AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕತ್ತೆಕಿರುಬಗಳನ್ನು ಎದುರಿಸುತ್ತಿರುವ ಒಂಟಿ ಸಿಂಹ’; ಕೋರ್ಟ್​​ ಮೆಟ್ಟಿಲು ಹತ್ತಿಬಂದರೂ ಕಂಗನಾ ಸಿನಿಮೀಯ ಡೈಲಾಗ್​

ಜಾವೇದ್​ ಅಖ್ತರ್​ ದಾಖಲಿಸಿದ ಮಾನಹಾನಿ ಪ್ರಕರಣದಲ್ಲಿ ವಿಚಾರಣೆ ಎದುರಿಸಿ ಬಂದ ಬಳಿಕ ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ಇಂಥ ಸಂದರ್ಭದಲ್ಲೂ ಸಿನಿಮೀಯ ಡೈಲಾಗ್​ ಹೊಡೆಯುವುದನ್ನು ಅವರು ತಪ್ಪಿಸಿಲ್ಲ.

‘ಕತ್ತೆಕಿರುಬಗಳನ್ನು ಎದುರಿಸುತ್ತಿರುವ ಒಂಟಿ ಸಿಂಹ’; ಕೋರ್ಟ್​​ ಮೆಟ್ಟಿಲು ಹತ್ತಿಬಂದರೂ ಕಂಗನಾ ಸಿನಿಮೀಯ ಡೈಲಾಗ್​
ಕಂಗನಾ ರಣಾವತ್
TV9 Web
| Updated By: ಮದನ್​ ಕುಮಾರ್​|

Updated on: Sep 20, 2021 | 3:59 PM

Share

ನಟಿ ಕಂಗನಾ ರಣಾವತ್​ ವಿರುದ್ಧ ಕವಿ, ಚಿತ್ರಸಾಹಿತಿ ಜಾವೇದ್​ ಅಖ್ತರ್​ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆದಿದೆ. ಸೋಮವಾರ (ಸೆ.20) ಅಂಧೇರಿ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಕಂಗನಾ ಹಾಜರಾದರು. ಒಂದು ವೇಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಅರೆಸ್ಟ್​ ವಾರೆಂಟ್​ ಜಾರಿ ಮಾಡಲಾಗುವುದು ಎಂದು ಈ ಹಿಂದೆ ಕಂಗನಾಗೆ ಕೋರ್ಟ್​ ಎಚ್ಚರಿಕೆ ನೀಡಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯಕ್ಕೆ ಬರುವುದು ನಟಿಗೆ ಅನಿವಾರ್ಯ ಆಗಿತ್ತು. ಕೋರ್ಟ್​ ಹಾಜರಾಗುವುದಕ್ಕೂ ಮುನ್ನ ಜಾವೇದ್​ ಅಖ್ತರ್​ ವಿರುದ್ಧ ಕಂಗನಾ ಪ್ರತಿದೂರು ಸಲ್ಲಿಸಿದ್ದಾರೆ. ತಮಗೆ ಜಾವೇದ್​ ಅಖ್ತರ್​ ಬೆದರಿಕೆ ಹಾಕಿದ್ದಾರೆ ಎಂದು ಈ ದೂರಿನಲ್ಲಿ ಕಂಗನಾ ಆರೋಪಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ನಿಧನದ ಬಳಿಕ ಮಾಧ್ಯಮವೊಂದರ ಜೊತೆ ಮಾತನಾಡುವಾಗ ಕಂಗನಾ ಅವರು ಜಾವೇದ್​ ಅಖ್ತರ್​ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ ಮಾನಹಾನಿ ಆಗುವ ರೀತಿಯಲ್ಲಿ ತಮ್ಮ ಬಗ್ಗೆ ಕಂಗನಾ ಮಾತನಾಡಿದ್ದರು ಎಂದು ಜಾವೇದ್​ ಅಖ್ತರ್​ ದೂರು ನೀಡಿದ್ದರು. ಈ ಕೇಸ್​ನ ವಿಚಾರಣೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕಂಗನಾ ಮನವಿ ಸಲ್ಲಿಸಿದ್ದಾರೆ. ಈಗ ವಿಚಾರಣೆ ನಡೆಸುತ್ತಿರುವ ಕೋರ್ಟ್​ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ!​

ಕೋರ್ಟ್​ಗೆ​ ಹೋಗಿ ಬಂದ ಬಳಿಕ ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ಇಂಥ ಸಂದರ್ಭದಲ್ಲೂ ಅವರು ಸಿನಿಮೀಯ ಡೈಲಾಗ್​ ಹೊಡೆಯುವುದನ್ನು ತಪ್ಪಿಸಿಲ್ಲ. ‘ನಿಮ್ಮನ್ನು ಬೆಳೆಸಲು ಯಾರಿಗೆ ಸಾಧ್ಯವಿಲ್ಲವೋ ಅವರಿಗೆ ನಿಮ್ಮನ್ನು ನಾಶ ಮಾಡಲು ಕೂಡ ಸಾಧ್ಯವಿಲ್ಲ. ಶಿವ ಸೇನಾ ಒತ್ತಡದಿಂದ ಜಾವೇದ್​ ಅಖ್ತರ್​ ದಾಖಲಿಸಿರುವ ಕೇಸ್​ನ ವಿಚಾರಣೆ ಇಂದು ನಡೆಯಿತು. ಕತ್ತೆಕಿರುಬಗಳನ್ನು ಸಿಂಹದ ರೀತಿ ಎದುರಿಸುತ್ತಿದ್ದೇನೆ. ಅದು ಕೂಡ ಸ್ಟೈಲ್​ನಲ್ಲಿ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕಂಗನಾ ವಿರುದ್ಧ ಹಲವು ಕಡೆಗಳಲ್ಲಿ ಬೇರೆ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಸ್​ ದಾಖಲಾಗಿವೆ. ಹಾಗಾಗಿ ಅವರ ಪಾಸ್​ಪೋರ್ಟ್​ ನವೀಕರಣಗೊಳ್ಳುತ್ತಿಲ್ಲ. ಈ ಸಂಬಂಧ ಅವರು ಬಾಂಬೆ ಹೈಕೋರ್ಟ್​ಗೆ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅವರಿಗೆ ಹಿನ್ನಡೆ ಆಯಿತು. ಕಂಗನಾ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಹೀಗಾಗಿ, ಅರ್ಜಿಯನ್ನು ತಕ್ಷಣಕ್ಕೆ ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಬಾಂಬೇ ಹೈಕೋರ್ಟ್​ ಹೇಳಿದೆ. ಇದರಿಂದ ಕಂಗನಾಗೆ ತೀವ್ರ ಹಿನ್ನಡೆ ಉಂಟಾಗಿದೆ.

ಇದನ್ನೂ ಓದಿ:

ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​

ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್​ ಚಿತ್ರ ಗಳಿಸಿದ್ದೆಷ್ಟು?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!