಪಂಜಾಬ್ ಜನರಿಗೆ ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಬೇಕು. ಅವರ ನಂಬಿಕೆ ಉಳಿಸಿಕೊಳ್ಳುವುದು ತುಂಬ ಮಹತ್ವ ಎಂದು ಹೇಳಿದ್ದಾರೆ. ಹಾಗೇ, ಇಂದು ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಹಾಜರಾಗಿದ್ದರು.
Congratulations to Shri Charanjit Singh Channi Ji for the new responsibility.
We must continue to fulfill the promises made to the people of Punjab. Their trust is of paramount importance.
— Rahul Gandhi (@RahulGandhi) September 19, 2021
ಇದನ್ನೂ ಓದಿ: ಕಾಂಗ್ರೆಸ್‌ನ ಚುನಾವಣಾ ತಂತ್ರದ ಬಗ್ಗೆ ದಲಿತರು ಎಚ್ಚರದಿಂದಿರಬೇಕು: ಬಿಎಸ್ಪಿ ನಾಯಕಿ ಮಾಯಾವತಿ
‘ಕತ್ತೆಕಿರುಬಗಳನ್ನು ಎದುರಿಸುತ್ತಿರುವ ಒಂಟಿ ಸಿಂಹ’; ಕೋರ್ಟ್ ಮೆಟ್ಟಿಲು ಹತ್ತಿಬಂದರೂ ಕಂಗನಾ ಸಿನಿಮೀಯ ಡೈಲಾಗ್