AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್‌ನ ಚುನಾವಣಾ ತಂತ್ರದ ಬಗ್ಗೆ ದಲಿತರು ಎಚ್ಚರದಿಂದಿರಬೇಕು: ಬಿಎಸ್​​ಪಿ ನಾಯಕಿ ಮಾಯಾವತಿ

Mayawati: ಕಾಂಗ್ರೆಸ್‌ಗೆ ಇನ್ನೂ ದಲಿತರ ಮೇಲೆ ನಂಬಿಕೆ ಇಲ್ಲ. ದಲಿತರು ಕಾಂಗ್ರೆಸ್​ನ ದ್ವಂದ್ವ ನಿಲುವುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ದಲಿತರು ಈ ತಂತ್ರಕ್ಕೆ ಬೀಳಲಾರರು ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್‌ನ ಚುನಾವಣಾ ತಂತ್ರದ ಬಗ್ಗೆ ದಲಿತರು ಎಚ್ಚರದಿಂದಿರಬೇಕು: ಬಿಎಸ್​​ಪಿ ನಾಯಕಿ ಮಾಯಾವತಿ
ಮಾಯಾವತಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 20, 2021 | 4:04 PM

Share

ಲಕ್ನೊ: ಚರಣ್ ಜಿತ್ ಛನ್ನಿ(Charanjit Singh Channi) ಪಂಜಾಬಿನ ಮೊದಲ ದಲಿತ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಎಸ್​​ಪಿ ಅಧ್ಯಕ್ಷೆ ಮಾಯಾವತಿ (Mayawati) ಸೋಮವಾರ ಕಾಂಗ್ರೆಸ್ ನ “ಚುನಾವಣಾ ತಂತ್ರ” ದ ಬಗ್ಗೆ ದಲಿತರು ಎಚ್ಚರದಿಂದರಬೇಕು ಎಂದು ಹೇಳಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಗೆ ಎಸ್‌ಎಡಿ-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗಲಿಬಿಲಿಗೊಂಡಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಇನ್ನೂ ದಲಿತರ ಮೇಲೆ ನಂಬಿಕೆ ಇಲ್ಲ. ದಲಿತರು ಕಾಂಗ್ರೆಸ್​ನ ದ್ವಂದ್ವ ನಿಲುವುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ದಲಿತರು ಈ ತಂತ್ರಕ್ಕೆ ಬೀಳಲಾರರು ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ ಹೇಳಿದ್ದಾರೆ.

ಬಿಎಸ್‌ಪಿ ಅಧ್ಯಕ್ಷೆ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಯು ದಲಿತರಲ್ಲದ ನಾಯಕನ ನೇತೃತ್ವ ದಲ್ಲಿ ನಡೆಯುತ್ತದೆ. ಛನ್ನಿ ಅವರ ನೇತೃತ್ವದಲ್ಲಿ ಅಲ್ಲ ಎಂದು ತಿಳಿದುಬಂದಿದೆ. ವಾಸ್ತವವೆಂದರೆ ಕಾಂಗ್ರೆಸ್ ಹಾಗೂ ಇತರ ರಾಜಕೀಯ ಪಕ್ಷಗಳು ಬಿಕ್ಕಟ್ಟಿನ ಸಮಯದಲ್ಲಿ ಮಾತ್ರ ದಲಿತರ ಬಗ್ಗೆ ಯೋಚಿಸುತ್ತವೆ, ಛನ್ನಿಯನ್ನು ಮುಖ್ಯಮಂತ್ರಿ ಮಾಡಿರುವುಕಾಂಗ್ರೆಸ್ ನ ಚುನಾವಣಾ ತಂತ್ರ ಎಂದು ಅವರು ಆರೋಪಿಸಿದರು. ಛನ್ನಿ ಸೋಮವಾರ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಪಂಜಾಬ್‌ನ ಮಾಲ್ವಾ ಪಟ್ಟಿಯ ರೂಪನಗರ ಜಿಲ್ಲೆಯವರಾದ ಛನ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಕಾಂಗ್ರೆಸ್ ನಿರ್ಧಾರವು ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ರಾಜ್ಯದ ಶೇಕಡಾ 32 ರಷ್ಟು ಜನಸಂಖ್ಯೆಯು ದಲಿತರನ್ನು ಒಳಗೊಂಡಿದೆ. ಬಿಎಸ್‌ಪಿ ಮತ್ತು ಎಸ್‌ಎಡಿ ಜೂನ್ ನಲ್ಲಿ 2022 ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿವೆ.

ಇದನ್ನೂ ಓದಿ: Charanjit Singh Channi ನಾನೊಬ್ಬ ಸಾಮಾನ್ಯ ಮನುಷ್ಯ, ರೈತರ ಹೋರಾಟಕ್ಕೆ ಸರ್ಕಾರದ ಬೆಂಬಲವಿದೆ: ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಛನ್ನಿ

ಇದನ್ನೂ ಓದಿ: Charanjit Singh Channi ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್ ಛನ್ನಿ ಪ್ರಮಾಣ ವಚನ ಸ್ವೀಕಾರ

(BSP president Mayawati says Dalits to be wary of the Congress election stunt)